Sunday, 4 April 2021

"ಆರೋಪಿಯನ್ನು ತಿರುಗಾಡಲು ಬಿಟ್ಟು, ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಾರೆ"


 "ಆರೋಪಿಯನ್ನು ತಿರುಗಾಡಲು ಬಿಟ್ಟು, ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಾರೆ"

ಬೆಂಗಳೂರು: ಸಂತ್ರಸ್ತ ಯುವತಿ ಪೊಲೀಸ್ ಆಯುಕ್ತರಿಗೆ ಎಸ್‍ಐಟಿ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಕೆ.ಎನ್.ಜಗದೀಶ್ ಅವರು, ಆಕೆ ಸತ್ಯವನ್ನೇ ಹೇಳಿದ್ದಾರೆ ಎಂದಿದ್ದಾರೆ.

ಪೊಲೀಸರು ಯುವತಿಗೆ ವಿಚಾರಣೆಯ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟು ಹೆಚ್ಚುಕಮ್ಮಿ ಆಗುವಂತೆ ಮಾಡುವ ಉದ್ದೇಶವೇನಾದರೂ ಇದೆಯೇ ಎಂಬುದು ಗೊತ್ತಿಲ್ಲ? ಅತ್ಯಾಚಾರದ ಆರೋಪಿಯನ್ನು ಸ್ವತಂತ್ರವಾಗಿ ತಿರುಗಾಡಲು ಬಿಟ್ಟಿದ್ದಾರೆ.

ದೂರುದಾರಳನ್ನು ನಿರಂತರವಾಗಿ ವಿಚಾರಣೆ ಮಾಡುತ್ತಿದ್ದಾರೆ. ರಾಜ್ಯಾಂಗದ ಮುಖ್ಯಸ್ಥರಾಗಿರುವ ಯಡಿಯೂರಪ್ಪನವರೇ ರಮೇಶ್ ಜಾರಕಿಹೊಳಿ ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆಂದು ಹೇಳಿಕೆ ನೀಡುತ್ತಿದ್ದರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡವನಿಗೆ ಒಂದು ನ್ಯಾಯ. ಪ್ರಭಾವಿಗೆ ಒಂದು ನ್ಯಾಯ ಎಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಎಸ್‍ಐಟಿ ಅಕಾರಿಗಳು ಹೆಣ್ಣುಮಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕು. ನಿಷ್ಪಕ್ಷಪಾತ ತನಿಖೆಗಾಗಿ ಹೈಕೋರ್ಟ್ ಮೇಲುಸ್ತುವಾರಿ ಆಗಬೇಕೆಂದು ಒತ್ತಾಯಿಸಿದ್ದಾರೆ.

ಯುವತಿ ನಗರ ಪೊಲೀಸ್ ಆಯುಕ್ತರಿಗೆ ಬರೆದಿರುವ ದೂರಿನ ಪ್ರತಿಯನ್ನು ಇಮೇಲ್ ಮೂಲಕ ಈಗಾಗಲೇ ಕಳುಹಿಸಿದ್ದೇವೆ. ನಾಳೆ ಖುದ್ದಾಗಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಹಸ್ತಾಂತರ ಮಾಡುತ್ತೇನೆ ಎಂದು ಜಗದೀಶ್ ತಿಳಿಸಿದ್ದಾರೆ.


SHARE THIS

Author:

0 التعليقات: