Saturday, 24 April 2021

ಬೇಕಲ: 40 ಕೋಟಿ ರೂ. ಮುಖಬೆಲೆಯ ನಕಲಿ ನೋಟು ಸಹಿತ ಮೂವರ ಬಂಧನ

 

ಬೇಕಲ: 40 ಕೋಟಿ ರೂ. ಮುಖಬೆಲೆಯ ನಕಲಿ ನೋಟು ಸಹಿತ ಮೂವರ ಬಂಧನ

ಕಾಸರಗೋಡು, ಎ.25: ಸುಮಾರು 40 ಕೋಟಿ ರೂ. ಮುಖಬೆಲೆಯ ಫ್ಯಾನ್ಸಿ ನೋಟು ಹಾಗೂ ಆರು ಲಕ್ಷ ರೂ. ಅಸಲಿ ಕರೆನ್ಸಿ ಸಹಿತ ಮೂವರು ವಂಚಕರನ್ನು ಬೇಕಲ ಠಾಣಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ .

ಮಹಾರಾಷ್ಟ್ರ ಮೂಲದ ಪ್ರಸಕ್ತ ಮಂಗಳೂರಿನಲ್ಲಿ ವಾಸವಾಗಿರುವ ನವಾಬ್ ಮಲಿಕ್ ಸಲೀಂ ಶೇಖ್ (37), ಪುಣೆಯ ಅಂಶಿಬ್  ಅರ್ಜುನ್ (35) ಹಾಗೂ ಸೋಲಾಪುರದ ಪರಮೇಶ್ವರ ನರ್ಸುಮ(45) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಕಾಸರಗೋಡು ಕಡೆಯಿಂದ ಕಾಞ೦ಗಾಡಿಗೆ ನಕಲಿ ನೋಟಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಉದುಮದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಾಹನ ತಪಾಸಣೆ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ನೋಟಗಳ ಸಾಗಾಟ ಪತ್ತೆಯಾಗಿದೆ.

ಕಾರಿನಲ್ಲಿ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳಿದ್ದವು. ಹೆಚ್ಚಿನವು ಫ್ಯಾನ್ಸಿ ನೋಟುಗಳಾಗಿದ್ದವು. ಅಸಲಿ ಕರೆನ್ಸಿ ನೋಟುಗಳ ಕಟ್ಟುಗಳ ಎರಡೂ ಬದಿಗಳಲ್ಲಿ ಅಸಲಿ ನೋಟುಗಳನಿಟ್ಟು ಮಧ್ಯೆ ಫ್ಯಾನ್ಸಿ ನೋಟುಗಳನ್ನು ಇಡಲಾಗಿತ್ತು. ಪೆಟ್ಟಿಗೆಗಳಲ್ಲಿ ಹಾಗೂ ಗೋಣಿಚೀಲಗಳಲ್ಲಿ ತುಂಬಿಸಿ ಈ ನೋಟುಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 ಸಿನೆಮಾ ಚಿತ್ರೀಕರಣಕ್ಕೆ ಈ ನೋಟುಗಳನ್ನು ಕೊಂಡೊಯ್ಯುತ್ತಿದ್ದುದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ. ಆದರೆ ತನಿಖೆಯಿಂದ ಸಿನೆಮಾದೊಂದಿಗೆ ಇವರಿಗೆ ನಂಟಿಲ್ಲ ಎಂದು ಸಾಬೀತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮಂಗಳೂರು ಮತ್ತು ಮುಂಬೈಯಲ್ಲಿ ಮೊಕದ್ದಮೆಗಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


SHARE THIS

Author:

1 comment: