Wednesday, 21 April 2021

ಕುಂತೂರು ಯುನಿಟ್ ವತಿಯಿಂದ ಮಹ್ಳರತುಲ್ ಬದ್ರಿಯಾ ಹಾಗೂ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ


 ಕುಂತೂರು ಯುನಿಟ್ ವತಿಯಿಂದ ಮಹ್ಳರತುಲ್ ಬದ್ರಿಯಾ ಹಾಗೂ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ

ಕುಂತೂರು,ಎಪ್ರಿಲ್ 21: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ SYS ಕುಂತೂರು ಬ್ರಾಂಚ್ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ SSF ಕುಂತೂರು ಯುನಿಟ್ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್-ತಾಜುಶ್ಶರೀಅಃ ಅಲಿ ಕುಂಞಿ ಉಸ್ತಾದ್ ಅನುಸ್ಮರಣೆ ಮತ್ತು ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ SYS ಕುಂತೂರು ಬ್ರಾಂಚ್ ಅಧ್ಯಕ್ಷ ಹಂಝಾ ಸಅದಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು SSF ಕುಂತೂರು ಯುನಿಟ್ ಅಧ್ಯಕ್ಷ ಹನೀಫ್ ಝೈನಿ ಕಾರ್ಯಕ್ರಮ ವನ್ನು ಉಧ್ಘಾಟಿಸಿದರು

      ಪ್ರಸ್ತುತ ಕಾರ್ಯಕ್ರಮ ದಲ್ಲಿ SSF ಸದಸ್ಯತ್ವ ಪಡೆದ ಸದಸ್ಯರಿಗೆ SSF ಐಡಿ ವಿತರಣೆ ಮಾಡಲಾಯಿತು ಹಾಗೂ ಕುಂತೂರು ಯುನಿಟ್ ವ್ಯಾಪ್ತಿಯ ಅತೀ ಕಡು ಬಡವ,ವಿದವ,ಯತೀಂ ಸುಮಾರು 45 ಕುಟುಂಬಗಳಿಗೆ ಪ್ರತಿಯೊಂದು ಮನೆಗೆ ತೆರಳಿ ರಂಝಾನ್ ಕಿಟ್ ವಿತರಿಸಲಾಯಿತು

   ಈ ಕಾರ್ಯಕ್ರಮ ದಲ್ಲಿ SYS ಉಪಾಧ್ಯಕ್ಷ ಅಝೀಝ್ ಮುಸ್ಲಿಯಾರ್,ಕೋಶಾಧಿಕಾರಿ ಕೆ ಆರ್ ಹಮೀದ್,ಸದಸ್ಯರಾದ ಅಬ್ದುಲ್ ಹಮೀದ್ ಮುಸ್ಲಿಯಾರ್,ಉಂಞಿ ಉಸ್ತಾದ್ ಯು ಕೆ ಇಸ್ಮಾಯಿಲ್,ಅಬ್ದುಲ್ ರಝಾಕ್,ಅಬ್ದುಲ್ ಲತೀಫ್ ಸುರುಳಿ,ಆಸೀಫ್ ಬೇಳ್ಪಾಡಿ ಹಾಗೂ SSF ಕೋಶಾಧಿಕಾರಿ ಸಾಬಿತ್ ಕೆ ಆರ್,ತೌಜೀದ್ ಯಃ ಕೆ,ಹುದೈಫ್ ಕುಂತೂರು ಮತ್ತು ಹಲವಾರು ಸದಸ್ಯರು ಉಪಸ್ಥಿತರಿದ್ದರು 

    ಅಬ್ದುರ್ರಝಾಖ್ ಲತೀಫಿ ಕುಂತೂರು ನೆರೆದವರನ್ನು ಸ್ವಾಗತಿಸಿ ಉನೈಸ್ ಅಹ್ಮದ್ ವಂದಿಸಿದರು.


SHARE THIS

Author:

0 التعليقات: