Saturday, 24 April 2021

ಹೆಚ್ಚುತ್ತಿರುವ ಕೊರೋನ ಪ್ರಕರಣ: ಭಾರತದಿಂದ ವಾಣಿಜ್ಯ ವಿಮಾನ ಸ್ಥಗಿತಗೊಳಿಸಿದ ಕುವೈತ್


 ಹೆಚ್ಚುತ್ತಿರುವ ಕೊರೋನ ಪ್ರಕರಣ: ಭಾರತದಿಂದ ವಾಣಿಜ್ಯ ವಿಮಾನ ಸ್ಥಗಿತಗೊಳಿಸಿದ ಕುವೈತ್

ಕೈರೋ: ಹೆಚ್ಚುತ್ತಿರುವ ಕೊರೋನ ಪ್ರಕರಣಗಳಿಂದಾಗಿ ಭಾರತದಿಂದ ಬರುವ ವಾಣಿಜ್ಯ ವಿಮಾನಗಳನ್ನು ಕುವೈತ್ ಸ್ಥಗಿತಗೊಳಿಸಿದೆ. 

ಎಪ್ರಿಲ್ 24ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ಬರುವ ತನಕ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕುವೈತ್ ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ  ಮುಂಜಾನೆ ಟ್ವೀಟ್ ನಲ್ಲಿ ತಿಳಿಸಿದೆ.

ಜಾಗತಿಕ ಕೊರೊನ ವೈರಸ್ ಸ್ಥಿತಿಯ ಅವಲೋಕನದ ಬಳಿಕ ಆರೋಗ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕುವೈತ್  ಪ್ರಜೆಗಳು, ಅವರ ಸಂಬಂಧಿಕರು ಹಾಗೂ ಅವರ ಮನೆಯ ಕೆಲಸಗಾರರಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಸರಕು ಪರಿಣಾಮ ಬೀರುವುದಿಲ್ಲ.


SHARE THIS

Author:

0 التعليقات: