Tuesday, 6 April 2021

ಸಿಆರ್‌ಪಿಎಫ್ ಯೋಧನ ಬಿಡುಗಡೆಗೆ ಸಂಧಾನಕಾರನ ಹೆಸರಿಸಿ: ನಕ್ಸಲ್ ಬೇಡಿಕೆ


ಸಿಆರ್‌ಪಿಎಫ್ ಯೋಧನ ಬಿಡುಗಡೆಗೆ ಸಂಧಾನಕಾರನ ಹೆಸರಿಸಿ: ನಕ್ಸಲ್ ಬೇಡಿಕೆ

ಸರಕಾರ ಮೊದಲ ಸಂಧಾನಕಾರರ ಹೆಸರು ಘೋಷಿಸಲಿ. ಅನಂತರು ನಾವು ಅವರನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎಂದು ಹೇಳಿಕೆ ತಿಳಿಸಿದೆ.

ರಾಯಪುರ: ಬಸ್ತಾರ್‌ನಲ್ಲಿ 22 ಯೋಧರ ಸಾವಿಗೆ ಕಾರಣವಾದ ಮಾವೋವಾದಿಗಳ ಮಾರಕ ಹೊಂಚು ದಾಳಿ ನಡೆದ ನಾಲ್ಕು ದಿನಗಳ ಬಳಿಕ ನಿಷೇಧಿತ ಸಿಪಿಐ (ಮಾವೋವಾದಿ) ಮಹಿಳೆ ಸೇರಿದಂತೆ ತಮ್ಮ ಐವರು ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ದೃಢಪಡಿಸಿದೆ ಎಂದು Times of India ವರದಿ ಮಾಡಿದೆ.

ಚತ್ತೀಸ್‌ಗಢದ ಬಸ್ತಾರ್ ಬುಡಕಟ್ಟು ವಲಯದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಸಂದರ್ಭ ಒತ್ತೆಸೆರೆಯಾದ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೊ ಬಿಡುಗಡೆಗೆ ಸಂಧಾನ ನಡೆಸಲು ಸಂಧಾನಕಾರರ ಹೆಸರು ಘೋಷಿಸಬೇಕು ಎಂದು ಮಾವೋವಾದಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.

 ತಮ್ಮ ಮೃತ ಕಾಮ್ರೆಡ್‌ಗಳ ಭಾವಾಚಿತ್ರವನ್ನು ಬಿಡುಗಡೆ ಮಾಡಿರುವ ಹಾಗೂ ಅವರ ಹೆಸರನ್ನು ಬಹಿರಂಗಗೊಳಿಸಿರುವ ಸಿಪಿಐ (ಮಾವೋವಾದಿ) ದಂಡಕಾರಣ್ಯ ವಿಶೇಷ ವಲಯ ಸಮಿತಿಯ ವಕ್ತಾರ ವಿಕಲ್ಪ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಬಸ್ತಾರ್ ವಿಭಾಗದ ಕಿಸ್ತರಾಮ್ ಪ್ರದೇಶದ ಕಂಪೆನಿ 1ರ ತಮ್ಮ ಮಹಿಳಾ ಕಾಮ್ರೆಡ್ ಒಡಿ ಸನ್ನಿ ಅವರ ಮೃತದೇಹವನ್ನು ಕೊಂಡೊಯ್ದಿಲ್ಲ ಎಂದು ಮಾವೋವಾದಿಗಳು ದೃಢಪಡಿಸಿದ್ದಾರೆ. ಸಾವನ್ನಪ್ಪಿದ ಇತರರನ್ನು ನಪೊ ಸುರೇಶ್, ಕವಾಸಿ ಬದ್ರು, ಪದಮ್ ಲಖ್ಮಾ ಹಾಗೂ ಮಾಂಡ್ವಿ ಸುಕ್ಕಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎನ್‌ಕೌಂಟರ್ ಸಂದರ್ಭ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸೆರೆ ಹಿಡಿದಿರುವುದನ್ನು ದೃಢಪಡಿಸಿರುವ ಮಾವೋವಾದಿಗಳು, ಅವರು ಕೈದಿಯಾಗಿ ನಮ್ಮ ವಶದಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.


 SHARE THIS

Author:

0 التعليقات: