Tuesday, 13 April 2021

ಮೊಹಲ್ಲಾ ಸಭಲೀಕರಣಕ್ಕೆ ಪದ್ಧತಿ ಹಾಕುವೆವು, 35 ಮೊಹಲ್ಲಾಗಳ ಸಂಯುಕ್ತ ಖಾಝಿಯಾಗಿ ಸುಲ್ತಾನುಲ್ ಉಲಮ


 ಮೊಹಲ್ಲಾ ಸಭಲೀಕರಣಕ್ಕೆ ಪದ್ಧತಿ ಹಾಕುವೆವು,
35 ಮೊಹಲ್ಲಾಗಳ ಸಂಯುಕ್ತ ಖಾಝಿಯಾಗಿ ಸುಲ್ತಾನುಲ್ ಉಲಮ

ಕಾಸರಗೋಡು: ಜಿಲ್ಲೆಯ 35 ಮೊಹಲ್ಲಾಗಳು ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರನ್ನು ಖಾಝಿಯಾಗಿ ಬೈಅತ್ ಮಾಡಿದವು.

 ತಾಜುಶ್ಶರೀಅ ಅಲಿ ಕುಞ್ಞಿ ಉಸ್ತಾದ್ ರವರ ವಿಯೋಗದಿಂದ ತೆರವಾದ ಖಾಝಿ ಸ್ಥಾನಕ್ಕೆ ಸುಲ್ತಾನುಲ್ ಉಲಮ ರವರನ್ನು ಖಾಝಿಯಾಗಿ ಆಯ್ಕೆ ಮಾಡಲಾಯಿತು. 

ಮೊಹಲ್ಲಾಗಳ ಸಮಗ್ರವಾದ ಅಭಿವೃದ್ಧಿಗಾಗಿ ಆವಶ್ಯಕವಾದ ಪದ್ಧತಿಗಳನ್ನು ಆವಿಷ್ಕರಿಸುವೆವು ಕುಟುಂಬ ಸಮಸ್ಯೆಗಳನ್ನು ನ್ಯಾಯಾಲಯಗಳಿಗೆ ಹೋಗದೆ ಮೊಹಲ್ಲಾಗಳಲ್ಲಿಯೇ ಹೇಳಿ ಪರಿಹರಿಸಲು ವ್ಯವಸ್ಥೆ ಮಾಡುವೆವು ಎಂದು ಖಾಝೀ ಸ್ಥಾನ ವಹಿಸಿಕೊಂಡು ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಪುತ್ತಿಗೆ ಮುಹಿಮ್ಮಾತ್ ಆಸ್ಥಾನವಾಗಿಸಿ ಖಾಝೀ ಹೌಸ್ ಕಾರ್ಯಾಚರಿಸುತ್ತದೆ.

ಪುತ್ತಿಗೆ ಮುಹಿಮ್ಮಾತಿನಲ್ಲಿ ನಡೆದ ಖಾಝೀ ಸ್ಥಾನಾರೋಹನ ಕಾರ್ಯಕ್ರಮದಲ್ಲಿ ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರೆಸಿಡೆಂಟ್ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಅಧ್ಯಕ್ಷತೆ ವಹಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರು ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೊತ್ ಉದ್ಘಾಟಿಸಿದರು.  ಸಯ್ಯಿದ್ ಪಿ.ಎಸ್ ಆಟಕೋಯ ತಂಙಳ್ ದುಆ ಮಾಡಿದರು. ಹುಸೈನ್ ಸಅದಿ ಕೆ.ಸಿ ರೋಡ್, ತಾಜುಶ್ಶರೀಅ ಅನುಸ್ಮರಣಾ ಪ್ರಭಾಷಣ ಮಾಡಿದರು. ಸಯ್ಯಿದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ, ಸಯ್ಯಿದ್ ಇಬ್ರಾಹೀಂ ಹಾದಿ ತಂಙಳ್ ಚೂರಿ, ಮುಹಮ್ಮದ್ ಅಲಿ ಸಖಾಫಿ ತೃಕರಿಪ್ಪೂರ್, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಮೊಯ್ದು ಸಅದಿ ಚೇರೂರ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಮೂಸಲ್ ಮದನಿ ಅಲ್ ಬಿಶಾರ, ಅಬ್ದುಲ್ ಮಜೀದ್ ಫೈಝಿ ಪೊಯ್ಯತ್ತಬೈಲ್, ಮುಹಮ್ಮದ್ ಸಖಾಫಿ ಪಾತೂರ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸುಲೈಮಾನ್ ಕರಿವೆಲ್ಲೂರ್, ಬಶೀರ್ ಪುಳಿಕ್ಕೂರ್, ಹಾಜಿ ಅಮೀರಲಿ ಚೂರಿ, ಮೂಸ ಸಖಾಫಿ ಕಳತ್ತೂರ್, ಉಮರ್ ಸಖಾಫಿ ಕರ್ನೂರ್, ಝಕರಿಯ್ಯಾ ಫೈಝಿ, ಲಂಡನ್ ಮುಹಮ್ಮದ್ ಹಾಜಿ, ಅಂದುಞ್ಞಿ ಮೊಗರ್, ಇತ್ತಿಹಾದ್ ಮುಹಮ್ಮದ್ ಹಾಜಿ, ಪಾರಪ್ಪಳ್ಳಿ ಅಬ್ದುಲ್ ಖಾದರ್ ಹಾಜಿ, ಡಿ.ಎಂ.ಕೆ ಪೊಯ್ಯತ್ತಬೈಲ್, ನಾಸಿರ್ ಬಂದಾಡ್ ಮುಂತಾದವರು ಭಾಗವಹಿಸಿದರು. ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ ಸ್ವಾಗತ ಮತ್ತು ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಕೃತಜ್ಞತೆ ಸಲ್ಲಿಸಿದರು.



SHARE THIS

Author:

0 التعليقات: