Friday, 9 April 2021

ಬಿಜೆಪಿ-ತೃಣಮೂಲ ಕಾರ್ಯಕರ್ತರ ಘರ್ಷಣೆ: ಗುಂಡೇಟಿಗೆ ನಾಲ್ವರು ಬಲಿ


 ಬಿಜೆಪಿ-ತೃಣಮೂಲ ಕಾರ್ಯಕರ್ತರ ಘರ್ಷಣೆ: ಗುಂಡೇಟಿಗೆ ನಾಲ್ವರು ಬಲಿ

ಕೋಲ್ಕತಾ: ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಶನಿವಾರ ಆರಂಭವಾಗಿದ್ದು, ಮತದಾನದ ವೇಳೆ ಹಿಂಸಾಚಾರ ಘಟನೆ ಮುಂದುವರಿದಿದೆ. 

ಕೂಚ್ ಬಿಹಾರ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ನಾಲ್ವರನ್ನು ಗುಂಡಿಟ್ಟು ಸಾಯಿಸಲಾಗಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

ಘಟನೆಯ ಕುರಿತು ಚುನಾವಣಾ ಆಯೋಗವು ವರದಿಯನ್ನು ಕೇಳಿದೆ.

ಬಂಗಾಳದಲ್ಲಿ ಇಂದು 44 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.


SHARE THIS

Author:

0 التعليقات: