Thursday, 1 April 2021

ಪೋಷಕರು ರಾತ್ರೋರಾತ್ರಿ ಬೆಳಗಾವಿಯಿಂದ ವಿಜಯಪುರಕ್ಕೆ ಶಿಫ್ಟ್: ಪ್ರಕರಣದಿಂದ ಸಾಕಷ್ಟು ಕುಗ್ಗಿ ಹೋಗಿದ್ದೇವೆ; ಯುವತಿ ತಂದೆ


 ಪೋಷಕರು ರಾತ್ರೋರಾತ್ರಿ ಬೆಳಗಾವಿಯಿಂದ ವಿಜಯಪುರಕ್ಕೆ ಶಿಫ್ಟ್: ಪ್ರಕರಣದಿಂದ ಸಾಕಷ್ಟು ಕುಗ್ಗಿ ಹೋಗಿದ್ದೇವೆ; ಯುವತಿ ತಂದೆ

ವಿಜಯಪುರ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತ ಯುವತಿಯ ಪೋಷಕರನ್ನು ರಾತ್ರೋರಾತ್ರಿ ಬೆಳಗಾವಿಯಿಂದ ವಿಜಯಪುರಕ್ಕೆ ಪೊಲೀಸರು ಸ್ಥಳಾಂತರಿಸಿದ್ದಾರೆ.

ಈ ಕುರಿತು ಸುದ್ದಿ ಮಾಧ್ಯಮವೊಂದಕ್ಕೆ ಮಾತಾನಾಡಿದ ಸಿಡಿ ಯುವತಿ ತಂದೆ, ಈಗಾಗಲೇ ‌ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಾಕಷ್ಟು ಕುಗ್ಗಿ ಹೋಗಿದ್ದೇವೆ. ನಮ್ಮ ಅತ್ತೆಯ ಅನಾರೋಗ್ಯಕ್ಕೊಳಗಾಗಿದ್ದಾರೆ.

ಸದ್ಯ ನಾವು ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸಲು ಸಿದ್ಧರಿಲ್ಲ. ಅಲ್ಲದೇ, ಮನಸ್ಸು ಸರಿ ಇಲ್ಲ. ಆದ್ದರಿಂದ ಇಲ್ಲಿ ನಾವು ನೆಮ್ಮದಿಯಿಂದ ಇರಲು ಅನುಕೂಲ ಮಾಡಿಕೊಡಬೇಕು ಎಂದು ಜನರಿಗೆ ಹಾಗೂ ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ನಮ್ಮ ಅತ್ತೆ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಕುಟುಂಬ ಸದಸ್ಯರೊಂದಿಗೆ ಚರ್ಚಿಸುತ್ತೇವೆ. ಸದ್ಯ ನಾವೆಲ್ಲಾ ಇಲ್ಲಿಯೇ ಇದ್ದು ನಮ್ಮ ಅತ್ತೆ ಅವರನ್ನು ನೋಡಿಕೊಳ್ಳುತ್ತೇವೆ ಎಂದರು.

ಇಲ್ಲಿ ನಾವು ಯಾವುದೇ ಒತ್ತಡದಿಂದ ಬಂದಿಲ್ಲ. ಘಟನೆಯ ಕುರಿತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹೆಚ್ಚಿಗೆ ಹೇಳಲು ಇಷ್ಟ ಪಡಲ್ಲಾ ಸದ್ಯ ತನಿಖೆ ನಡೆಯುತ್ತಿದೆ. ಮುಂದೆ ದೇವರು ಏನೇನು ಬುದ್ದಿ ಕೊಡುತ್ತಾನೋ, ಏನೇನು ದಾರಿ ತೋರಿಸುತ್ತಾನೋ ನೋಡೋಣವೆಂದು ಯುವತಿ ತಂದೆ ಹೇಳಿದ್ದಾರೆ.

ಡಿಕೆಶಿ ವಿರುದ್ಧ ಮಾಡಿರುವ ಆರೋಪದ ಕುರಿತು ಎಸ್‌ಐಟಿ ತನಿಖಾಧಿಕಾರಿಗಳಿಗೆ ರೆಕಾರ್ಡಿಂಗ್ ಹಾಗೂ ಇತರೆ ಮಾಹಿತಿ ನೀಡಿದ್ದೇವೆ. ಮುಂದೆ ಏನಾಗತ್ತೋ ಎಂದು‌ ನೋಡೋಣ. ನಮ್ಮ ಮಗಳಿಗೆ ಈಗಾಗಲೇ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮಗಳ ಭೇಟಿಗೆ ಅವಕಾಶ‌ ನೀಡಬೇಕೆಂದು ಪತ್ರ ನೀಡಿದ್ದೇವೆ. ತನಿಖೆಗಾಗಿ ಅಧಿಕಾರಿಗಳು ಮಗಳ ಭೇಟಿಗೆ ಅವಕಾಶ ನೀಡಿ ಯಾವಾಗ ಕರೆಯುತ್ತಾರೋ ಆಗ ಹೋಗುತ್ತೇವೆ ಎಂದು ಯುವತಿ ತಂದೆ ಹೇಳಿದರು.


SHARE THIS

Author:

0 التعليقات: