Sunday, 4 April 2021

ಮಾರ್ಧನಿಸುತ್ತಿದೆ " ಪೊನ್ನು ಮುಸ್ತಫಾ "ಎಂಬ ಪವಿತ್ರ ನುಡಿ


ಮಾರ್ಧನಿಸುತ್ತಿದೆ " ಪೊನ್ನು ಮುಸ್ತಫಾ "ಎಂಬ  ಪವಿತ್ರ ನುಡಿ 

    ಅಂದು ಆ ಮಗು ಒಂದು ದರ್ಸಿಗೆ ಸೇರಿತು. ಉಸ್ತಾದರು ಕೇಳಿದರು "ಮಗೂ.... ನೀನೇಕೆ ಇಲ್ಲಿಗೆ ಕಲಿಯಲು ಬಂದೆ?  ಮಗು ಹೇಳಿತು " ನನಗೆ ಗೊತ್ತಿಲ್ಲ ಉಸ್ತಾದ್ , ನನ್ನ ತಂದೆ ಹೇಳಿದ್ದರಿಂದ ನಾನು ಬಂದೆ". ಉಸ್ತಾದ್ ಆಗಲೇ ತನ್ನ ಶಿಷ್ಯನನ್ನು ತಿದ್ದಿದರು."ಮಗೂ.. ಹಾಗೆ ಹೇಳಬಾರದು,ನನ್ನ ಪ್ರಭುವಾದ ಅಲ್ಲಾಹನನ್ನು ತಿಳಿಯಲು ಮತ್ತು ಕಲಿಯಲುಬೇಕಾಗಿ ನಾನು  ಬಂದೆ ಎಂದು ಹೇಳಬೇಕು, ಅಲ್ಲಾಹನು ನಮ್ಮ ಮನಸ್ಸನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ" ಉಸ್ತಾದರ ಮಾತು ಶಿಷ್ಯನ ಹೃದಯಕ್ಕೆ ನಾಟಿತು. ಯಾವುದೇ ವಿಷಯದಲ್ಲೂ ಇಖ್ ಲಾಸ್ ಬೇಕು ಎಂಬುದನ್ನು ಆ ದಿನ ಮೊಳಕೆಯೊಡೆಯುವ ಮನಸ್ಸಿಗೆ ತಿಳಿಯಿತು.ಇದನ್ನ ಕಲಿತ ನಂತರ ಮರಣದವರೆಗೂ ಆ ಮಗು ಯಾವುದೇ ಸೇವೆಯನ್ನು ಇಖ್ ಲಾಸಿನಿಂದಲೇ ಮಾಡುತ್ತಿತ್ತು. ಆ ಮಗುವೇ.. ನಮ್ಮ ಶೈಖುನಾ ತಾಜುಶ್ಶರೀಅ ಅಲಿ ಕುಂಞಿ ಉಸ್ತಾದ್.

        ಲೋಕವು ಅನಾಥವಾಗುತ್ತಿದೆ ನಾವು ದಿನಕಳೆದಂತೆ ಒಂದೊಂದು ವಿದ್ವತ್ತು ಜಗತ್ತಿನ ಶೋಭೆಯಾದ ವಿದ್ವಾಂಸರನ್ನು  ಕಳೆದುಕೊಳ್ಳುತ್ತಿದ್ದೇವೆ. ಕಳಂಕ ವಿರುವ ಹೃದಯಕ್ಕೆ ಅಲ್ಲಾಹನ ನೂರನ್ನು ಹಾಕಿ ಕೊಟ್ಟು ನಮ್ಮನ್ನು ಸರಿ ದಾರಿಗೆ ತರುವವರೇ ಉಲಮಾಗಳು. ಅವರೇ ನಮ್ಮನ್ನಗಲಿದರೆ ನಮನ್ನು ಸರಿ ದಾರಿಗೆ ತರುವವರಾದರೂ ಯಾರು?

    ಶೈಖುನಾ ತಾಜುಶ್ಶರೀಅ ಅಲಿ ಕುಂಞಿ ಉಸ್ತಾದರು  ಮೇಲೆಯಾಯ ರಬ್ಬ್ ಮತ್ತು ಪೊನ್ನು ಮುಸ್ತಫಾ ﷺ. ಈ ಎರಡು ಹೇಸರು ಹೇಳದ ವೇದಿಕೆಗಳಿರಲಿಕ್ಕಿಲ್ಲ . ಆಕಾಶ,ಭೂಮಿ ಸಹಿತ ಸರ್ವವನ್ನು ನಿಯಂತ್ರಿಸುವ ಅಲ್ಲಾಹನ ಹೆಸರನ್ನು ಹೇಳುವಾಗ ಆ ಆಧ್ಯಾತ್ಮೀಯ ಹೃದಯದಿಂದ ಬರುತ್ತಿದ್ದ ನಾಮ " ಮೇಲೆಯಾಯ ರಬ್ಬ್ " ಎಂದಾಗಿತ್ತು .ಹೀಗೆ ಹೇಳುತ್ತಾ ಜನರನ್ನು ರಬ್ಬಿನ ಸಾಮೀಪ್ಯತೆಯೆಡೆಗೆ ಸದಾ ಸಮಯ ಪ್ರೇರೇಪಿಸುತ್ತಿದ್ದರು.

       ಉಸ್ತಾದರು ಒಂದು ವೇದಿಕೆಯಲ್ಲಿ ಭಾಷಣ ಮಾಡಲು ನಿಂತರೆ ಜನ ಸಾಗರದ ಆ ಸಭೆಯನ್ನು ತನ್ನ ಸರಳತೆಯ ಮಾತಿನಿಂದ ಕೈಗೆತ್ತಿಕೊಳ್ಳುತ್ತಿದ್ದರು. ಅಲ್ಲಾಹನ ನೂರನ್ನು ಕಲಿಯುವ ಮುತಅಲ್ಲಿಮರನ್ನು  " ಓ  ಎಂಡೆ ಓಮನ ಮುತಅಲ್ಲಿಮೀಙ್ಙಲೇ " ಎಂದು ಸಭೆಯಲ್ಲಿದ್ದ ಜನರನ್ನು " ಓಮನಯಾಯ ಮುಅಮಿನೀಙ್ಙಲೇ " ಎಂದು ಹೇಳಿ ಒಂದು ತಂದೆ ಮಗನನ್ನು ಪಾಲನೆಯಿಂದ ನೀಡುವ ಉಪದೇಶದಂತೆ ಜನರನ್ನ ತನ್ನತ್ತ ಕರೆಯುತ್ತಾ ಉಪದೇಶ, ನಿರ್ದೇಶವನ್ನು ಹೇಳಿಕೊಡುತ್ತಿದ್ದರು.

     ಆ ಪವಿತ್ರ ಬಾಯಿಯಿಂದ ಬರುತ್ತಿದ್ದ ಹಬೀಬರ ನಾಮ  ಕೇಳುವಾಗಲೇ ಕೇಳುಗರ ಹೃದಯದಲ್ಲಿ ಮದೀನದ ಚಿತ್ರ ಮೂಡಿ ಬರುತ್ತಿತ್ತು. ಪೊನ್ನ್ ಮುಸ್ತಫಾ ﷺ ಎನ್ನುವಾಗ ವಿಶ್ವಾಸಿಗಳ ಮನವು ತುಂಬುತ್ತಿತ್ತು.ಆ ಪವಿತ್ರ ಪುಣ್ಯ ನಾಮಕ್ಕೆ ಉಸ್ತಾದರು ಕೊಡುತ್ತಿದ್ದಿದ್ದ ಗೌರವ ಅಷ್ಟಿಷ್ಟಾಗಿರಲಿಲ್ಲ. ಪ್ರವಾದಿ ﷺ ಮದ್ಹನ್ನು ಹಾಡುವ ಮತ್ತು ಹೇಳುವ ಮಾದಿಹ್ ಗಳಿಗೆ ಕೊಡುತ್ತಿದ್ದ ಪ್ರೀತಿ ಅದನ್ನಿಲ್ಲಿ ವರ್ಣಿಸಲಸಾಧ್ಯ.

     ಶೈಖುನಾ ರವರು ಸ್ವತಃ ಬದುಕುವುದರೊಂದಿಗೆ ಹಲವರಿಗೆ ಬದುಕನ್ನು ಕಟ್ಟಿಕೊಟ್ಟರು. ತನ್ನ ಬದುಕಿನ ಉದ್ದಕ್ಕೂ ಶಿಷ್ಯ ಸಂಪತ್ತನ್ನು ಜಗತ್ತಿಗೆ ಹಬ್ಬಿಸಿದರು. ಜೀವನವನ್ನು ದೀನಿ ಸೇವೆಯಲ್ಲಿ ಮುಂದುವರಿಸಿದ ಶೈಖುನಾ ರವರು ತನ್ನ ಶಿಷ್ಯಂದಿರಿಗೆ ನಿರಂತರ ನೀಡುತ್ತಿದ್ದ ಉಪದೇಶವು" ಮಕ್ಕಳೇ ನೀವು ನಿಮ್ಮ ಉಸ್ತಾದರನ್ನು ಗೌರವಿಸಿ.. ಅವರನ್ನು ನೀವು ಅನುಸರಿಸಿ.. ಅವರೇನು ಹೇಳುವರೋ ಅದನ್ನು ನೀವು ನಿರ್ವಹಿಸಿ ಅವರು ಹೇಗೆ ಚಪ್ಪಲಿ ಹಾಕುವರೋ ಅದೇ ರೀತಿ ನೀವು ಕೂಡ ನಡೆದುಕೊಳ್ಳಿ " ಎಂದಾಗಿತ್ತು.

      ಶೈಖುನಾ ತಾಜುಶ್ಶರೀಅ ಅಲಿ ಕುಂಞಿ  ಉಸ್ತಾದರಿಂದ ಆಧುನಿಕ ಜಗತ್ತಿಗೆ ಕಲಿಯಲು ಹಲವಿದೆ . ಸರಳತೆಯ ಮತ್ತು ವಿನಯದಿಂದ ಕೂಡಿದ ಆ ಹೃದಯದಿಂದ ಬರುತ್ತಿದ್ದ ಪ್ರತಿಯೊಂದು ಉಪದೇಶವು ಎಂತಹ ಕಲ್ಲು ಹೃದಯವನ್ನೂ ಕೂಡ ನೀರು  ಮಾಡುವಂತಿತ್ತು. ಒಂದು ವೇದಿಕೆಯಲ್ಲಿ ಶೈಖುನಾ ರವರು  "ನಿನ್ನ ನೆರೆಹೊರೆಯವ  ಅವಿಶ್ವಾಸಿಯಾಗಿದ್ದು ಅವನ ಮಗು ರಾತ್ರಿಹೊತ್ತು ಅತ್ತರೆ ನೀನು ಹೋಗು, ಅವರ ದುಃಖ ಕೇಳಿತಿಳಿದು ಅವರನ್ನು ಸಮಾಧಾನ ಪಡಿಸಬೇಕೆಂಬ ಉಪದೇಶ ಇವತ್ತಿನ  ಅಮಾನವೀಯ ಜಗತ್ತಿಗೆ ಮಾನವೀಯತೆಯನ್ನು ಹೇಳಿಕೊಡುತ್ತದೆ.

         ಒಬ್ಬ ಶಿಷ್ಯ ತನ್ನ ಉಸ್ತಾದರನ್ನು  ಗೌರವಿಸಬೇಕಾದ ರೀತಿಯನ್ನು ಉಸ್ತಾದರು ಮುತಅಲ್ಲಿಮರು ಸಿಗುವ ಎಲ್ಲಾ ವೇದಿಕೆಯಲ್ಲೂ ಬಿಚ್ಚಿಡುತ್ತಿದ್ದರು.ಶೈಖುನಾರವರು ತನ್ನ ಉಸ್ತಾದರನ್ನು ಯಾವ ರೀತಿ ಗೌರವದಿಂದ ಕಾಣುತ್ತಿದ್ದರು ಎಂದರೆ ಉಸ್ತಾದರುಗಳ ಹೆಸರನ್ನು ಕೂಡ ಹೇಳಲು ಭಯಪಡುತ್ತಿದ್ದರು.

ಒಮ್ಮೆ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಙ್ಙಲರ ದರ್ಸಿನಲ್ಲಿ ಕಲಿಯುತ್ತಿದ್ದಾಗ ಉಂಟಾದ ಒಂದು ಅನುಭವವನ್ನು ಹೇಳಲು ಪ್ರಾರಂಭಿಸಿದರು ,ತಾಜುಲ್ ಉಲಮಾರ ಹೆಸರು ಹೇಳುವಾಗ  "ಬಹುಮಾನಮುಳ್ಳ ಉಳ್ಳಾಲತ್ತೋರ್"  ಎಂದು ಹೇಳಿ " ನನಗೆ ಇದರಾಚೆ ಏನು ಹೇಳಲು ಆಗುತ್ತಿಲ್ಲ ಅವರ ಹೆಸರು ಹೇಳಲು ನನಗೆ ಭಯವಾಗುತ್ತಿದೆ (ಎನಿಕ್ಕ್ ಪೆಡಿಯಾನ್) ಎಂದು ಹೇಳಿ ಕಲಿಕೆಯ ಅನುಭವವನ್ನು ಹೇಳಲಾರಂಭಿಸಿದರು. 

            ಸರಳತೆ  ಹಾಗೂ ವಿನಯವೇನೆಂದು ತಿಳಿಯಬೇಕಾದರೆ ಶೈಖುನಾ ಉಸ್ತಾದರನ್ನು ನೋಡಿದರೆ ಸಾಕು . ಜ್ಞಾನ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿರುವ ಈ ಧನ್ಯ ಜೀವನದಲ್ಲಿ ನಮಗೆ ಕಲಿಯುವಂತದ್ದು ಧಾರಾಳವಿದೆ." ಆ ಪೊನ್ನ್ ಮುಸ್ತಫಾ ﷺ ತಂಙ್ಙಲ್ ಸ್ವರ್ಗತ್ತಿಲ್ ವೆಚ್ಚ್ ಓದುನ್ನ ಯಾಸೀನ್ ನೀ ನಮುಕ್ಕ್ ಕೇಳ್ಪಿಚ್ಚ್ ತರನೇ ಅಲ್ಲಾಹ...ಅದ್ ಪೋಲೆ ನಿಂಡೆ ಪರಿಶುದ್ಧ ಖುರ್ ಆನಿಲ್ ಅರ್ರಹ್ ಮಾನ್ ಸೂರತ್ ನೀ ಓದುನ್ನದ್ ನಮುಕ್ಕ್ ನೀ ಕೇಲ್ಪಚ್ಚ್ ತರನೇ ಅಲ್ಲಾಹ... " ಇದು ಉಸ್ತಾದರ ನಿರಂತರದ ಪ್ರಾರ್ಥನೆಯಾಗಿತ್ತು.

    ತನ್ನ ಜೀವನವನ್ನು ಅಲ್ಲಾಹನ ಮಾರ್ಗದಲ್ಲಿ ಸಾಗಿಸುತ್ತಾ ಅಲ್ಲಲ್ಲಿ ಸುಜ್ಞಾನವನ್ನು ಚೆಲ್ಲುತ್ತಾ ಈ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಿದ ಶೈಖುನಾ ರವರು ನಮ್ಮನ್ನಗಲಿದರು. ಅಲ್ಲಾಹನು ಶೈಖುನಾರ ದರಜ ಏರಿಸಲಿ.... ನಾಳೆ ಪರಲೋಕದಲ್ಲಿ ಶೈಖುನಾ ರೊಂದಿಗೆ ನಮ್ಮನ್ನು ಒಟ್ಟು ಸೇರಿಸಲಿ... ಆಮೀನ್

ಅಮೀನ್ ಕೊಳಕೆ
(ಮುಹಿಮ್ಮಾತ್ ವಿದ್ಯಾರ್ಥಿ)


SHARE THIS

Author:

0 التعليقات: