Friday, 16 April 2021

ವಿಧಾನಸಭಾ ಚುನಾವಣೆ: 1000 ಕೋಟಿಗೂ ಅಧಿಕ ಮೌಲ್ಯದ ಹಣ, ಮದ್ಯ, ಉಡುಗೊರೆಗಳು ವಶ..!


ವಿಧಾನಸಭಾ ಚುನಾವಣೆ: 1000 ಕೋಟಿಗೂ ಅಧಿಕ ಮೌಲ್ಯದ ಹಣ, ಮದ್ಯ, ಉಡುಗೊರೆಗಳು ವಶ..!

 ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಕ್ರಮ ಹಣದ ಓಡಾಟ ಬಹು ಜೋರಾಗಿದ್ದು, ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣಾ ಆಯೋಗ ಮದ್ಯ, ಡ್ರಗ್ಸ್‌ ಸೇರಿ 1000 ಕೋಟಿಗೂ ಅಧಿಕ ಮೌಲ್ಯದ ಹಣವನ್ನ ವಶಪಡಿಸಿಕೊಂಡಿದೆ.

ಅದ್ರಂತೆ, ಆಸ್ಸಾಂ ಒಂದರಲ್ಲೇ 122. 35 ಕೋಟಿ, ಪುದುಚೇರಿಯಲ್ಲಿ 36.95 ಕೋಟಿ, ತಮಿಳುನಾಡಿನಲ್ಲಿ 446.28 ಕೋಟಿ, ಕೇರಳದಲ್ಲಿ 84.91 ಕೋಟಿ, ಪಶ್ಚಿಮ ಬಂಗಾಳದಲ್ಲಿ 300.11 ಕೋಟಿಗಳನ್ನ ವಶ ಪಡಿಸಿಕೊಂಡಿರುವುದಾಗಿ ಆಯೋಗ ತಿಳಿಸಿದೆ.

ಇದಕ್ಕಾಗಿ ಆಯೋಗವು ವಿವಿಧ ಹಂತಗಳಲ್ಲಿ ಸಮಗ್ರ ಪರಿಶೀಲನೆಗಳನ್ನ ನಡೆಸಿದ್ದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ ಜಾರಿ ಸಂಸ್ಥೆಗಳೊಂದಿಗೆ ಪರಿಶೀಲನಾ ಸಭೆಗಳು, ಕಂದಾಯ ಕಾರ್ಯದರ್ಶಿಯೊಂದಿಗಿನ ಸಭೆಗಳು ನಡೆಸಿದೆ ಎಂದು ಆಯೋಗ ತಿಳಿಸಿದೆ.

ಕಾನೂನಿನ ಪ್ರಕಾರ, ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ನಗದು ಮತ್ತು ಉಡುಗೊರೆಗಳನ್ನ ವಿತರಿಸಲು ಅನುಮತಿ ಇಲ್ಲ ಮತ್ತು ಅಂತಹ ವೆಚ್ಚವು 'ಲಂಚ' ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ. ಇದು ಐಪಿಸಿಯ 171ಬಿ ಅಡಿಯಲ್ಲಿ ಮತ್ತು ಆರ್.ಪಿ. ಕಾಯ್ದೆ, 1951 ರ ಅಡಿಯಲ್ಲಿ ಅಪರಾಧವಾಗಿದೆ. ಇಂತಹ ವಸ್ತುಗಳ ಮೇಲಿನ ವೆಚ್ಚವು ಕಾನೂನುಬಾಹಿರವಾಗಿದೆ. ಹಣದ ಶಕ್ತಿಯ ಪಿಡುಗಿನ ವಿರುದ್ಧ ಉಳಿದ ಹಂತಗಳ ಚುನಾವಣೆಗಳಲ್ಲಿ ಹುರುಪಿನಿಂದ ಮುಂದುವರಿಯುತ್ತದೆ ಮತ್ತು ವಶಪಡಿಸಿಕೊಳ್ಳುವ ಅಂಕಿಅಂಶಗಳು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.



SHARE THIS

Author:

0 التعليقات: