Saturday, 17 April 2021

ಐಪಿಎಲ್: ಹೈದರಾಬಾದ್ ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್


ಐಪಿಎಲ್: ಹೈದರಾಬಾದ್ ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್

ಚೆನ್ನೈ: ಸ್ಪಿನ್ನರ್ ರಾಹುಲ್ ಚಹಾರ್(3-19)ಹಾಗೂ ಟ್ರೆಂಟ್ ಬೌಲ್ಟ್(3-28)ಅತ್ಯುತ್ತಮ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶನಿವಾರ ನಡೆದ ಐಪಿಎಲ್ ನ 9ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ 13 ರನ್ ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.

ಗೆಲ್ಲಲು 151 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 19.4 ಓವರ್ ಗಳಲ್ಲಿ 137 ರನ್ ಗಳಿಸಿ ಆಲೌಟಾಯಿತು.

ಹೈದರಾಬಾದ್ ಪರವಾಗಿ ಆರಂಭಿಕ ಆಟಗಾರ ಜಾನಿ ಬೈರ್ ಸ್ಟೋವ್(43, 22 ಎಸೆತ, 3 ಬೌಂ.4 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಡೇವಿಡ್ ವಾರ್ನರ್(36, 34 ಎಸೆತ)ಹಾಗೂ ವಿಜಯ ಶಂಕರ್(28, 25 ಎಸೆತ, 2 ಸಿಕ್ಸರ್)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್  ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.

ಮುಂಬೈ ಪರ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕ್ವಿಂಟನ್ ಡಿಕಾಕ್(40), ರೋಹಿತ್ ಶರ್ಮಾ(32) ಮೊದಲ ವಿಕೆಟ್ ಗೆ 55 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆಲ್ ರೌಂಡರ್ ಕಿರೊನ್ ಪೊಲಾರ್ಡ್ ಔಟಾಗದೆ 35(22 ಎಸೆತ, 1 ಬೌಂ.3 ಸಿ.)ರನ್ ಗಳಿಸಿ ತಂಡದ ಮೊತ್ತವನ್ನು 150ಕ್ಕೆ ತಲುಪಿದರು. ಸೂರ್ಯಕುಮಾರ್ ಯಾದವ್(10) ಹಾಗೂ ಇಶಾನ್ ಕಿಶನ್(12) ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಹೈದರಾಬಾದ್ ಪರ ವಿಜಯ ಶಂಕರ್(2-19) ಹಾಗೂ ಮುಜೀಬ್(2-29)ತಲಾ ಎರಡು ವಿಕೆಟ್ ಗಳನ್ನು ಪಡೆದಿದ್ದಾರೆ.


 


SHARE THIS

Author:

0 التعليقات: