Saturday, 17 April 2021

5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ


5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಉಡುಪಿ : ಚಿರತೆ ದಾಳಿಯಿಂದ ನಾಯಿ/ಹಸು ಬಲಿ, ಚಿರತೆ ಬೋನಿಗೆ ಇತ್ಯಾದಿ ಸುದ್ದಿಗಳನ್ನು ಆಗಾಗ್ಗೆ ಮಾಧ್ಯಮಗಳಲ್ಲಿ ನೋಡುತ್ತೇವೆ. ಕಾಡು ನಾಶದಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ ಎಂಬ ಕಾರಣ ನಿಜವಾದರೂ ಕಾಡು ನಾಶವಾಗುತ್ತಿದ್ದರೂ ವನ್ಯಜೀವಿಗಳ ಸಂಖ್ಯೆ ಏರುತ್ತಲ್ಲಿದೆ ಎಂಬ ಇನ್ನೊಂದು ಸತ್ಯವೂ ಗೋಚರಿಸುತ್ತಿದೆ.

ಸರಕಾರದ ವನ್ಯಜೀವಿ ರಕ್ಷಣ ಕಾಯಿದೆಯಂತೆ ಅರಣ್ಯ ಇಲಾಖೆಯವರು ಮಾಡುತ್ತಿರುವ ಸಂರಕ್ಷಣ ಪ್ರಯತ್ನಗಳೂ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿವೆ.

2014ರಲ್ಲಿ ಭಾರತದಲ್ಲಿ ಚಿರತೆಯ ಗಣತಿ ನಡೆದಿದ್ದು ಬಳಿಕ 2020ರಲ್ಲಿ ಮತ್ತೆ ನಡೆಯಿತು. ರಾಜ್ಯದಲ್ಲಿಯೂ ಶೇ. 60ರಷ್ಟು ಚಿರತೆಗಳ ಸಂಖ್ಯೆ ಜಾಸ್ತಿಯಾಗಿದೆ.

ಕರ್ನಾಟಕ ದ್ವಿತೀಯ

2018ರ ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ವರದಿಯಂತೆ ಮಧ್ಯಪ್ರದೇಶ ಹೊರತುಪಡಿಸಿದರೆ ಅನಂತರದ ಸ್ಥಾನ ಕರ್ನಾಟಕಕ್ಕೆ ಇದೆ. ರಾಜ್ಯದಲ್ಲಿ 1,783 ಚಿರತೆಗಳಿವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಒಟ್ಟು 3,387 ಚಿರತೆಗಳಿದ್ದು ಗೋವಾದಲ್ಲಿ 86, ಕರ್ನಾಟಕದಲ್ಲಿ 1,783, ಕೇರಳದಲ್ಲಿ 650, ತಮಿಳುನಾಡಿನಲ್ಲಿ 868 ಇವೆ.

ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಅವರು ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 2,500 ಚಿರತೆಗಳಿವೆ. ಮಾನವ ಜನಸಂಖ್ಯೆ ವಿಸ್ತರಣೆಯಾಗುತ್ತಲೇ ಚಿರತೆ-ಮಾನವ ಘರ್ಷಣೆ ಯಾಗುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ.

ಮಾನವ ಜೀವ ಹಾನಿಗೆ 7.5 ಲ.ರೂ. ಪರಿಹಾರ ನೀಡುತ್ತಿದ್ದು, ಮುಂದೆ ಜಾನುವಾರು ಜೀವಹಾನಿಗೆ ಕೊಡುವ ಪರಿಹಾರ ಹೆಚ್ಚಿಸುವ ಸಾಧ್ಯತೆ ಇದೆ

ಚಿರತೆಗಳ ಸಂಖ್ಯೆ ವೃದ್ಧಿ ಯಾಗಿರುವುದನ್ನು ಅಂಕಿ – ಅಂಶಗಳು ದೃಢಪಡಿಸಿವೆ. ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಎರಡು ಪಟ್ಟು ಜಾಸ್ತಿಯಾಗಿದೆ. ಚಿರತೆಗಳಂತೆ ಇತರ ಪ್ರಾಣಿಗಳ ಸಂಖ್ಯೆಯೂ ಹೆಚ್ಚಿಗೆ ಆಗಿರುವ ಸಾಧ್ಯತೆ ಇದೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ.SHARE THIS

Author:

0 التعليقات: