Monday, 26 April 2021

ಮಂಗಳವಾರ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಕೋವಿಡ್ ಕರ್ಫ್ಯೂ : ಸಿಎಂ ಯಡಿಯೂರಪ್ಪ


 ಮಂಗಳವಾರ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಕೋವಿಡ್ ಕರ್ಫ್ಯೂ : ಸಿಎಂ ಯಡಿಯೂರಪ್ಪ

ಬೆಂಗಳೂರು : ಎ. 27ರ ಮಂಗಳವಾರ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. 

ಈ ದಿನಗಳಲ್ಲಿ ಬೆಳಗ್ಗೆ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. 

18 ವರ್ಷ ಮೇಲ್ಪಟ್ಟವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಸಿಎಂ ಇದೇ ವೇಳೆ ಘೋಷಿಸಿದರು. 

ಗಾರ್ಮೆಂಟ್ಸ್ ಹೊರತು ಉತ್ಪಾದನಾ ವಲಯ, ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಯಾವುದೆ ನಿರ್ಬಂಧ ಇಲ್ಲ, ಅಗತ್ಯ ಸೇವೆ ಆಸ್ಪತ್ರೆ, ಔಷಾಧಾಲಯ, ಹಾಲು, ಪೇಪರ್ ವ್ಯವಸ್ಥೆ ಇರಲಿದೆ. ಸಾರಿಗೆ ಸಂಚಾರವಿರುವುದಿಲ್ಲ. ಅಂತರಾಜ್ಯ ಗೂಡ್ಸ್ ಸಾಗಾಟ ವಾಹನಕ್ಕೆ ಅನುಮತಿ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.


SHARE THIS

Author:

0 التعليقات: