Saturday, 24 April 2021

ಕೊರೋನ ಸೋಂಕಿನಿಂದ ಕುಮಾರಸ್ವಾಮಿ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ


 ಕೊರೋನ ಸೋಂಕಿನಿಂದ ಕುಮಾರಸ್ವಾಮಿ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು, ಎ.24: ಕೊರೋನ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ''ನಿಮ್ಮೆಲ್ಲರ ಪ್ರೀತಿ, ಅಕ್ಕರೆ, ಪ್ರಾರ್ಥನೆಯ ಫಲವಾಗಿ ನಾನು ಇಂದು ಕೊರೋನ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನನ್ನ ಪ್ರಣಾಮಗಳು. ಇನ್ನೂ ಎರಡು ವಾರಗಳ ಕಾಲ ವೈದ್ಯರ ಸಲಹೆ ಮೇರೆಗೆ ಸಾರ್ವಜನಿಕರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ದಯಮಾಡಿ ಸಹಕರಿಸಿ. ನಿಮ್ಮ ಪ್ರೀತಿಯ ಋಣಭಾರ ನನ್ನ ಮೇಲೆ ಸದಾ ಹೀಗೆ ಇರಲಿ'' ಎಂದು ತಿಳಿಸಿದ್ದಾರೆ.


SHARE THIS

Author:

0 التعليقات: