Tuesday, 13 April 2021

ಮಸ್ಜಿದ್ ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಖಾಝಿ ಝೈನುಲ್ ಉಲಮ ಮಾಣಿ ಉಸ್ತಾದ್ ಕರೆ


ಮಸ್ಜಿದ್ ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: 
ಖಾಝಿ ಝೈನುಲ್ ಉಲಮ ಮಾಣಿ ಉಸ್ತಾದ್ ಕರೆ

ಮಂಗಳೂರು: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಆರಾಧನಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗನಿರ್ದೇಶನಗಳನ್ನು ಬಿಡುಗಡೆಗೊಳಿಸಿದೆ. ಮಸ್ಜಿದ್'ಗಳಲ್ಲಿ ಈ ಮಾರ್ಗಸೂಚಿಗಳನ್ನು, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಖಾಝಿ ಝೈನುಲ್ ಉಲಮ ಮಾಣಿ ಉಸ್ತಾದ್ ಕರೆ ನೀಡಿದ್ದಾರೆ.

ಮಾಸ್ಕ್ ಧರಿಸುವುದು, ಸ್ವಂತ ನಮಾಝ್ ಹಾಸುಗಳ ಬಳಕೆ, ವುಝೂ - ಶೌಚ್ಯಗಳಿಗಾಗಿ ಸಾಧ್ಯವಾದಷ್ಟು ಮನೆಯನ್ನೇ ಆಶ್ರಯಿಸುವುದು, ಸುರಕ್ಷಿತ ಅಂತರ ಕಾಪಾಡುವುದು, ಹಸ್ತಲಾಘವವನ್ನು ಉಪೇಕ್ಷಿಸುವುದು ಮುಂತಾದ ಜಾಗ್ರತೆಗಳನ್ನು ಪಾಲಿಸಬೇಕು. ಜೊತೆಗೆ ಮಸೀದಿಗಳಲ್ಲಿ ಜುಮಾ, ಜಮಾಅತ್ ನಮಾಝ್ ಮತ್ತು ಅನುಬಂಧಿತ ಆರಾಧನೆಗಳನ್ನು ಚುಟುಕಾಗಿ ನಿರ್ವಹಿಸಿ ಮಸ್ಜಿದಿಗೆ ಬಂದವರು ವಿಳಂಬರಹಿತವಾಗಿ ಮರಳಲು ಅನುವು ಮಾಡಿಕೊಡಬೇಕೆಂದು ಖಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅದೇರೀತಿ ಮುಂದಿನ ಜುಮಾ ದಿನ ರೋಗಮುಕ್ತಿಗಾಗಿ ಪ್ರತ್ಯೇಕ ಪ್ರಾರ್ಥನೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.



SHARE THIS

Author:

0 التعليقات: