Saturday, 3 April 2021

ರೈಲು ಹರಿದು ಕರ್ತವ್ಯ ನಿರತ ಮೂವರು ರೈಲ್ವೆ ಕಾರ್ಮಿಕರು ಸಾವು


ರೈಲು ಹರಿದು ಕರ್ತವ್ಯ ನಿರತ ಮೂವರು ರೈಲ್ವೆ ಕಾರ್ಮಿಕರು ಸಾವು


ಖರಗ್‌ಪುರ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಖರಗ್ ಪುರ ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ಸಿಕಂದರಾಬಾದ್‌ನಿಂದ ಹೊರಟ ಫಲಕ್ನುಮಾ ಎಕ್ಸ್‌ಪ್ರೆಸ್ ರೈಲು ಹರಿದು ಮೂವರು ಪುರುಷರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆಗ್ನೇಯ ರೈಲ್ವೆಯು ದುವಾ ಮತ್ತು ಬಲಿಚಕ್ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್ ರೈಲು ನಾಲ್ವರು ರೈಲ್ವೆ ಕಾರ್ಮಿಕರ (ಗ್ಯಾಂಗ್‌ಮೆನ್) ಮೇಲೆ ಹರಿದಿದೆ. ಒಟ್ಟು ಐವರು ಹಳಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಾಗ ಅವರಲ್ಲಿ ಒಬ್ಬರು ಕುಡಿಯುವ ನೀರು ತರಲು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಮೃತರನ್ನು ಬಾಪಿ ನಾಯಕ್, ಮಾಣಿಕ್ ಮಂಡಲ್ ಮತ್ತು ನಿಪೆನ್ ಪಾಲ್ ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಖರಗ್‌ಪುರ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.


SHARE THIS

Author:

0 التعليقات: