Monday, 5 April 2021

ಬಿಜೆಪಿಯಲ್ಲಿ ವಂಶಾಡಳಿತವಿಲ್ಲ, ಬಿಎಸ್‌ವೈ ಬಿಜೆಪಿಗೆ ಮಾಲಕರಲ್ಲ : ಸಿ.ಟಿ. ರವಿ


ಬಿಜೆಪಿಯಲ್ಲಿ ವಂಶಾಡಳಿತವಿಲ್ಲ, ಬಿಎಸ್‌ವೈ ಬಿಜೆಪಿಗೆ ಮಾಲಕರಲ್ಲ : ಸಿ.ಟಿ. ರವಿ

ಬೆಂಗಳೂರು: ಸಿಎಂ ಯಡಿಯೂರಪ್ಪ ಬಿಜೆಪಿಯ ಮಾಲಕರಲ್ಲ. ಅವರು ನಮ್ಮ ಪಕ್ಷದ ನಾಯಕರು. ಬಿಜೆಪಿಗೆ ಕಾರ್ಯಕರ್ತರೇ ಮಾಲಕರು, ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಉತ್ತರಾಧಿಕಾರ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಎಲ್ಲ ಪಕ್ಷಗಳಲ್ಲೂ ಕುಟುಂಬ ಮಾಲಕತ್ವ ಇದೆ. ಆದರೆ ಬಿಜೆಪಿಯಲ್ಲಿ ಅಂಥ ಪ್ರವೃತ್ತಿ ಇಲ್ಲ, ಇಲ್ಲಿ ನಿರ್ಣಯಗಳನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಬಿಜೆಪಿಗೆ ಮೋದಿ, ಅಮಿತ್‌ ಶಾ, ಯಡಿಯೂರಪ್ಪ ನಾಯಕರು, ಕಾರ್ಯಕರ್ತರು ಮಾಲಕರು. ನಾಯಕರ ಮಕ್ಕಳಿಗೆ ಹುದ್ದೆ ನೀಡಬೇಕಾದರೆ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದರು.SHARE THIS

Author:

0 التعليقات: