Thursday, 22 April 2021

18 ವರ್ಷ ಮೇಲ್ಪಟ್ಟವರಿಗೆ ಶನಿವಾರದಿಂದ ಕೋವಿಡ್‌ ಲಸಿಕೆ ನೋಂದಣಿಗೆ ಅವಕಾಶ


 18 ವರ್ಷ ಮೇಲ್ಪಟ್ಟವರಿಗೆ ಶನಿವಾರದಿಂದ ಕೋವಿಡ್‌ ಲಸಿಕೆ ನೋಂದಣಿಗೆ ಅವಕಾಶ

ಹೊಸದಿಲ್ಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭಿಸಲಾಗುವುದು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಶನಿವಾರ ಎಪ್ರಿಲ್‌ 24ರಿಂದ ಕೋವಿನ್‌ ವೆನ್‌ ಸೈಟ್‌ ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ. 18 ವರ್ಷ ಮೇಲ್ಪಟ್ಟವರು ಕೋವಿಡ್‌ ಲಸಿಕೆ ನೀಡಿಕೆಗಾಗಿ ಈ ಸೈಟ್‌ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಇಂದು ಒಟ್ಟು ಮೂರು ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ ಸೋಂಕಿಗೊಳಪಟ್ಟಿದ್ದು, ದೇಶದ ಕೋವಿಡ್‌ ಪರಿಸ್ಥಿತಿಯು ಆತಂಕಕರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಲ್ಲ ವಯಸ್ಕರಿಗೆ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ.

ಮುಂಚೂಣಿ ಕಾರ್ಮಿಕರು. ಆರೋಗ್ಯ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟವರು ಲಸಿಕೆಗೆ ಅರ್ಹರು ಎಂದು ಈ ಹಿಂದೆ ಘೋಷಿಸಿದ್ದನ್ನು ಕೇಂದ್ರ ಮುಂದುವರಿಸಲಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಅನ್ನು ಹೊರತುಪಡಿಸಿ, ರಷ್ಯಾದ ಸ್ಪುಟ್ನಿಕ್ ಅನ್ನು ಶೀಘ್ರದಲ್ಲೇ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.


SHARE THIS

Author:

0 التعليقات: