Friday, 2 April 2021

ಮ್ಯಾನ್ಮಾರ್: 40ಕ್ಕೂ ಅಧಿಕ ಮಕ್ಕಳ ಸಾವು: ಸೇನಾಡಳಿತಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಿಂದನೆ


ಮ್ಯಾನ್ಮಾರ್: 40ಕ್ಕೂ ಅಧಿಕ ಮಕ್ಕಳ ಸಾವು: ಸೇನಾಡಳಿತಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಿಂದನೆ

ಮ್ಯಾನ್ಮಾರ್: ಸೈನಿಕರ ದಮನ ಕಾರ್ಯಾಚರಣೆಯಲ್ಲಿ 40ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನ ಸೇನಾ ಸರಕಾರವು ಶುಕ್ರವಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾಗಿದೆ. ಅದೂ ಅಲ್ಲದೆ, ನೂರಾರು ಜನರು ನಾಪತ್ತೆಯಾಗಿದ್ದು, ಸೇನೆಯ ವಿರುದ್ಧ ಜನರ ಆಕ್ರೋಶ ಹೆಚ್ಚಿದೆ.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೇನೆಯು ದೇಶದ ಸರಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಪ್ರತಿಭಟನಕಾರರ ವಿರುದ್ಧ ಸೇನೆ ನಡೆಸಿರುವ ಅಮಾನುಷ ದಮನ ಕಾರ್ಯಾಚರಣೆಯಲ್ಲಿ 44 ಮಕ್ಕಳೂ ಸೇರಿದಂತೆ 543 ನಾಗರಿಕರು ಮೃತಪಟ್ಟಿದ್ದಾರೆ ಎಂದು ರಾಜಕೀಯ ಕೈದಿಗಳ ಸಹಾಯಕ ಸಂಘಟನೆ (ಎಎಪಿಪಿ) ಹೇಳಿದೆ.

ಇತ್ತೀಚಿನ ವಾರಗಳಲ್ಲಿ ಜನರ ಮೇಲೆ ಸೇನೆ ನಡೆಸುತ್ತಿರುವ ಹಿಂಸೆಯಲ್ಲಿ ಹೆಚ್ಚಳವಾಗಿದ್ದು, ಕಳೆದ 12 ದಿನಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ ಎಂದು ಅಂತರ್‌ರಾಷ್ಟ್ರಿಯ ಸಂಘಟನೆ ‘ಸೇವ್ ದ ಚಿಲ್ಡ್ರನ್’ ಹೇಳಿದೆ.
SHARE THIS

Author:

0 التعليقات: