Tuesday, 13 April 2021

ಆಳ ಸಮುದ್ರದಲ್ಲಿ ಮುಳುಗಿದ ಬೋಟ್​; 14 ಮೀನುಗಾರರು ನಾಪತ್ತೆ


ಆಳ ಸಮುದ್ರದಲ್ಲಿ ಮುಳುಗಿದ ಬೋಟ್​; 14 ಮೀನುಗಾರರು ನಾಪತ್ತೆ

ಮಂಗಳೂರು: ಕರಾವಳಿಯ ಆಳ ಸಮುದ್ರದಲ್ಲಿ ಬೋಟ್​ ಮುಳುಗಿದ್ದು 14 ಮಂದಿ ಮೀನುಗಾರರು ನಾಪತ್ತೆ ಆಗಿದ್ದಾರೆ. ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಘಟನೆ ಸಂಭವಿಸಿದ್ದು, ಭಾರತೀಯ ಕೋಸ್ಟ್ ಗಾರ್ಡ್​ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಿದೆ. ಮಂಗಳೂರು ಬಂದರಿನಿಂದ ನೂರಾರು ಕಿಲೋಮೀಟರ್​ ದೂರದ ಆಳ ಸಮುದ್ರದಲ್ಲಿ ಘಟನೆ ಸಂಭವಿಸಿದೆ.

ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್​ನಿಂದ ಹೊರಟಿದ್ದ ಮೀನುಗಾರಿಕಾ ಬೋಟ್​ ಅಪಘಾತಕ್ಕೀಡಾಗಿದ್ದು, ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು. ಈ ಬೋಟ್​​ ಮೂಲಕ ಕೇರಳ-ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದರ ಪತ್ತೆಗೆ ಇಂಡಿಯನ್ ಕೋಸ್ಟ್ ಗಾರ್ಡ್​ನ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.SHARE THIS

Author:

0 التعليقات: