Monday, 19 April 2021

ದೇಶದಲ್ಲಿ ಕೊರೋನ ಪ್ರಕರಣ ಗಗನಕ್ಕೇರಲು ಪ್ರಧಾನಿಯೇ ಕಾರಣ: ಮಮತಾ ಬ್ಯಾನರ್ಜಿ


 ದೇಶದಲ್ಲಿ ಕೊರೋನ ಪ್ರಕರಣ ಗಗನಕ್ಕೇರಲು ಪ್ರಧಾನಿಯೇ ಕಾರಣ: ಮಮತಾ ಬ್ಯಾನರ್ಜಿ

ಕೋಲ್ಕತಾ: ದೇಶದಲ್ಲಿ ಗಗನಕ್ಕೇರುತ್ತಿರುವ ಕೋವಿಡ್-19 ಪ್ರಕರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣರಾಗಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಪಶ್ಚಿಮಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಪ್ರಧಾನಿಯೇ ಇದಕ್ಕೆ ಜವಾಬ್ದಾರಿ. ಯಾವುದೇ ಯೋಜನೆಗಳಿಲ್ಲ, ಯಾವುದೇ ಆಡಳಿತಾತ್ಮಕ ಸಾಮಥ್ರ್ಯಗಳಿಲ್ಲ, ಅವರು ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರು ಮುಂದೆ ನಿಂತು ಯೋಜನೆ ಮಾಡಿಲ್ಲ. ಬೇರೆಯವರಿಗೂ ಮಾಡಲು ಅವಕಾಶ ನೀಡಿಲ್ಲ ಎಂದು ಮಮತಾ ಆರೋಪಿಸಿದರು.


SHARE THIS

Author:

0 التعليقات: