Thursday, 15 April 2021

ಪಿಎಂ ಕೇರ್ ನಿಧಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿ ಪ್ರಶ್ನೆ


 ಪಿಎಂ ಕೇರ್ ನಿಧಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿ ಪ್ರಶ್ನೆ

ನವದೆಹಲಿ; ಪಿಎಂ ಕೇರ್ ನಿಧಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಪ್ರಶ್ನೆ ಎತ್ತಿದ್ದು, ಕೊರೊನಾ ನಿರ್ವಹಣೆಯ ಲೋಪಗಳ ಪಟ್ಟಿ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರಿಯಾದ ಪರೀಕ್ಷೆ ಆಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್, ಆಯಕ್ಸಿಜನ್ ಇಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಕೂಡ ಸಮರ್ಪಕವಾಗಿಲ್ಲ. ಆದರೆ, ಸೋಂಕು ಹೆಚ್ಚಾಗುತ್ತಿರುವುದಕ್ಕೆ ಸರ್ಕಾರ ಹಬ್ಬಗಳ ನೆಪ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಸ್ಥಾಪಿಸಲಾಗಿದ್ದ ಪ್ರಧಾನಮಂತ್ರಿಯವರ ನಿಧಿ ಏನಾಗಿದೆ ಎಂದು ರಾಹುಲ್‍ಗಾಂಧಿ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಕೊರೊನಾ ಅಟ್ಟಹಾಸ ತೀವ್ರಗೊಂಡಿದ್ದು, ಸೋಂಕಿನ ಪ್ರಮಾಣ 2ಲಕ್ಷ ದಾಟಿದೆ. ಎಲ್ಲೆಡೆ ಆಹಾಕಾರ ಆತಂಕ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.


SHARE THIS

Author:

0 التعليقات: