Thursday, 15 April 2021

ದಿಲ್ಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ: ಅರವಿಂದ ಕೇಜ್ರಿವಾಲ್


 ದಿಲ್ಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ: ಅರವಿಂದ ಕೇಜ್ರಿವಾಲ್

ಹೊಸದಿಲ್ಲಿ:  ಕಳೆದ ಕೆಲವು ವಾರಗಳಿಂದ ಕೋವಿಡ್ ಪ್ರಕರಣಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಕೋವಿಡ್ ಸೋಂಕು ಹರಡುವುದನ್ನು ತಡೆಯಲು ದಿಲ್ಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ವಿಧಿಸಲಾಗುವುದು. ವಿವಾಹಗಳಂತಹ ಅಗತ್ಯಗತ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

ಸಭಾಂಗಣಗಳು, ಸ್ಪಾಗಳು, ಮಾಲ್ ಗಳು ಹಾಗೂ ಜಿಮ್ ಗಳನ್ನು ಸದ್ಯ ಮುಚ್ಚಲಾಗುವುದು. ಮೂರನೇ ಒಂದು ಭಾಗದಷ್ಟು ಸಾಮಥ್ರ್ಯದೊಂದಿಗೆ ಚಿತ್ರಮಂದಿರ ತೆರೆಯಲು ಅನುಮತಿಸಲಾಗುವುದು.  ಹೊರಗಡೆ ಸೇವನೆಯನ್ನು ನಿಷೇಧಿಸಲಾಗಿದ್ದು, ಮನೆಗೆ ಆಹಾರ ಸರಬರಾಜಿಗೆ ಅವಕಾಶವಿದೆ. ವಾರದ ಸಂತೆಗೆ ನಿರ್ಬಂಧದೊಂದಿಗೆ ಅವಕಾಶ ನೀಡಲಾಗುವುದು  ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. 

ಈ ನಿರ್ಬಂಧಗಳು ಜನರಿಗಾಗಿ. ನಿಮ್ಮ ಕುಟುಂಬಗಳಿಗಾಗಿ. ಇದರಿಂದ ಅನಾನುಕೂಲವಾಗಲಿದೆ. ಆದರೆ ಕೋವಿಡ್ ಪ್ರಸರಣ ಸರಪಳಿಯನ್ನು ಮುರಿಯಲು ಈ ನಿರ್ಬಂಧಗಳು ಅವಶ್ಯಕ. ಭಯಪಡಬೇಡಿ. ಎಲ್ಲ ಅಗತ್ಯ ಸೇವೆಗಳು ವಾರಾಂತ್ಯದಲ್ಲಿ ಲಭ್ಯವಿರುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿ ವಿವಿಧ ನಿರ್ಬಂಧಗಳ ಬಗ್ಗೆ ಚರ್ಚಿಸಿದ್ದಾರೆ.

ದಿಲ್ಲಿಯಲ್ಲಿ ಬುಧವಾರ ಹೊಸತಾಗಿ 17,282 ಕೋವಿಡ್-19  ಪ್ರಕರಣಗಳು ದಾಖಲಾಗಿದ್ದು, ಇದು ಸಾಂಕ್ರಾಮಿಕ ರೋಗ ಭುಗಿಲೆದ್ದ ಬಳಿಕ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣವಾಗಿದೆ.


SHARE THIS

Author:

0 التعليقات: