ಮಡಿಕೇರಿ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿ; ಮೂವರು ಸಜೀವ ದಹನ
ಮಡಿಕೇರಿ : ದುಷ್ಕರ್ಮಿಯೋರ್ವ ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ವಿರಾಜಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಪಣಿಎರವರ ಸೀತೆ (45), ಬೇಬಿ (40) ಹಾಗೂ ಪ್ರಾರ್ಥನಾ (6) ಎಂದು ಗುರುತಿಸಲಾಗಿದೆ. ಎರವರ ಬೋಜ ಎಂಬಾತ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ದುಷ್ಕೃತ್ಯ ನಡೆಸಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ ಎಂಬವರ ಮನೆಯಲ್ಲಿ ಎರವರ ಮಂಜು ವಾಸವಿದ್ದರು. ಇವರ ಮನೆಗೆ ಕುಟುಂಬದ 5-6 ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ಮಂಜು ಅವರ ತಂದೆ ಬೋಜ ಪಾನಮತ್ತನಾಗಿ ನಿದ್ರಿಸುತ್ತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಏನೂ ಮಾಡಲಾಗದೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿದ ಆರು ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
0 التعليقات: