Sunday, 4 April 2021

ಸೋರಿಕೆಯಾಗಿದೆ 50 ಕೋಟಿ ಫೇಸ್​ಬುಕ್ ಬಳಕೆದಾರರ ಖಾಸಗಿ ಮಾಹಿತಿ !


 ಸೋರಿಕೆಯಾಗಿದೆ 50 ಕೋಟಿ ಫೇಸ್​ಬುಕ್ ಬಳಕೆದಾರರ ಖಾಸಗಿ ಮಾಹಿತಿ !

ನ್ಯೂಯಾರ್ಕ್: ಬಳಕೆದಾರರ ಡೆಟಾ ಸುರಕ್ಷತೆ ಬಗ್ಗೆ ಫೇಸ್​ಬುಕ್​ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತವೆ. ಇದೀಗ ಇಂತಹದೇ ಮತ್ತೊಂದು ಗಂಭೀರ ಆರೋಪ ಫೇಸ್​ಬುಕ್​ ಬಗ್ಗೆ ಕೇಳಿ ಬಂದಿದೆ.

ಫೇಸ್​ಬುಕ್​​ನ ಸುಮಾರು 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಅಮೆರಿಕದ Hudson Rock cybercrime intelligence firm ಎಂಬ ಸಂಸ್ಥೆ ಹೇಳಿದೆ.

ಬಳಕೆದಾರರ ಮೊಬೈಲ್ ನಂಬರ್, ಇ ಮೇಲ್ ಐಡಿ ಹಾಗೂ ಖಾಸಗಿ ಮಾಹಿತಿಗಳನ್ನು ಫೇಸ್​​ಬುಕ್​ನಿಂದ ಹ್ಯಾಕರ್​ಗಳು ಕದ್ದಿದ್ದಾರೆ ಎಂದು Hudson Rock ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಅಲೋನ್ ಗಲ್ ಇತ್ತೀಚೆಗೆ ಹೇಳಿದ್ದಾರೆ. ಇದು ಖಂಡಿತವಾಗಿಯೂ ಫೇಸ್​ಬುಕ್​ನ ನಿರ್ಲಕ್ಷ್ಯದಿಂದ ಆಗಿರುವ ದುರ್ಘಟನೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ಅಲೋನ್ ಗಲ್ ಅವರ ಆರೋಪವನ್ನು ಫೇಸ್​ಬುಕ್ ನಿರಾಕರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಅಲೊನ್ ಗಲ್ ಹೇಳುವ ಆರೋಪ, ಅದು 2019 ಕ್ಕೆ ಸಂಬಂಧಿಸಿದ ಆರೋಪವಾಗಿದೆ. ಇದರಲ್ಲೇನು ಹೊಸತಿಲ್ಲ. ಆದರೆ, ಫೇಸ್​ಬುಕ್​ನ ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.


SHARE THIS

Author:

0 التعليقات: