Tuesday, 6 April 2021

ಸಾರಿಗೆ ನೌಕರರ ಮುಷ್ಕರ : '6 ನೇ ವೇತನ ಆಯೋಗ' ಜಾರಿ ಇಲ್ಲವೇ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ


ಸಾರಿಗೆ ನೌಕರರ ಮುಷ್ಕರ : '6 ನೇ ವೇತನ ಆಯೋಗ' ಜಾರಿ ಇಲ್ಲವೇ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಳಗಾವಿ : 6 ನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ನಾಳೆ ಸಾರಿಗೆ ನೌಕರರು ಮುಷ್ಕರ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ 6 ನೇ ವೇತನ ಆಯೋಗ ಜಾರಿ ಇಲ್ಲವೇ ಇಲ್ಲ, 6 ನೇ ವೇತನ ಆಯೋಗ ಜಾರಿ ಮಾಡಲು ಸಾಧ್ಯವಿಲ್ಲ, ಉದ್ದೇಶಪೂರ್ವಕವಾಗಿ ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮುಂದುವರೆದ ಮಾತನಾಡಿದ ಅವರು ಬೆಳಗಾವಿ ಗಡಿಯಲ್ಲಿ ಕೊರೊನಾ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ಜನರು ಕಟ್ಟೆಚ್ಚರ ವಹಿಸಬೇಕು, ಮಾಸ್ಕ್., ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.SHARE THIS

Author:

0 التعليقات: