Sunday, 18 April 2021

ಸೆಕ್ಯುಲರ್ ಯೂತ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ


 ಸೆಕ್ಯುಲರ್ ಯೂತ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು : ಸೆಕ್ಯೂಲರ್ ಯೂತ್ ಫಾರಂ ( SYF ) ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ಪ್ರಥಮ ಹಂತದ ಇನ್ನೂರರಷ್ಟು ರಂಝಾನ್ ಕಿಟ್ ವಿತರಿಸಲಾಯಿತು.

ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ರಂಝಾನ್ ಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಪುತ್ತೂರು ಅನ್ಸಾರಿಯ್ಯಾ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ ಎಲ್.ಟಿ ರಝಾಕ್ ಹಾಜಿಯವರು SYF ನ ಮೋನು ಬಪ್ಪಳಿಗೆಯವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.

ಸೀಮಿತ ಅವಧಿಯಲ್ಲಿ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಸೆಕ್ಯೂಲರ್ ಯೂತ್ ಫಾರಂ ಸಂಘಟನೆಯು ಸಮುದಾಯದ ಭರವಸೆಯ ಬೆಳಕಾಗಿ ಮೂಡಿ ಬಂದಿದೆ. ಇದಕ್ಕೆ ಸಹಕರಿಸಿದ ಸರ್ವರಿಗೂ ಒಳಿತಾಗಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ರಿಯಾಝ್ ಬಲ್ನಾಡ್,  ಮೋನು ಬಪ್ಪಳಿಗೆ, ಹಂಝತ್ ಸಾಲ್ಮರ, ರಝಾಕ್ , ಶಕೀಲ್ ಕೂರ್ನಡ್ಕ, ರಹ್ಮಾನ್ ಸಂಪ್ಯ, ಅಲಿ ಪರ್ಲಡ್ಕ, ಸಿದ್ದೀಕ್ ಸುಲ್ತಾನ್, ಇಮ್ತಿಯಾಝ್, ರಶೀದ್ ಮುರ, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ಫಾರೂಕು, ಜಾಬಿರ್ ಬೀಟಿಗೆ, ಇರ್ಫಾನ್ ಸಾಲ್ಮರ, ಹಾರಿಸ್ ಅಡ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾತಿಶ್ ಅಳಕೆಮಜಲು ಸ್ವಾಗತಿಸಿ, ಹನೀಫ್ ಪುಣ್ಚತ್ತಾರು ಧನ್ಯವಾದ ಸಲ್ಲಿಸಿದರು.


SHARE THIS

Author:

0 التعليقات: