Wednesday, 21 April 2021

ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ


ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೋಳಿ ಸಾಕಣೆದಾರರೊಬ್ಬರು ತಮ್ಮ ಫಾರಂನಲ್ಲಿ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಂಪನಿಯೊಂದರ ಆಹಾರ ಸೇವಿಸಿದ ನಂತರ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಇದೇ ರೀತಿ ಇನ್ನೂ ನಾಲ್ಕು ಕೋಳಿ ಸಾಕಣೆದಾರರಿಗೆ ಸಮಸ್ಯೆಯಾಗಿರುವುದು ಬಯಲಾಗಿದೆ.

ಅಹಮದ್‌ನಗರ ಜಿಲ್ಲೆಯಲ್ಲಿರುವ ಕಂಪನಿಯೊಂದರ ಆಹಾರ ನೀಡಿದ ಬಳಿಕ ಕೋಳಿಗಳು ಮೊಟ್ಟೆ ಇರಿಸುತ್ತಿಲ್ಲ ಎನ್ನುವುದು ಪೊಲೀಸರಿಗೆ ಖಾತ್ರಿಯಾಗಿದೆ. ಕಂಪನಿಯ ಮಾಲೀಕರನ್ನು ಕರೆಸಿ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದು, ತಪ್ಪನ್ನು ಒಪ್ಪಿಕೊಂಡ ಮಾಲೀಕ, ಪೌಲ್ಟ್ರಿ ಫಾರಂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.


SHARE THIS

Author:

0 التعليقات: