Tuesday, 6 April 2021

ಮುಂಬೈನಲ್ಲಿ ಕ್ರೂರಿ 'ಕೊರೊನಾ' ಅಟ್ಟಹಾಸ : 24 ಗಂಟೆಯಲ್ಲಿ 10,030 ಪ್ರಕರಣ ಪತ್ತೆ, 31 ಸಾವು


ಮುಂಬೈನಲ್ಲಿ ಕ್ರೂರಿ 'ಕೊರೊನಾ' ಅಟ್ಟಹಾಸ : 24 ಗಂಟೆಯಲ್ಲಿ 10,030 ಪ್ರಕರಣ ಪತ್ತೆ, 31 ಸಾವು

ಡಿಜಿಟಲ್ ಡೆಸ್ಕ್ : ಮುಂಬೈ ನಲ್ಲಿ ಮಂಗಳವಾರ 10,030 ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಮಂಗಳವಾರ 10,030 ಕೋವಿಡ್ ಪ್ರಕರಣ ದಾಖಲಾಗುವ ಮೂಲಕ ಮುಂಬೈಯಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,72,332 ಕ್ಕೆ ಏರಿದೆ.

ಕೊರೊನಾಗೆ ನಗರದಲ್ಲಿ 31 ಹೊಸ ಸಾವುಗಳು ದಾಖಲಾಗಿದ್ದು, ಈ ಮೂಲಕ ಮುಂಬಯಿಯಲ್ಲಿ ಕೋವಿಡ್ -19 ಸಾವಿನ ಸಂಖ್ಯೆ ಈಗ 11,828 ರಷ್ಟಿದೆ. ಇಂದು ಮುಂಬೈ ನಲ್ಲಿ 7,019 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಮುಂಬೈ ಜಿಲ್ಲೆಯಲ್ಲಿ ಚೇತರಿಕೆಯ ಪ್ರಮಾಣವು ಶೇಕಡಾ 81 ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.SHARE THIS

Author:

0 التعليقات: