Friday, 2 April 2021

ಬಂಗಾಳದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಲಿದೆ, ದೀದಿ ಸ್ವತಃ ಸೋಲುತ್ತಾರೆ: ಅಮಿತ್ ಶಾ


 ಬಂಗಾಳದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಲಿದೆ, ದೀದಿ ಸ್ವತಃ ಸೋಲುತ್ತಾರೆ: ಅಮಿತ್ ಶಾ

ಕೋಲ್ಕತಾ: ಪಶ್ಚಿಮಬಂಗಾಳದಲ್ಲಿ ಈಗಾಗಲೇ ನಡೆದಿರುವ 2 ಹಂತಗಳ ಮತದಾನದಲ್ಲಿ ಒಟ್ಟು 60 ಸೀಟುಗಳ ಪೈಕಿ ಬಿಜೆಪಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ದೀದಿ(ಮಮತಾ ಬ್ಯಾನರ್ಜಿ)ಸ್ವತಃ ನಂದಿಗ್ರಾಮದಿಂದ ಸೋಲನುಭವಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಶುಕ್ರವಾರ ರ್ಯಾಲಿಯನ್ನುದ್ದೇಶಿಸಿ ಹೇಳಿದ್ದಾರೆ.

ಮೊದಲ ಎರಡು ಹಂತಗಳಲ್ಲಿ ಬಂಗಾಳದ ಜನತೆಯು ಪರಿವರ್ತನೆಗಾಗಿ ಬಿಜೆಪಿಗೆ ಭಾರೀ  ಮತದಾನ ಮಾಡಿ ಮೇ 2ರಂದು ದೀದಿ ಮನೆಗೆ ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಬಂಗಾಳದಲ್ಲಿ ಪ್ರಚಂಡ ಬಹುಮತದಿಂದ ಕಮಲ ಅರಳಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಪಡೆಗಳು ಬಿಜೆಪಿ ಪರವಾಗಿ ವರ್ತಿಸುತ್ತವೆ: ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ಕೋಲ್ಕತಾದಲ್ಲಿ ಶುಕ್ರವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕರ ನಿಯೋಗವು ದೂರು ಸಲ್ಲಿಸಿದೆ.

ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಬೆದರಿಕೆ ಹಾಕುವಾಗ ಕೇಂದ್ರ ಪಡೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ ಎಂದು ಟಿಎಂಸಿ ನಿಯೋಗ ದೂರಿದೆ.

ದುಷ್ಕøತ್ಯಗಳಿಗೆ ಸಂಬಂಧಿಸಿ ನಾವು ಬೂತ್ ವಾರು ಸಾಕ್ಷ್ಯವನ್ನು ನೀಡಿದ್ದೇವೆ. ಚುನಾವಣಾ ಆಯೋಗಕ್ಕೆ ಕನಿಷ್ಠ 300 ಅರ್ಜಿಗಳನ್ನು ಸಲ್ಲಿಸಿದ್ದೇವೆ ಎಂದು ಟಿಎಂಸಿ ನಾಯಕರು ಹೇಳಿದರು.


SHARE THIS

Author:

0 التعليقات: