Wednesday, 14 April 2021

ಉತ್ತರಪ್ರದೇಶ ಸಿಎಂ ಆದಿತ್ಯನಾಥ್‌ ಗೆ ಕೊರೋನ ಪಾಸಿಟಿವ್‌


 ಉತ್ತರಪ್ರದೇಶ ಸಿಎಂ ಆದಿತ್ಯನಾಥ್‌ ಗೆ ಕೊರೋನ ಪಾಸಿಟಿವ್‌

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಗೆ ಕೊರೋನ ಪಾಸಿಟಿವ್‌ ವರದಿಯಾಗಿದ್ದು, ಸ್ವಯಂ ಐಸೋಲೇಶನ್‌ ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಆದಿತ್ಯನಾಥ್‌ ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ.

"ಆರಂಭಿಕ ರೋಗ ಲಕ್ಷಣಗಳು ಕಂಡು ಬಂದ ಬಳಿಕ ನಾನು ಕೋವಿಡ್‌ ಪರಿಶೀಲನೆ ನಡೆಸಿದ್ದು, ವರದಿಯು ಪಾಸಿಟಿವ್‌ ಆಗಿದೆ. ನಾನೀಗ ಸ್ವಯಂ ಐಸೋಲೇಶನ್‌ ನಲ್ಲಿದ್ದು, ವೈದ್ಯರ ಸಲಹೆಯನ್ನು ಪಡೆಯುತ್ತಿದ್ದೇನೆ" ಎಂದು ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದಾರೆ.

ಆದಿತ್ಯನಾಥ್‌ ಕಚೇರಿಯ ಅಧಿಕಾರಿಗಳಲ್ಲಿ ಹಲವರಿಗೆ ಕೋವಿಡ್‌ ಪಾಸಿಟಿವ್‌ ವರದಿಯಾದ ಬಳಿಕ ಅವರು ಸ್ವಯಂ ಐಸೋಲೇಶನ್‌ ಗೆ ಒಳಗಾಗಿದ್ದರು.SHARE THIS

Author:

0 التعليقات: