Saturday, 17 April 2021

ಶ್ವಾನಗಳಿಂದ ಕೋವಿಡ್‌ ಸೋಂಕು ನಿಖರ ಪತ್ತೆ!


ಶ್ವಾನಗಳಿಂದ ಕೋವಿಡ್‌ ಸೋಂಕು ನಿಖರ ಪತ್ತೆ!

ಕೊರೊನಾ ಸೋಂಕು ಆರಂಭವಾದಾಗಿನಿಂದಲೂ ಇಂಥಹದ್ದೊಂದು ಚರ್ಚೆ, ಅಧ್ಯಯನಗಳು ನಡೆಯುತ್ತಲೇ ಇದೆ.

ಶ್ವಾನಗಳು ಕೊರೊನಾ ಸೋಂಕನ್ನು ನಿಖರವಾಗಿ ಪತ್ತೆ ಹಚ್ಚಬಲ್ಲದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಶ್ವಾನಗಳು ಅಪಾರ ಗ್ರಹಣ ಶಕ್ತಿ ಸಾಮರ್ಥ್ಯ ಹೊಂದಿವೆ ಎಂಬ ವಿಷಯ ಹೊಸತೇನಲ್ಲಾದರೆ ವಿಶೇಷವೆಂದರೆ ಇದೀಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕನ್ನು ಶ್ವಾನಗಳು ಅತ್ಯಂತ ನಿಖರವಾಗಿ ಗುರುತಿಸಬಲ್ಲವು. ಈ ಪ್ರಮಾಣ ಶೇ.96ರಷ್ಟು ನಿಖರವಾಗಿ ಇರಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಪೆಲ್ಸಿಲ್‌ವೇನಿಯಾ ವಿಶ್ವವಿದ್ಯಾಲಯದ ಪಶು ಔಷಧ ಶಾಲೆಯ ತಜ್ಞರ ತಂಡವೊಂದು ಈ ಕುರಿತು ಸುದೀರ್ಘ ಅಧ್ಯಯನ ನಡೆಸಿ ವರದಿಯೊಂದನ್ನು ಪ್ಲೋಸ್ ಒನ್ ಎಂಬ ಮ್ಯಾಗಜೈನ್‌ನಲ್ಲಿ ಪ್ರಕಟಿಸಿದೆ. 


SHARE THIS

Author:

0 التعليقات: