Monday, 12 April 2021

ಐಪಿಎಲ್: ಪಂಜಾಬ್‌ಗೆ ರಾಜಸ್ಥಾನ ವಿರುದ್ಧ ರೋಚಕ ಜಯ


ಐಪಿಎಲ್: ಪಂಜಾಬ್‌ಗೆ ರಾಜಸ್ಥಾನ ವಿರುದ್ಧ ರೋಚಕ ಜಯ

 ಮುಂಬೈ: ನಾಯಕ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್(119 ರನ್, 63 ಎಸೆತ, 12 ಬೌಂಡರಿ, 7 ಸಿಕ್ಸರ್) ಆಕರ್ಷಕ ಶತಕದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ ಸೋಮವಾರ ನಡೆದ ಐಪಿಎಲ್‌ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 4 ರನ್ ನಿಂದ ಸೋತಿದೆ.

ಗೆಲ್ಲಲು 222 ರನ್ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಕೇರಳದ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಸಾಹಸದಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ವೀರೋಚಿತ ಸೋಲುಂಡಿದೆ.

ರಾಜಸ್ಥಾನದ ಪರ ಜೋಸ್ ಬಟ್ಲರ್(25), ರಿಯಾನ್ ಪರಾಗ್(25), ಶಿವಂ ದುಬೆ(23)ಎರಡಂಕೆಯ ಸ್ಕೋರ್ ಗಳಿಸಿದರು.

ಪಂಜಾಬ್ ಪರವಾಗಿ ಅರ್ಷದೀಪ್ ಸಿಂಗ್(3-35) ಹಾಗೂ ಮುಹಮ್ಮದ್ ಶಮಿ(2-33)ಐದು ವಿಕೆಟ್ ಗಳನ್ನು ಹಂಚಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 221 ರನ್ ಗಳಿಸಿತ್ತು.


 SHARE THIS

Author:

0 التعليقات: