Monday, 12 April 2021

ಷೇರು ಮಾರುಕಟ್ಟೆ ಖಾತೆದಾರರಿಗೆ ಬಿಗ್‌ ಶಾಕ್:‌ 'ಡಾರ್ಕ್‌ ವೆಬ್‌'ನಲ್ಲಿ 25 ಲಕ್ಷ ಗ್ರಾಹಕರ ಡೇಟಾ ಲೀಕ್ʼ


ಷೇರು ಮಾರುಕಟ್ಟೆ ಖಾತೆದಾರರಿಗೆ ಬಿಗ್‌ ಶಾಕ್:‌ 'ಡಾರ್ಕ್‌ ವೆಬ್‌'ನಲ್ಲಿ 25 ಲಕ್ಷ ಗ್ರಾಹಕರ ಡೇಟಾ ಲೀಕ್ʼ

ಡಿಜಿಟಲ್‌ ಡೆಸ್ಕ್:‌ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯೊಂದಿಗೆ ಲಾಭ ಗಳಿಸಲು ಯಾರ್ ತಾನೇ ಬಯಸುವುದಿಲ್ಲ. ಖಾತೆದಾರರಂತೂ ಷೇರುಗಳನ್ನ ಖರೀದಿಸಲು ಮತ್ತು ಲಾಭ ಗಳಿಸಲು ಯೋಜಿಸುತ್ತಲೇ ಇರ್ತಾರೆ. ಇಲ್ಲಿ ಲಕ್ಷ, ಕೋಟಿಗಳಲ್ಲಿ ವಹಿವಾಟು ನಡೆಯುತ್ತೆ. ಹಾಗಾಗಿ ಭಾರಿ ಭದ್ರತೆ ಇರುತ್ತೆ. ಶಾಕಿಂಗ್‌ ಸಂಗತಿಯೆಂದ್ರೆ, ಇಲ್ಲಿಯೂ ಸೈಬರ್ ದಾಳಿ ನಡೆದಿದೆ ಮತ್ತು ಸುಮಾರು 25 ಲಕ್ಷ ಗ್ರಾಹಕರ ಡೇಟಾವನ್ನ ಲೂಟಿ ಮಾಡಲಾಗಿದೆ.

ಭಾರತದ ಎರಡನೇ ಅತಿದೊಡ್ಡ ಸ್ಟಾಕ್ ಬ್ರೋಕರ್ ಅಪ್ ಸ್ಟಾಕ್ಸ್ (Upstox) ಎನ್ನುವ ರೀಟೈಲ್ ಬ್ರೋಕಿಂಗ್ ಫಾರ್ಮ್ʼನಿಂದ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗ್ತಿದೆ. ಆದಾಗ್ಯೂ, ಕಂಪನಿಯು ಎಲ್ಲಾ ಸೆಕ್ಯುರಿಟಿಗಳು ಮತ್ತು ಗ್ರಾಹಕರ ಧನಸಹಾಯ ಸುರಕ್ಷಿತವಾಗಿದೆ ಎಂದು ಹೇಳುವ ಮೂಲಕ ಸಮಾಧಾನ ನೀಡಿದೆ. ಸೈಬರ್ ಭದ್ರತಾ ಫಾರ್ಮ್ʼನ್ನ ಸ್ಥಾಪಿಸಲು ಮತ್ತು ತನಿಖೆ ಮಾಡಲು ನಾವು ಆದೇಶಿಸಿದ್ದೇವೆ. ಯಾವುದೇ ತಪ್ಪುಗಳು ಆಗದಂತೆ ನಾವು ಖಚಿತಪಡಿಸುತ್ತೇವೆ ಎಂದಿದೆ.

ಹ್ಯಾಕರ್ʼಗಳು ಕಂಪನಿಗೆ ಸಂಬಂಧಿಸಿದ ಡೇಟಾವನ್ನ ಡಾರ್ಕ್ ವೆಬ್ʼನಲ್ಲಿ ಸ್ಯಾಂಪಲ್ ಆಗಿ ಮಾತ್ರ ಇಟ್ಟುಕೊಂಡಿದ್ದರು. ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಆಗುತ್ತದೆ. ಇನ್ನು ಸಹ ಸಂಸ್ಥಾಪಕ ಮತ್ತು ಸಿಇಒ ರವಿಕುಮಾರ್ ಹೇಳಿಕೆ ಬಿಡುಗಡೆ ಮಾಡಿದ್ದು, 'ಆರಂಭಿಕ ಎಚ್ಚರಿಕೆಯಾಗಿ, ಸುರಕ್ಷಿತ ಪಾಸ್ ವರ್ಡ್ʼನ್ನ ಒಟಿಪಿಯೊಂದಿಗೆ ವಹಿವಾಟು ನಡೆಸುವುದನ್ನ ನಾವು ಖಚಿತಪಡಿಸುತ್ತಿದ್ದೇವೆ' ಎಂದು ಹೇಳಿದರು.

ಡೇಟಾ ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಲು ನಾವು ದಿನದ 24 ಗಂಟೆಗಳ ಕಾಲ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಫೇಸ್ ಬುಕ್, ಲಿಂಕ್ಡ್ ಇನ್ ಮತ್ತು ಮೊಬಿಕ್ವಿಕ್ ನಂತಹ ಇತರ ಕಂಪನಿಗಳ ಡೇಟಾವನ್ನ ಸಂಗ್ರಹಿಸಲಾಗಿದೆ ಎಂದು ನಂಬಲಾಗಿದೆ. ಮೊಬಿಕ್ವಿಕ್ʼನಲ್ಲಿ 11 ಕೋಟಿ ಗ್ರಾಹಕರು ಡೇಟಾ ಉಲ್ಲಂಘನೆಯಾಗಿದೆ ಎಂದು ವರದಿಯಾಗಿದೆ.



SHARE THIS

Author:

0 التعليقات: