Wednesday, 21 April 2021

ಮಹಾರಾಷ್ಟ್ರದ ಆಸ್ಪತ್ರೆಯ ಹೊರಗೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆ, 11 ಮಂದಿ ಮೃತ್ಯು


 ಮಹಾರಾಷ್ಟ್ರದ ಆಸ್ಪತ್ರೆಯ ಹೊರಗೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆ, 11 ಮಂದಿ ಮೃತ್ಯು

ಹೊಸದಿಲ್ಲಿ: ಮಹಾರಾಷ್ಟ್ರದ ನಾಸಿಕ್ ನ ಆಸ್ಪತ್ರೆಯ ಹೊರಗೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆಯಾದ ಪರಿಣಾಮವಾಗಿ 11 ಮಂದಿ ಮೃತಪಟ್ಟಿದ್ದು, ಸುಮಾರು 30 ನಿಮಿಷಗಳ ಕಾಲ ಆಕ್ಸಿಜನ್ ಸರಬರಾಜನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿಯಾಗಿದೆ.

ಘಟನೆಯು ನಗರದ ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ನಡೆದಿದೆ.

ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತ ಪ್ರದೇಶದಲ್ಲಿ ಬಿಳಿ ಹೊಗೆ ಆವರಿಸಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಆಕ್ಸಿಜನ್ ಸರಬರಾಜು ನಿಂತಾಗ ರೋಗಿಗಳ ಕುಟುಂಬ ಸದಸ್ಯರಲ್ಲಿ ಆತಂಕ ಉಂಟಾಗಿದ್ದು, ಉಸಿರಾಡಲು ಪರದಾಡುತ್ತಿದ್ದ ರೋಗಿಗಳಿಗೆ ನೆರವಾಗಲು ಕುಟುಂಬದವರು ಯತ್ನಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.

80 ರೋಗಿಗಳ ಪೈಕಿ ಅಮ್ಲ ಜನಕ ಅಗತ್ಯವಿರುವ ಸುಮಾರು 31 ರೋಗಿಗಳನ್ನು  ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. 

ಆಸ್ಪತ್ರೆಯ ಸುತ್ತಮುತ್ತ ಅನಿಲ ಹರಡಿದ್ದು, ಸೋರಿಕೆಯನ್ನು ತಡೆಯಲು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಸೋರಿಕೆ ನಿಯಂತ್ರಿಸಲು ಕಾರ್ಯಾಚರಣೆ ನಡೆಯುತ್ತಿದೆ.


SHARE THIS

Author:

0 التعليقات: