Monday, 12 April 2021

ಕೊರೋನ ಸೋಂಕಿನಲ್ಲಿ ಭಾರತಕ್ಕೆ 2ನೇ ಸ್ಥಾನ, ಬ್ರೇಝಿಲ್ ಹಿಂದಿಕ್ಕೆ.


ಕೊರೋನ ಸೋಂಕಿನಲ್ಲಿ  ಭಾರತಕ್ಕೆ 2ನೇ ಸ್ಥಾನ, ಬ್ರೇಝಿಲ್ ಹಿಂದಿಕ್ಕೆ.

ಹೊಸದಿಲ್ಲಿ: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಸೋಮವಾರ ಬ್ರೆಝಿಲ್ ಅನ್ನು ಹಿಂದಿಕ್ಕಿದೆ. ಇದರೊಂದಿಗೆ ಭಾರತ ಕೊರೋನ ಸೋಂಕಿನಿಂದ ಅತಿ ತೀವ್ರವಾಗಿ ಬಾಧಿತವಾಗಿರುವ ಜಗತ್ತಿನ 2ನೇ ದೇಶವಾಗಿ ಹೊರಹೊಮ್ಮಿದೆ. ಜಗತ್ತಿನ ಪ್ರತಿ 6 ಕೊರೋನ ಸೋಂಕು ಪ್ರಕರಣಗಳಲ್ಲಿ 1 ಪ್ರಕರಣ ಭಾರತದಿಂದ ವರದಿಯಾಗುತ್ತಿದೆ. ಸೋಮವಾರದ ವರದಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ 1,68,912 ಹೊಸ ಪ್ರಕರಣಗಳು ದಾಖಲಾಗಿವೆ. 904 ಮಂದಿ ಸಾವನ್ನಪ್ಪಿದ್ದಾರೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೋನ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 1,35,27,717ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,01,009ಕ್ಕೆ ತಲುಪಿದೆ. 1,21,56,529 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ.SHARE THIS

Author:

0 التعليقات: