Wednesday, 28 April 2021

ಬದ್‌ರ್ ಮೌಲಿದ್ : ಇತಿಹಾಸ ಮತ್ತು ಪ್ರಭಾವ

 

ಬದ್‌ರ್ ಮೌಲಿದ್ : ಇತಿಹಾಸ ಮತ್ತು ಪ್ರಭಾವ

   ಇಸ್ಲಾಮಿನ ಇತಿಹಾಸದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದ ಯುದ್ಧವಾಗಿದೆ ಬದ್ರ್ ಯುದ್ಧ . 313 ರಷ್ಟು ಬರುವ ಮುಸ್ಲಿಂ ಸೈನ್ಯವು ಸಾವಿರದಷ್ಟು ಬರುವ ಅವಿಶ್ವಾಸಿಗಳ ಸೈನ್ಯದ ವಿರುದ್ಧ ವಿಜಯ ಪತಾಕೆಯನ್ನು ಹಾರಿಸಿದ ಯುದ್ಧವದು. ಈ ಯುದ್ಧದ ನಂತರ ಮುಸ್ಲಿಮರು ಇನ್ನಷ್ಟು ಬಲಶಾಲಿಗಳಾದರು. ಯುದ್ಧದ ಮೂಲಕ ಮುಸ್ಲಿಮರ ಶಕ್ತಿ ಏನೆಂದು ಅವಿಶ್ವಾಸಿಗಳು ತಿಳಿದರು. ಪ್ರವಾದಿ(ಸ ಅ) ರವರ ನಾಯಕತ್ವದಲ್ಲಿ ಮುನ್ನಡೆದ ಮುಸ್ಲಿಂ ಸೈನ್ಯವು ಅಲ್ಲಾಹನ ಸಹಾಯದೊಂದಿಗೆ ಅವಿಶ್ವಾಸಿ ಗಳನ್ನು ರಣರಂಗ ಬಿಡುವಂತೆ ಮಾಡಿತು.

ಈ ಇತಿಹಾಸ ಪ್ರಸಿದ್ಧ ಚರಿತ್ರೆಯನ್ನು ಇಂದಿಗೂ ಕೂಡ ಯಾರಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಾಹನ ಮಾರ್ಗದಲ್ಲಿ  ರಕ್ತ ಸಾಕ್ಷಿಗಳು ಅಲ್ಲಾಹನ ಬಳಿ ಎಂದಿಗೂ ಅಮರರಾಗಿದ್ದಾರೆ ಎಂಬ ಅಲ್ಲಾಹನ ಪವಿತ್ರ ಮಾತನ್ನು ಹೃದಯದಲ್ಲಿ ಇಟ್ಟುಕೊಂಡು ರಚಿಸಿದ ಮೌಲಿದಾಗಿದೆ ಬದ್ರ್ ಮೌಲಿದ್ . ಇದನ್ನು ರಚಿಸಿದ್ದು ಇಂದಿನ ಉಲಮಾಗಳ 5 ನೇ ತಲೆಮಾರುವಿನ ವಿದ್ವಾಂಸರಾದ ಅಬ್ದುಲ್ ಆಝೀಝ್ ಮುಸ್ಲಿಯಾರ್ (ಖ ಸಿ) ಪೋನ್ನಾನಿ  ರವರಾಗಿದ್ದಾರೆ. ಈ ಮೌಲಿದ್ ಬದ್ರ್ ಹುತಾತ್ಮರ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

      ಹೌದು, ಇಸ್ಲಾಮಿನ ಚರಿತ್ರೆಯಲ್ಲಿ ಅಲ್ಲಾಹನು ಶತ್ರುಗಳೊಂದಿಗೆ ಹೋರಾಡಲು  ಅನುಮತಿ ಕೊಟ್ಟ ಮೊದಲ ಯುದ್ಧವಾಗಿದೆ ಬದ್ರ್ . ಯುದ್ಧದಲ್ಲಿ 14 ಮಂದಿ ಸ್ವಹಾಬಿಗಳು ರಕ್ತ ಸಾಕ್ಷಿಯಾಗುತ್ತಾರೆ. ಈ ಯುದ್ಧದಲ್ಲಿ ಪಾಲ್ಗೊಂಡವರಿಗೆ ಅಲ್ಲಾಹನು ಪ್ರತ್ಯೇಕವಾದ ಸ್ಥಾನವನ್ನು ಕೊಟ್ಟಿದ್ದಾನೆ. ಇವರನ್ನು ಜಗತ್ತು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಕಾರಣ ಇವರ ತ್ಯಾಗವು ಇಸ್ಲಾಮಿನ ರಕ್ಷಣೆಗೆ ಕಾರಣವಾಗಿತ್ತು. ಇವರ ತ್ಯಾಗವನ್ನು ಮತ್ತು ಅವರ ಮಹತ್ವವನ್ನು ತಿಳಿಸಿ ಕೊಡುವ  ಮೌಲಿ ದಾಗಿದೆ ಬದ್ರ್ ಮೌಲಿದ್.

ಒಂದು ದಿನ ಪ್ರವಾದಿವರ್ಯರು ಒಂದು ಮನೆಗೆ ಧಾವಿಸಿ ಬರುತ್ತಾರೆ ಆ ಸಮಯದಲ್ಲಿ ಆ ಮನೆಯವರು ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರ ಮದ್ಹನ್ನು ಹಾಡುತ್ತಿರುತ್ತಾರೆ. ಪ್ರವಾದಿವರ್ಯ ರು ಬರುವುದನ್ನು ಕಂಡ ಅವರು ಪ್ರವಾದಿ ಪ್ರಕೀರ್ತನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಆ ಸಂದರ್ಭದಲ್ಲಿ ಅವರು ನೀವು ಮೊದಲು ಹಾಡಿದ್ದನ್ನು ಆಡಿರಿ ಎಂದು ಹೇಳುತ್ತಾ ಬದ್ರ್ ಹುತಾತ್ಮರ  ಮಹತ್ವವನ್ನು ತಿಳಿಸಿ ಕೊಡುತ್ತಾರೆ ಎಂದು ಸ್ವಹೀಹುಲ್ ಬುಖಾರಿಯಲ್ಲಿ ಉಲ್ಲೇಖಿಸಲಾಗಿದೆ.

ಬದ್ರ್ ಸಾಕ್ಷಿಗಳ ಮಹತ್ವ ಹೇಳುವುದಾದರೆ...

ಒಬ್ಬರು ಹಜ್ಜ್ ಯಾತ್ರೆಯನ್ನು ಉದ್ದೇಶವಿಟ್ಟು ಮನೆಯಿಂದಿಲಿಯುತ್ತಾರೆ. ಹೊರಡುವ ಮುನ್ನ ಮನೆಯಲ್ಲಿರುವ ವಸ್ತುಗಳ ಸಂರಕ್ಷಣೆಗಾಗಿ ಅಸ್ಮಾವುಲ್ ಬದ್ರ್ ನಾಮವನ್ನು ಬರೆದಿಟ್ಟಾಗಿದೆ ಹೊರಡೋದು. ಅಂದಿನ ರಾತ್ರಿ ಒಬ್ಬ ಕಳ್ಳ ಕದಿಯಲು ಯಾರೂ ಇಲ್ಲದ  ಈ ಮನೆಗೆ ಬರುತ್ತಾನೆ ಆ ಸಂದರ್ಭದಲ್ಲಿ ಅವನು ಆ ಮನೆಯಿಂದ ತುಂಬಾ ಜನರು ಮಾತನಾಡುವ ಶಬ್ದವನ್ನು ಕೇಳುತ್ತಾನೆ ಹೀಗೆ ಎರಡನೇ ಮತ್ತು ಮೂರನೇ ದಿವಸ ಬಂದಾಗಲೂ ಕೂಡ ಅದೇ ಶಬ್ದವನ್ನು ಕೇಳುತ್ತಾನೆ. ಹಾಗೆ ಹಜ್ಜ್ ಗೆ ಹೋದ ವ್ಯಕ್ತಿ ಬಂದಾಗ  ಕಳ್ಳನುನೀವು ನಿಮ್ಮ ಮನೆಯಲ್ಲಿ ಯಾರನ್ನು ನೇಮಿಸಿ ಹೋಗಿದ್ದೀರಿ ಎಂದು ಕೇಳುತ್ತಾನೆ: ಅವಾಗ ಅವನು ನಾನು ನನ್ನ ಮನೆಯಲ್ಲಿ ಆಸ್ಮಾವುಲ್ ಬದ್ರ್ ನ್ನು ಬರೆದಿಟ್ಟು ಹೋಗಿದ್ದೇನೆ ಅವರು ನನ್ನ ಮನೆಗೆ ಕಾವಲು ನಿಂತಿದ್ದಾರೆ ಎಂದು ಹೇಳುತ್ತಾನೆ  ಈ ಮಾತನ್ನು ಕೇಳಿದ ಕಳ್ಳ ನಿಬ್ಬೆರಗಾಗುತ್ತಾನೆ.

ಹೀಗೆಯೇ ಬದ ರ್ ಮೌಲಿದ್ ಕೂಡ ಹಲವಾರು ಸಂಕಷ್ಟಗಳನ್ನು ನೆರವೇರಿಸುತ್ತದೆ . ಬದ್ರ್ ಪಾಲ್ಗೊಂಡವರ ಕಾವಲು ಓದಿದವರ ಮನೆಯಲ್ಲಿ  ಇರುತ್ತದೆ. ಆದರೆ ಒಂದು ವಿಭಾಗವು ಇದನ್ನು ಶಿರ್ ಕೆಂದು ಹೇಳುತ್ತಾ ರಂಗ ಪ್ರವೇಶಿಸಿದೆ. ಅವರ ಪೊಳ್ಳುವಾದ ಗಳನ್ನು ನಮ್ಮ ಉಲಮಾಗಳು ಪುರಾವೆಗಳ ಮೂಲಕ ಬೀದಿಗೆ ಎಸೆದಿದ್ದಾರೆ. ಆದರೆ ಜನಸಾಮಾನ್ಯರು ಅವರ ಪೊಳ್ಳು ವಾದಗಳಿಗೆ ಕಿವಿಗೊಟ್ಟು ಸುನ್ನತ್ ಜಮಾ ಅತಿನ ಆಶಯದಿಂದ ಹಿಂದೆ ಸರಿಯುತ್ತಿದ್ದಾರೆ ಆದ್ದರಿಂದ ಈ ಸಮಯದಲ್ಲಿ ಧರ್ಮಬೋಧಕರಾದ ನಾವು ಬದ್ರ್ ಸ್ವಹಾಬಿಗಳ ಪ್ರಾಮುಖ್ಯತೆಯನ್ನು  ಭಾಷಣ, ಪ್ರಬಂಧ, ಬರಹಗಳ ಮೂಲಕ ಜನರಿಗೆ ತಿಳಿಸಿಕೊಡಬೇಕಾಗಿದೆ  ಅಲ್ಲಾಹನು ತೌಫೀಕ್ ನೀಡಿ ಅನುಗ್ರಹಿಸಲಿ ....ಆಮೀನ್

 ನೌಶಾದ್ ಹಸನ್ ನಗರ
(ಮುಹಿಮ್ಮಾತ್ ವಿದ್ಯಾರ್ಥಿ)


SHARE THIS

Author:

0 التعليقات: