Tuesday, 20 April 2021

ಉತ್ತರಪ್ರದೇಶದ 5 ನಗರಗಳಲ್ಲಿ ಲಾಕ್ ಡೌನ್ ಇಲ್ಲ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

 

ಉತ್ತರಪ್ರದೇಶದ 5 ನಗರಗಳಲ್ಲಿ ಲಾಕ್ ಡೌನ್ ಇಲ್ಲ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಲಕ್ನೊ ಸಹಿತ ಐದು ನಗರಗಳಲ್ಲಿ ಸದ್ಯಕ್ಕೆ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಕೊರೋನ ಸೋಂಕು ಹರಡುವುದನ್ನು ತಡೆಯಲು ಐದು ನಗರಗಳಲ್ಲಿ ಲಾಕ್ ಡೌನ್ ಹೇರಬೇಕೆಂಬ ಅಲಹಾಬಾದ್ ಹೈಕೋರ್ಟ್ ಸೋಮವಾರ ಸಂಜೆ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಇಂದು ತಡೆ ವಿಧಿಸಿದೆ.

ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

 ಲಕ್ನೊ, ಪ್ರಯಾಗ್ ರಾಜ್, ವಾರಣಾಸಿ, ಕಾನ್ಪುರ ಹಾಗೂ ಗೋರಖ್ ಪುರ ಸಹಿತ ಐದು ನಗರಗಳಲ್ಲಿ ಎಪ್ರಿಲ್ 26ರ ತನಕ ಲಾಕ್ ಡೌನ್ ವಿಧಿಸಲು ಅಲಹಾಬಾದ್ ಹೈಕೋರ್ಟ್  ಆದೇಶಿಸಿತ್ತು. ಆದರೆ  ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರವು ರಾಜ್ಯದ 5 ನಗರಗಳಲ್ಲಿ ಲಾಕ್ ಡೌನ್ ಜಾರಿಗೆ ತರಲು ನಿರಾಕರಿಸಿತ್ತು. 

ನ್ಯಾಯಾಂಗದ ಆದೇಶದ ಪ್ರಕಾರ ಐದು ನಗರಗಳಿಗೆ ಬೀಗ ಹಾಕುವುದು ಸರಿಯಾದ ವಿಧಾನವಲ್ಲ. ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇಂತಹ ಲಾಕ್ ಡೌನ್ ಅಗತ್ಯವಿಲ್ಲ.ನಮಗೆ ಜೀವ ಹಾಗೂ ಜೀವನೋಪಾಯ ಎರಡನ್ನೂ ರಕ್ಷಿಸಬೇಕಾಗಿದೆ ಎಂದು ಉತ್ತರಪ್ರದೇಶ ಸರಕಾರ ವಾದಿಸಿತು. SHARE THIS

Author:

0 التعليقات: