ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ; ಏಪ್ರಿಲ್ 5 ರಿಂದ ಈ ರೈಲುಗಳಿಗೆ ರಿಸರ್ವೇಷನ್ ಬೇಡ
ನವದೆಹಲಿ: ಕರೊನಾ ಕಾರಣದಿಂದಾಗಿ ರೈಲ್ವೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಯಾವುದೇ ರೈಲಿನಲ್ಲಿ ಸಂಚರಿಸುವುದಕ್ಕೆ ಮುಂಗಡ ಬುಕ್ಕಿಂಗ್ ಅತ್ಯಗತ್ಯ ಎನ್ನುವ ನಿಯಮ ಮಾಡಲಾಗಿತ್ತು. ಆದರೆ ಇದೀಗ ಆ ನಿಯಮದಲ್ಲಿ ಸಡಿಲಿಕೆ ತರಲಾಗಿದ್ದು, ರಿಸರ್ವೇಷನ್ ಇಲ್ಲದೆಯೂ ಸಂಚರಿಸುವುದಕ್ಕೆ ಇಲಾಖೆ ಅವಕಾಶ ಮಾಡಿಕೊಡಲು ಮುಂದಾಗಿದೆ.
ಏಪ್ರಿಲ್ 5ರಿಂದ 71 ರೈಲುಗಳಲ್ಲಿ ಸಂಚರಿಸುವುದಕ್ಕೆ ಮುಂಗಡ ಬುಕ್ಕಿಂಗ್ ಅವಶ್ಯಕತೆಯನ್ನು ತೆಗದುಹಾಕಲಾಗಿದೆ. ಈ ರೈಲುಗಳಲ್ಲಿ ಸಂಚರಿಸಲು ಬಯಸುವವರು ಈ ಹಿಂದಿನಂತೆಯೇ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಯೇ ಟಿಕೆಟ್ ಖರೀದಿಸಬಹುದಾಗಿದೆ.
0 التعليقات: