Saturday, 10 April 2021

ಇಂದಿನಿಂದ 8 ಜಿಲ್ಲೆಗಳಲ್ಲಿ ಕೊರೊನಾ ನೈಟ್ ಕರ್ಫ್ಯೂ, ಬೆಂಗಳೂರಲ್ಲಿ ಕಟ್ಟೆಚ್ಚರ

 

ಇಂದಿನಿಂದ 8 ಜಿಲ್ಲೆಗಳಲ್ಲಿ ಕೊರೊನಾ ನೈಟ್ ಕರ್ಫ್ಯೂ, ಬೆಂಗಳೂರಲ್ಲಿ ಕಟ್ಟೆಚ್ಚರ

ಬೆಂಗಳೂರು,ಏ.10- ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಜಾರಿ ಮಾಡಲು ಉದ್ದೇಶಿಸಿರುವ ಕೊರೊನಾ ಕಫ್ರ್ಯೂ ರಾಜ್ಯದ 8 ಜಿಲ್ಲೆಗಳಲ್ಲಿ ಇಂದು ರಾತ್ರಿ ಜಾರಿಯಾಗುವುದರಿಂದ ನಗರಗಳ ಬಹುತೇಕ ಚಟುವಟಿಕೆಗಳು ಸ್ತಬ್ದಗೊಳ್ಳಲಿವೆ. ರಾಜಧಾನಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ಮಾತ್ರ ಕರ್ಫ್ಯೂ ಜಾರಿಯಾಗಲಿದೆ.

ಹಿಂದಿಗಿಂತಲೂ ಈ ಬಾರಿ ಕೊರೊನಾ ಕಫ್ರ್ಯೂನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದು, ಇದು ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಲಿದೆ. ಗ್ರಾಮೀಣ ಭಾಗಗಳಿಗೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ರಾಜ್ಯದ 8 ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅತ್ಯಾವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳಿಗೆ ಸರ್ಕಾರ ನಿರ್ಬಂಧ ಹಾಕಿದೆ.

ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ಸಹಾಯಕರು ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದು. ವೈದ್ಯಕೀಯ ಸೇವೆಗಳು, ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳು, ಸಂಸ್ಥೆಗಳು ಯಥಾಸ್ಥಿತಿಯಲ್ಲಿ ಕೆಲಸ ನಿರ್ವಹಿಸಬಹುದು. ಆದರೆ ಕಾರ್ಮಿಕರು, ನೌಕರರು ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಅವಧಿಗೂ ಮುನ್ನವೇ ಕರ್ತವ್ಯಕ್ಕೆ ಹಾಜರಾಗಬೇಕಿದೆ.

ಅತ್ಯಾವಶ್ಯಕ ಸೇವೆಗಳನ್ನು ಒದಗಿಸುವ ವಾಹನಗಳು, ಸರಕು ಸಾಗಾಣಿಕೆ ವಾಹನಗಳು, ಹೋಂ ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿರುತ್ತದೆ. ರಾತ್ರಿ ಪಾಳಿಯಲ್ಲಿನ ಬಸ್, ರೈಲು, ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಪಾಸ್ ಪಡೆದು ಆಟೋ, ಕ್ಯಾಬ್ ಮೂಲಕ ಸಂಚರಿಸಬಹುದು.

ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕೊರೊನಾ ಕಫ್ರ್ಯೂ ಇಂದು ರಾತ್ರಿಯಿಂದ ಜಾರಿಯಾಗಲಿದ್ದು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ , ಪಬ್, ಸಿನಿಮಾ ಮಂದಿರ ಬಂದ್ ಆಗಲಿವೆ. ಕೊರೊನಾ ಕರ್ಫ್ಯೂ ಇದ್ದರೂ ಕೂಡ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಸರ್ಕಾರಿ , ಖಾಸಗಿ, ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬೇಕು. ಸಾಮಥ್ರ್ಯಕ್ಕಿಂತ ಹೆಚ್ಚು ಜನರಿಗೆ ಅವಕಾಶವಿರುವುದಿಲ್ಲ.

 ರಾಜಧಾನಿಯಲ್ಲಿ ಕಟ್ಟೆಚ್ಚರ:

ಕಳೆದ 15 ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ನಗರದಾದ್ಯಂತ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಇಂದು ರಾತ್ರಿಯಿಂದ 10 ದಿನಗಳ ಕಾಲಕೊರೊನಾ ಕರ್ಫ್ಯೂ ವಿಧಿಸಿರುವ ಸಂಬಂಧ ಸುಖಾಸುಮ್ಮನೆ ಸಂಚರಿಸಿದರೆ ವಾಹನ ಸೀಜ್ ಮಾಡಲಾಗುತ್ತದೆ.

ಈಗಾಗಲೇ 144 ಸೆಕ್ಷನ್ ನಗರದಲ್ಲಿ ಜಾರಿಯಲ್ಲಿರುತ್ತದೆ. ಇದರಂತೆ 10 ಗಂಟೆ ಮೇಲೆ ಯಾರಾದರೂ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸುವುದಲ್ಲದೆ ವಾಹನ ಜಪ್ತಿಯಾಗಲಿದೆ. ವೈದ್ಯಕೀಯ ಹಾಗೂ ಅಗತ್ಯ ಸೇವೆಗಳಿಗೆ ವಾಹನಗಳ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ. ತಪಾಸಣೆ ವೇಳೆ ಸಂಬಂಧಪಟ್ಟ ದಾಖಲೆ ತೋರಿಸಬೇಕು. ರಾತ್ರಿ ಪಾಳಿ ಕೆಲಸ ಮಾಡುವವವರು ರಾತ್ರಿ 10ರೊಳಗೆ ಕೆಲಸ ಮಾಡುವ ಸ್ಥಳದಲ್ಲಿ ಇರಬೇಕು. ತಡವಾಗಿ ರಸ್ತೆಗಿಯಲು ಅವರಿಗೂ ಅವಕಾಶ ಇಲ್ಲ. ತುರ್ತು ಸೇವೆಗಳ ಓಡಾಟಕ್ಕೆ ಅವಕಾಶ ಇದೆ.

ಹೊಂ ಡೆಲಿವರಿ, ಗೂಡ್ಸ್ ವೆಹಿಕಲ್‍ಗೆ ಅವಕಾಶ ಇದೆ. ರಾತ್ರಿ ಬೆಂಗಳೂರಿಗೆ ಬರುವ ಹಾಗೂ ಹೊಗುವವರು ರೈಲು, ಬಸ್, ವಿಮಾನದ ಟಿಕೆಟ್ ಹಿಡಿದು ಸಂಚಾರ ಮಾಡಬಹುದು. ಆದರೆ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ರಾತ್ರಿ ಅಂಗಡಿ ಮುಂಗಟ್ಟು ತೆರೆದಿದ್ದರೆ ಮಾಲೀಕರ ವಿರುದ್ದ ಎನ್‍ಡಿಎಂಎ ಅಡಿ ಕೇಸ್ ದಾಖಲಿಸಲಾಗುವುದು. ಪ್ರಯಾಣಿಕರಿದ್ದಾಗ ಮಾತ್ರ ಒಲಾ ಊಬರ್ ಓಡಾಟ ನಡೆಸಬಹುದು.

ತುರ್ತು ಸಂದರ್ಭದಲ್ಲಿ ಓಡಾಡುವವರಿಗೆ ಯಾವುದೇ ಪಾಸ್ ನೀಡುವ ಪ್ರಶ್ನೆ ಉದ್ಭವಿಸಲ್ಲ. ಸಂಬಂದಪಟ್ಟ ದಾಖಲಾತಿ ಅಥವಾ ಗುರುತಿನ ಚೀಟಿ ಹೊಂದಿರುವುದೇ ಪಾಸ್ ಆಗಿರಲಿದೆ. ಮಾಸ್ಕ್, ಪೇಸ್ ಶೀಲ್ಡ್, ಸ್ಯಾನಿಟೈಜರ್ ಜೊತೆಗೆ ಪೆÇಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.


SHARE THIS

Author:

0 التعليقات: