Tuesday, 13 April 2021

ಬೋಟ್ ಗೆ ಹಡಗು ಡಿಕ್ಕಿ : ಮೂವರು ಸಾವು, ಐವರ ರಕ್ಷಣೆ, ಆರು ಮಂದಿ ಕಣ್ಮರೆ


ಬೋಟ್ ಗೆ ಹಡಗು ಡಿಕ್ಕಿ : ಮೂವರು ಸಾವು, ಐವರ ರಕ್ಷಣೆ, ಆರು ಮಂದಿ ಕಣ್ಮರೆ

ಮಂಗಳೂರು : ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗೆ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟಿದ್ದು, ಉಳಿದವರು ಕಣ್ಮರೆಯಾಗಿರುವ ಘಟನೆ ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ನಡೆದಿದೆ

ದುರಂತದಲ್ಲಿ ಕಣ್ಮರೆಯಾದವರ ಪೈಕಿ ಐವರನ್ನು ಈವರೆಗೆ ರಕ್ಷಣೆ ಮಾಡಲಾಗಿದ್ದು, 6 ಮೀನುಗಾರರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್ ಕ್ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

14 ಜನರಲ್ಲಿ ಐವರನ್ನು ರಕ್ಷಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.


SHARE THIS

Author:

0 التعليقات: