Thursday, 29 April 2021

ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 270 ಸೋಂಕಿತರು ಮೃತ್ಯು, 35 ಸಾವಿರ ಮಂದಿಗೆ ಸೋಂಕು


ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 270 ಸೋಂಕಿತರು ಮೃತ್ಯು, 35 ಸಾವಿರ ಮಂದಿಗೆ ಸೋಂಕು

ಬೆಂಗಳೂರು, ಎ.29: ರಾಜ್ಯದಲ್ಲಿ ಗುರುವಾರದಂದು 35,024 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 270 ಜನರು ಸೋಂಕಿಗೆ ಬಲಿಯಾಗಿದ್ದು, 14,142 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 14,74,846ಕ್ಕೆ ತಲುಪಿದ್ದು, 2,431 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 15,306ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 3,49,496ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

270 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 16, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 143, ಬೀದರ್ 5, ಚಾಮರಾಜನಗರ 7, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 1, ಧಾರವಾಡ 5, ಹಾಸನ 9, ಹಾವೇರಿ 6, ಕಲಬುರಗಿ 11, ಕೋಲಾರ 1, ಮಂಡ್ಯ 9, ಮೈಸೂರು 12, ರಾಮನಗರ 4, ಶಿವಮೊಗ್ಗ 3, ತುಮಕೂರು 9, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 35,024 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 302, ಬಳ್ಳಾರಿ 896, ಬೆಳಗಾವಿ 545, ಬೆಂಗಳೂರು ಗ್ರಾಮಾಂತರ 1,129, ಬೆಂಗಳೂರು ನಗರ 19,637, ಬೀದರ್ 180, ಚಾಮರಾಜನಗರ 359, ಚಿಕ್ಕಬಳ್ಳಾಪುರ 545,  ಚಿಕ್ಕಮಗಳೂರು 242, ಚಿತ್ರದುರ್ಗ 126, ದಕ್ಷಿಣ ಕನ್ನಡ 1,175, ದಾವಣಗೆರೆ 196, ಧಾರವಾಡ 427, ಗದಗ 132, ಹಾಸನ 624, ಹಾವೇರಿ 111, ಕಲಬುರಗಿ 957, ಕೊಡಗು 537, ಕೋಲಾರ 536, ಕೊಪ್ಪಳ 220, ಮಂಡ್ಯ 939, ಮೈಸೂರು 1,219, ರಾಯಚೂರು 628, ರಾಮನಗರ 183, ಶಿವಮೊಗ್ಗ 372, ತುಮಕೂರು 1,195, ಉಡುಪಿ 568, ಉತ್ತರ ಕನ್ನಡ 377, ವಿಜಯಪುರ 408, ಯಾದಗಿರಿ ಜಿಲ್ಲೆಯಲ್ಲಿ 259 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 143 ಜನರು ಸಾವು

ರಾಜಧಾನಿಯಲ್ಲಿ ಗುರುವಾರದಂದು 19,637 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 143 ಜನರು ಮೃತಪಟ್ಟಿದ್ದಾರೆ. 6,128 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 7,29,984 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 6282 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,86,183 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.SHARE THIS

Author:

0 التعليقات: