Friday, 30 April 2021

 4,50,000 ರೆಮ್ಡೆಸಿವಿರ್ ಲಸಿಕೆ ಆಮದಿಗೆ ನಿರ್ಧಾರ : ಕೇಂದ್ರ ಸರಕಾರ

4,50,000 ರೆಮ್ಡೆಸಿವಿರ್ ಲಸಿಕೆ ಆಮದಿಗೆ ನಿರ್ಧಾರ : ಕೇಂದ್ರ ಸರಕಾರ


 4,50,000 ರೆಮ್ಡೆಸಿವಿರ್ ಲಸಿಕೆ ಆಮದಿಗೆ ನಿರ್ಧಾರ : ಕೇಂದ್ರ ಸರಕಾರ

ಹೊಸದಿಲ್ಲಿ: ಕೊರೋನ ವೈರಸ್ ನ ಎರಡನೇ ಅಲೆ ತೀವ್ರಗತಿಯಲ್ಲಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರೆಮ್ಡಿಸಿವಿರ್ನ 4,50,000 ಶೀಷೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಇದರಲ್ಲಿ 75,000 ಶೀಷೆಯ ಪ್ರಥಮ ಕಂತು ಶುಕ್ರವಾರ ತಲುಪಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ.

ಭಾರತ ಸರಕಾರದ ಅಧೀನದ ಎಚ್ಎಲ್ಎಲ್ ಲೈಫ್ಕೇರ್ ಸಂಸ್ಥೆ ಅಮೆರಿಕದ ಔಷಧ ಉತ್ಪಾದನಾ ಸಂಸ್ಥೆ ಜಿಲೀಡ್ ಸೈಯನ್ಸಸ್ ಮತ್ತು ಈಜಿಪ್ಟ್ನ ಔಷಧ ಉತ್ಪಾದನಾ ಸಂಸ್ಥೆ ಇವಾ ಫಾರ್ಮಾದಿಂದ 4,50,000 ರೆಮ್ಡೆಸಿವಿರ್ ಲಸಿಕೆಯ ಶೀಷೆಗೆ ಕಾರ್ಯಾದೇಶ(ಆರ್ಡರ್) ಸಲ್ಲಿಸಿದೆ. 

ಜಿಲೀಡ್ ಸಂಸ್ಥೆ ಮುಂದಿನ ಒಂದೆರಡು ದಿನದಲ್ಲಿ 1,00,000ದಷ್ಟು ಲಸಿಕೆ ಮತ್ತು ಮೇ 15ರೊಳಗೆ ಮತ್ತೆ 1,00,000 ಲಸಿಕೆ ಪೂರೈಸಲಿದೆ. ಇವಾ ಸಂಸ್ಥೆ ಪ್ರತೀ 15 ದಿನಕ್ಕೊಮ್ಮೆ 10,000 ಲಸಿಕೆಯಂತೆ ಜುಲೈಯೊಳಗೆ ಲಸಿಕೆ ಪೂರೈಸಲಿದೆ. ದೇಶದಲ್ಲಿ ರೆಮ್ಡೆಸಿವಿರ್ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದಿಸಲು ಲೈಸೆನ್ಸ್ ಪಡೆದಿರುವ 7 ಸಂಸ್ಥೆಗಳು ಎಪ್ರಿಲ್ 27ರಿಂದ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 1.03 ಕೋಟಿ ಲಸಿಕೆಗೆ ಹೆಚ್ಚಿಸಿದೆ(38 ಲಕ್ಷದಿಂದ). 

ಎಪ್ರಿಲ್ 21ರಿಂದ 28ರವರೆಗಿನ 7 ದಿನಗಳಲ್ಲಿ 13.73 ಶೀಷೆಯಷ್ಟು ರೆಮ್ಡೆಸಿವಿರ್ ಲಸಿಕೆ ಉತ್ಪಾದನೆಯಾಗಿದೆ. ಈ ಮಧ್ಯೆ ದೈನಂದಿನ ಪೂರೈಕೆಯ ಪ್ರಮಾಣ ಎಪ್ರಿಲ್ 11ರಂದು 67,900 ಶೀಷೆಯಷ್ಟಿದ್ದರೆ ಎಪ್ರಿಲ್ 28ಕ್ಕೆ 2.09 ಲಕ್ಷ ಶೀಷೆಗೆ ಹೆಚ್ಚಿದೆ. ರೆಮ್ಡೆಸಿವರ್ ಲಸಿಕೆಯ ಸುಗಮ ಸಾಗಾಟಕ್ಕೆ ಅವಕಾಶ ನೀಡುವಂತೆ ರಾಜ್ಯಗಳಿಗೆ ಸಲಹಾ ಪತ್ರ ರವಾನಿಸಲಾಗಿದೆ. ದೇಶದಲ್ಲಿ ರೆಮ್ಡೆಸಿವರ್ ಲಸಿಕೆಯ ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಲಸಿಕೆಯ ರಫ್ತನ್ನು ನಿಷೇಧಿಸಲಾಗಿದೆ. ಲಸಿಕೆ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಲಭಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪ್ರತೀ ಶೀಷೆಯ ಬೆಲೆಯನ್ನು 3,500 ರೂ.ಗಿಂತಲೂ ಕಡಿಮೆ ಎಂದು ನಿಗದಿಗೊಳಿಸಿದೆ. 

ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಲಸಿಕೆಯ ಉತ್ಪಾದನೆಯಲ್ಲಿ ಬಳಸುವ ಸಾಧನಗಳ ಮೇಲಿನ ಅಬಕಾರಿ ಸುಂಕವನ್ನು ಈ ವರ್ಷದ ಅಕ್ಟೋಬರ್ 31 ರವರೆಗೆ ಮನ್ನಾ ಮಾಡಿದೆ. ವಯಸ್ಕ ಕೋವಿಡ್ ರೋಗಿಗಳ ಔಷಧೋಪಚಾರ ಮತ್ತು ನಿರ್ವಹಣೆಯ ಕುರಿತಾದ ರಾಷ್ಟ್ರೀಯ ಚಿಕಿತ್ಸಾ ನಿಯಮಾವಳಿಯನ್ನು ಎಪ್ರಿಲ್ 22ರಂದು ಪರಿಷ್ಕರಿಸಲಾಗಿದ್ದು ಇದರಿಂದ ಔಷಧಗಳ ಕಾನೂನುಬದ್ಧ ಬಳಕೆಗೆ ಅನುಕೂಲವಾಗಲಿದೆ ಎಂದು ಇಲಾಖೆ ಹೇಳಿದೆ.

 ಉತ್ಪಾದಕರು ಕೊರೋನ ಲಸಿಕೆಯ ದರ ನಿರ್ಧರಿಸುವಂತಿಲ್ಲ: ಸುಪ್ರೀಂಕೋರ್ಟ್

ಉತ್ಪಾದಕರು ಕೊರೋನ ಲಸಿಕೆಯ ದರ ನಿರ್ಧರಿಸುವಂತಿಲ್ಲ: ಸುಪ್ರೀಂಕೋರ್ಟ್


 ಉತ್ಪಾದಕರು ಕೊರೋನ ಲಸಿಕೆಯ ದರ ನಿರ್ಧರಿಸುವಂತಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಕೊರೋನ ಸೋಂಕಿನ ವಿರುದ್ಧದ ಲಸಿಕೆಗೆ ವಿಭಿನ್ನ ದರ ನಿಗದಿಯಾಗಿರುವ ವಿಷಯದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಲಸಿಕೆಯ ದರವನ್ನು ಉತ್ಪಾದಕರು ನಿಗದಿಗೊಳಿಸಲು ಬಿಡಬಾರದು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಬೆಲೆ ವ್ಯತ್ಯಾಸ 40,000 ಕೋಟಿ ರೂ.ಗಳಷ್ಟಾಗುತ್ತದೆ. ಬೆಲೆ ವ್ಯತ್ಯಾಸಕ್ಕೆ ಕಾರಣಗಳೇ ಇಲ್ಲ. ಇದಕ್ಕೆ ದೇಶ ಯಾಕೆ ಬೆಲೆತೆರಬೇಕು. ನೀವು ಲಸಿಕೆ ಖರೀದಿಸಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಈ ಬಗ್ಗೆ ನೀವು ಗಮನ ಹರಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ. 

ಉತ್ಪಾದಕರು ಸಾಮ್ಯತೆಯನ್ನು ಹೇಗೆ ನಿರ್ಧರಿಸುತ್ತಾರೆ? ಲಸಿಕೆ ಉತ್ಪಾದನೆಗೆ ಹೆಚ್ಚುವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿಮ್ಮ ಅಧಿಕಾರವನ್ನು ಬಳಸಿಕೊಳ್ಳಿ. ಲಸಿಕೆಯ ಸಮಾನ ಹಂಚಿಕೆ ಸಾಧ್ಯವಾಗಬೇಕಿದ್ದರೆ ನೀವೇ ಯಾಕೆ ಎಲ್ಲಾ ಲಸಿಕೆಗಳನ್ನೂ ಖರೀದಿಸಿ ವಿತರಿಸಬಾರದು ಎಂದು ನ್ಯಾಯಪೀಠ ಕೇಂದ್ರ ಸರಕಾರವನ್ನು ಪ್ರಶ್ನಿಸಿತು.

ಲಸಿಕೆಯ ದರ ನಿಗದಿ ಗಂಭೀರ ಸಮಸ್ಯೆಯಾಗಿದೆ. 50% ಲಸಿಕೆಯನ್ನು ಮುಂಚೂಣಿ ಕಾರ್ಯಕರ್ತರಿಗೆ ಮತ್ತು 45 ವರ್ಷ ಮೀರಿದವರಿಗೆ ಉಚಿತವಾಗಿ ನೀಡಲಾಗುತ್ತದೆ. ಉಳಿದ ಲಸಿಕೆಯನ್ನು 18 ವರ್ಷ ಮೀರಿದವರಿಗೆ ನೀಡಲಾಗುತ್ತದೆ. ಈ ವಿಭಾಗದಲ್ಲಿ ಸುಮಾರು 59 ಕೋಟಿ ಜನರಿದ್ದು ಇದರಲ್ಲಿ ಬರುವ ಬಡವರು ಮತ್ತು ದುರ್ಬಲ ವರ್ಗದವರು ಲಸಿಕೆ ಖರೀದಿಸಲು ಹಣ ಎಲ್ಲಿಂದ ತರಬೇಕು? ಖಾಸಗಿ ಕ್ಷೇತ್ರದ ಮಾದರಿ ಇಲ್ಲಿ ಸೂಕ್ತವಲ್ಲ. ಸ್ವಾತಂತ್ರ್ಯ ದೊರೆತ ಕಾಲದಿಂದಲೂ ಅನುಸರಿಸುತ್ತಿರುವ ರಾಷ್ಟ್ರೀಯ ಲಸಿಕಾ ಮಾದರಿಯನ್ನು ಇಲ್ಲಿಯೂ ಅನುಸರಿಸಬೇಕು ಎಂದು ಸೂಚಿಸಿತು.

 ಗುಜರಾತ್ ; ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 18 ಮಂದಿ ಕೊರೋನ ಸೋಂಕಿತರು ಮೃತ್ಯು

ಗುಜರಾತ್ ; ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 18 ಮಂದಿ ಕೊರೋನ ಸೋಂಕಿತರು ಮೃತ್ಯು


 ಗುಜರಾತ್ ; ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 18 ಮಂದಿ ಕೊರೋನ ಸೋಂಕಿತರು ಮೃತ್ಯು

ಬರೂಚ್ : ಅಹ್ಮದಾಬಾದ್ ನಿಂದ ಸುಮಾರು 190 ಕಿಮೀ ದೂರದಲ್ಲಿರುವ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 18 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ.

ಹಾಸಿಗೆ ಮತ್ತು ಸ್ಟ್ರೆಚರ್‌ಗಳಲ್ಲೇ ಕೋವಿಡ್ ರೋಗಿಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ದೃಶ್ಯಗಳು ಮನ ಕಲುಕುತ್ತಿವೆ. ನಾಲ್ಕು ಮಹಡಿಗಳ ವೆಲ್ಫೇರ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಬಳಿಕ ದುರ್ಘಟನೆ ಸಂಭವಿಸಿದಾಗ 50 ಮಂದಿ ಇತರ ರೋಗಿಗಳೂ ಇದ್ದರು ಎಂದು ತಿಳಿದು ಬಂದಿದೆ. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಪಾರು ಮಾಡಿದರು.

"ಮುಂಜಾನೆ 6.30ಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಘಟನೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 18. ಘಟನೆ ನಡೆದ ತಕ್ಷಣ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್-19 ಚಿಕಿತ್ಸಾ ಘಟಕದಲ್ಲಿದ್ದ 12ಮಂದಿ ರೋಗಿಗಳು ಬೆಂಕಿ ಮತ್ತು ತೀವ್ರ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ಬರೂಚ್ ಎಸ್ಪಿ ರಾಜೇಂದ್ರ ಸಿಂಗ್ ಚೂಡಾಸಮ ವಿವರ ನೀಡಿದ್ದಾರೆ.

ಇತರ ಆರು ಮಂದಿ ವೆಲ್ಫೇರ್ ಆಸ್ಪತ್ರೆಯಲ್ಲೇ ಜೀವ ಕಳೆದುಕೊಂಡಿದ್ದಾರೆಯೇ ಅಥವಾ ಇತರ ಆಸ್ಪತ್ರೆಗಳಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ಬರೂಚ್- ಜಮ್‌ಬೂಸರ್ ಹೆದ್ದಾರಿಯ ಪಕ್ಕದಲ್ಲಿ ಈ ಆಸ್ಪತ್ರೆ ಇದೆ. ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಒಂದು ಗಂಟೆಯ ಒಳಗಾಗಿ ಬೆಂಕಿ ನಂದಿಸಲಾಗಿದ್ದು, 50 ರೋಗಿಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ!

ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ!


 ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ!

ದೇಶದಲ್ಲಿ ಕೊರೊನಾ ಎರಡನೆ ಅಲೆ ಜೋರಾಗಿರುವ ನಡುವೆಯೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ನೋಯ್ಡಾದ ಕೊರೊನಾ ಸೋಂಕಿತ 35 ವರ್ಷದ ಮಹಿಳೆ ನೋಯ್ಡಾ ಆಸ್ಪತ್ರೆ ಎದುರಲ್ಲೇ ಜೀವಬಿಟ್ಟಿದ್ದಾರೆ. ನೋಯ್ಡಾದ ಜಿಮ್ಸ್ ಆಸ್ಪತ್ರೆ ಎದುರಲ್ಲಿ ಬೆಡ್​ ಸಿಗದೇ ಕಾರಿನಲ್ಲೇ ಒದ್ದಾಡುತ್ತಿದ್ದ ಮಹಿಳೆ ಜೀವ ಬಿಟ್ಟಿದ್ದಾರೆ. ಮೃತ ಮಹಿಳೆ ಗ್ರೇಟರ್​ ನೋಯ್ಡಾದಲ್ಲಿ ಇಂಜಿನಿಯರ್ ಆಗಿದ್ದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಪ್ರತ್ಯಕ್ಷದರ್ಶಿ ಸಚಿನ್​, ನಾವು ಇದೆಲ್ಲವನ್ನ ನೋಡುತ್ತಾ ಅಲ್ಲೇ ನಿಂತಿದ್ದೆ. ಆಕೆ ಜೊತೆ ಇದ್ದವರು ಆಸ್ಪತ್ರೆಯ ಬಳಿ ಧಾವಿಸಿದ್ದರು. ಆದರೆ ಯಾರೂ ಸಹಾಯ ಮಾಡಿದಂತೆ ಕಾಣುತ್ತಿರಲಿಲ್ಲ. ಮಧ್ಯಾಹ್ನ 3.30ರ ಸುಮಾರಿಗೆ ಅವರು ಕುಸಿದು ಬಿದ್ದರು. ಕೂಡಲೇ ರಿಸಪ್ಶನಿಸ್ಟ್​ ಬಳಿ ಬಂದು ಆಕೆ ಉಸಿರಾಡುತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ಸೋಂಕಿತೆ ಬಳಿ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸೋಂಕಿತೆ ಕಾರಿನಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಗಂಭೀರ ಸ್ವರೂಪ ತಾಳುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಳೆದ ವಾರವಷ್ಟೇ ರಾಜ್ಯದಲ್ಲಿ ಆಕ್ಸಿಜನ್​ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ಉತ್ತರ ಪ್ರದೇಶದ ನೋಯ್ಡಾದ ಹಲವು ಕಡೆ ಸೋಂಕಿತರಿಗೆ ಬೆಡ್​ ಸೌಕರ್ಯ ಸಿಗುತ್ತಿಲ್ಲ. ಆಕ್ಸಿಜನ್​ ಅಭಾವ ಕೂಡ ಉಂಟಾಗಿದೆ.

 ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ:18 ಮಂದಿ ಸೋಂಕಿತರು ಮೃತ್ಯು

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ:18 ಮಂದಿ ಸೋಂಕಿತರು ಮೃತ್ಯು


ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ:18 ಮಂದಿ ಸೋಂಕಿತರು ಮೃತ್ಯು

ಗುಜರಾತ್(ಬರೂಚ್) : ಅಹ್ಮದಾಬಾದ್ ನಿಂದ ಸುಮಾರು 190 ಕಿಮೀ ದೂರದಲ್ಲಿರುವ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 18 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ.

ಹಾಸಿಗೆ ಮತ್ತು ಸ್ಟ್ರೆಚರ್‌ಗಳಲ್ಲೇ ಕೋವಿಡ್ ರೋಗಿಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ದೃಶ್ಯಗಳು ಮನ ಕಲುಕುತ್ತಿವೆ. ನಾಲ್ಕು ಮಹಡಿಗಳ ವೆಲ್ಫೇರ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಬಳಿಕ ದುರ್ಘಟನೆ ಸಂಭವಿಸಿದಾಗ 50 ಮಂದಿ ಇತರ ರೋಗಿಗಳೂ ಇದ್ದರು ಎಂದು ತಿಳಿದು ಬಂದಿದೆ. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಪಾರು ಮಾಡಿದರು.

"ಮುಂಜಾನೆ 6.30ಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಘಟನೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 18. ಘಟನೆ ನಡೆದ ತಕ್ಷಣ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್-19 ಚಿಕಿತ್ಸಾ ಘಟಕದಲ್ಲಿದ್ದ 12ಮಂದಿ ರೋಗಿಗಳು ಬೆಂಕಿ ಮತ್ತು ತೀವ್ರ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ಬರೂಚ್ ಎಸ್ಪಿ ರಾಜೇಂದ್ರ ಸಿಂಗ್ ಚೂಡಾಸಮ ವಿವರ ನೀಡಿದ್ದಾರೆ.

ಇತರ ಆರು ಮಂದಿ ವೆಲ್ಫೇರ್ ಆಸ್ಪತ್ರೆಯಲ್ಲೇ ಜೀವ ಕಳೆದುಕೊಂಡಿದ್ದಾರೆಯೇ ಅಥವಾ ಇತರ ಆಸ್ಪತ್ರೆಗಳಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ಬರೂಚ್- ಜಮ್‌ಬೂಸರ್ ಹೆದ್ದಾರಿಯ ಪಕ್ಕದಲ್ಲಿ ಈ ಆಸ್ಪತ್ರೆ ಇದೆ. ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಒಂದು ಗಂಟೆಯ ಒಳಗಾಗಿ ಬೆಂಕಿ ನಂದಿಸಲಾಗಿದ್ದು, 50 ರೋಗಿಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


 ಭಾರತಕ್ಕೆ ನೆರವು ನೀಡಲು ಚೀನಾ ಮುಂದು.

ಭಾರತಕ್ಕೆ ನೆರವು ನೀಡಲು ಚೀನಾ ಮುಂದು.


ಭಾರತಕ್ಕೆ ನೆರವು ನೀಡಲು ಚೀನಾ ಮುಂದು.

ಬೀಜಿಂಗ್, ಎ. 30: ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡುವ ಕೊಡುಗೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೀಡಿದ್ದಾರೆ ಎಂದು ಸರಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಅದೇ ವೇಳೆ, ಅವರು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸಂತಾಪವನ್ನೂ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಕಾರ ನೀಡಲು ಚೀನಾ ಉತ್ಸುಕವಾಗಿದೆ, ಈ ವಿಷಯದಲ್ಲಿ ಅದು ಭಾರತಕ್ಕೆ ಬೆಂಬಲ ಮತ್ತು ನೆರವು ನೀಡಲು ಸಿದ್ಧವಿದೆ ಎಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿರುವುದಾಗಿ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.


 


 ರಾಜ್ಯಗಳಲ್ಲಿ ಕೋಟಿಗೂ ಅಧಿಕ ಕೋವಿಡ್  ಡೋಸ್ ಉಳಿದಿದೆ.

ರಾಜ್ಯಗಳಲ್ಲಿ ಕೋಟಿಗೂ ಅಧಿಕ ಕೋವಿಡ್ ಡೋಸ್ ಉಳಿದಿದೆ.


ರಾಜ್ಯಗಳಲ್ಲಿ ಕೋಟಿಗೂ ಅಧಿಕ ಕೋವಿಡ್  ಡೋಸ್ ಉಳಿದಿದೆ.

ಹೊಸದಿಲ್ಲಿ, ಎ.30: ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಉಳಿದಿದ್ದು ಮುಂದಿನ 3 ದಿನದೊಳಗೆ ಇನ್ನೂ 20 ಲಕ್ಷ ಡೋಸ್ ರಾಜ್ಯಗಳನ್ನು ತಲುಪಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.

ಕೇಂದ್ರ ಸರಕಾರ ಇದುವರೆಗೆ 16,33,85,030 ಡೋಸ್ ಲಸಿಕೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದ್ದು ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗಿನ ಮಾಹಿತಿಯಂತೆ ಒಟ್ಟು 15,33,56,503 ಡೋಸ್ ಲಸಿಕೆ(ವೇಸ್ಟೇಜ್ ಸೇರಿ) ಬಳಕೆಯಾಗಿದೆ. ಇನ್ನೂ 1,00,28,527 ಡೋಸ್ ಲಸಿಕೆ ಉಳಿದಿದೆ. ಮುಂದಿನ 3 ದಿನದಲ್ಲಿ 20 ಲಕ್ಷ ಡೋಸ್ ಲಸಿಕೆ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದರಲ್ಲಿ ಮಹಾರಾಷ್ಟ್ರಕ್ಕೆ 1,63,62,470 ಡೋಸ್ ಲಸಿಕೆ ಪೂರೈಸಿದ್ದು ಇದರಲ್ಲಿ ವೇಸ್ಟೇಜ್ ಸಹಿತ 1,59,06,147 ಡೋಸ್ ಲಸಿಕೆ ಬಳಕೆಯಾಗಿದೆ. ರಾಜಸ್ತಾನಕ್ಕೆ 1,36,12,360 ಡೋಸ್ ಲಸಿಕೆ ಪೂರೈಸಿದ್ದು 1,33,70,102 ಡೋಸ್ ಲಸಿಕೆ ಬಳಕೆಯಾಗಿದೆ. 

ಉತ್ತರಪ್ರದೇಶಕ್ಕೆ 1,41,45,670 ಡೋಸ್ ಲಸಿಕೆ ಪೂರೈಕೆಯಾಗಿದ್ದು 1,28,08,993 ಡೋಸ್ ಲಸಿಕೆ ಬಳಕೆಯಾಗಿದೆ. ಪ.ಬಂಗಾಳಕ್ಕೆ 1,13,83,340 ಡೋಸ್ ಪೂರೈಸಿದ್ದು 1,10,42,745 ಡೋಸ್ ಲಸಿಕೆ ಬಳಕೆಯಾಗಿದೆ, ಕರ್ನಾಟಕಕ್ಕೆ 98,47,900 ಡೋಸ್ ಲಸಿಕೆ ಪೂರೈಕೆಯಾಗಿದ್ದು 94,13,568 ಡೋಸ್ ಲಸಿಕೆ ಬಳಕೆಯಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.


 ಕಲುಷಿತ ಸರೋವರ;40 ಟನ್ ಸತ್ತ ಮೀನುಗಳು !

ಕಲುಷಿತ ಸರೋವರ;40 ಟನ್ ಸತ್ತ ಮೀನುಗಳು !


ಕಲುಷಿತ ಸರೋವರ;40 ಟನ್ ಸತ್ತ ಮೀನುಗಳು !

ಕರಾವೂನ್ (ಲೆಬನಾನ್), ಎ. 30: ಲೆಬನಾನ್ ನ ಲಿತಾನಿ ನದಿಯಲ್ಲಿರುವ ಸರೋವರವೊಂದರ ದಂಡೆಯಲ್ಲಿ ಟನ್ ಗಟ್ಟಲೆ ಸತ್ತ ಮೀನುಗಳು ರಾಶಿ ಬಿದ್ದಿವೆ. ಮೀನುಗಳ ಸಾವಿಗೆ ನದಿಯ ಕಲುಷಿತ ನೀರು ಕಾರಣವೆನ್ನಲಾಗಿದೆ. ಸರೋವರಕ್ಕೆ ಹೊಂದಿಕೊಂಡಿರುವ ಗ್ರಾಮವನ್ನು ದುರ್ವಾಸನೆ ಆವರಿಸಿದೆ.

ಲೆಬನಾನ್ ನ ಅತಿ ಉದ್ದದ ನದಿ ಲಿತಾನಿಯಲ್ಲಿರುವ ಕರಾವೂನ್ ಸರೋವರದ ಸಮೀಪ ರಾಶಿ ಬಿದ್ದಿರುವ ಮೀನುಗಳನ್ನು ಸ್ವಯಂಸೇವಕರು ಸಂಗ್ರಹಿಸುತ್ತಿದ್ದಾರೆ. ಒಳಚರಂಡಿ ಮತ್ತು ತ್ಯಾಜ್ಯ ನೀರನ್ನು ಸರೋವರಕ್ಕೆ ಬಿಡುತ್ತಿರುವುದು ಅದು ಕಲುಷಿತಗೊಳ್ಳಲು ಕಾರಣವೆನ್ನಲಾಗಿದೆ. ಜಲಮಾಲಿನ್ಯದ ಬಗ್ಗೆ ಪರಿಸರ ಹೋರಾಟಗಾರರು ವರ್ಷಗಳಿಂದ ಎಚ್ಚರಿಸುತ್ತಾ ಬಂದಿದ್ದಾರೆ.

ಸತ್ತ ಮೀನುಗಳ ಸಮೀಪದ ಸರೋವರದಲ್ಲಿ ತ್ಯಾಜ್ಯಗಳ ರಾಶಿಗಳು ತೇಲುತ್ತಿವೆ. ಜಲಾಶಯದ ಸಮೀಪ ನೊಣಗಳ ದಂಡು ಹಾರಾಡುತ್ತಿವೆ ಹಾಗೂ ಲಕ್ಷಾಂತರ ಮೀನುಗಳು ಕೊಳೆಯುತ್ತಿವೆ.


 


 ಮಧುಮೇಹಿಗಳು ಕೋವಿಡ್-19ಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?

ಮಧುಮೇಹಿಗಳು ಕೋವಿಡ್-19ಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?


ಮಧುಮೇಹಿಗಳು ಕೋವಿಡ್-19ಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?


ಕಳೆದ ವರ್ಷ ಕೊರೋನವೈರಸ್ ಸಾಂಕ್ರಾಮಿಕವು ಸ್ಫೋಟಗೊಂಡಾಗಿನಿಂದಲೂ ಹೆಚ್ಚುವರಿ ಕಾಳಜಿಯನ್ನು ವಹಿಸುವಂತೆ ಇತರ ಕಾಯಿಲೆಗಳನ್ನು ಹೊಂದಿರುವವರಿಗೆ ತಜ್ಞರು ವಿಶೇಷ ಸೂಚನೆಯನ್ನು ನೀಡುತ್ತಲೇ ಇದ್ದಾರೆ. ಮಧುಮೇಹ,ಹೃದ್ರೋಗಗಳು,ಅಧಿಕ ರಕ್ತದೊತ್ತಡ ಮತ್ತು ಇಂತಹುದೇ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇವರಲ್ಲಿ ಸೇರುತ್ತಾರೆ. ಕೊರೋನವೈರಸ್‌ನ ಎರಡನೇ ಅಲೆಯು ದೇಶವನ್ನು ಅಪ್ಪಳಿಸಿರುವ ಈ ಸಂಕಷ್ಟದ ಸಮಯದಲ್ಲಿ ಕೋಮಾರ್ಬಿಡಿಟಿ ಅಥವಾ ಇತರ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್-19 ಸೋಂಕು ಕುರಿತು ಕೇಳಲಾಗುವ ಸಾಮಾನ್ಯ ಪ್ರಶ್ನೆಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಉತ್ತರಗಳನ್ನು ನೀಡಿದೆ.


* ಹೃದಯರೋಗ,ಮಧುಮೇಹ ಅಥವಾ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಕೊರೋನವೈರಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?


-ಇಲ್ಲ,ಈ ಸಮಸ್ಯೆಗಳನ್ನು ಹೊಂದಿರುವವರು ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವಿಲ್ಲ.


* ಈ ರೋಗಗಳಿರುವ ವ್ಯಕ್ತಿಗಳಿಗೆ ಸೋಂಕು ತಗುಲಿದರೆ ತೀವ್ರ ಅನಾರೋಗ್ಯ ಅಥವಾ ತೊಂದರೆಗಳುಂಟಾಗುವ ಹೆಚ್ಚಿನ ಅಪಾಯವಿದೆಯೇ?


-ಕೋವಿಡ್-19 ಸೋಂಕುಪೀಡಿತರ ಪೈಕಿ ಶೇ.80ರಷ್ಟು ಜನರು ಉಸಿರಾಟ ಸೋಂಕಿನ (ಜ್ವರ,ಗಂಟಲು ಕೆರೆತ,ಕೆಮ್ಮು) ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ದುರ್ಬಲ ಹೃದಯ ಸೇರಿದಂತೆ ಹೃದಯ ರೋಗಗಳನ್ನು ಹೊಂದಿರುವ ಕೆಲವರಲ್ಲಿ ತೀವ್ರ ಲಕ್ಷಣಗಳು ಮತ್ತು ತೊಂದರೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಇಂತಹ ರೋಗಿಗಳು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.


* ಮಧುಮೇಹವನ್ನು ಹೊಂದಿರುವವರು ಕೋವಿಡ್-19ಕ್ಕೆ ಸುಲಭವಾಗಿ ತುತ್ತಾಗುತ್ತಾರೆಯೇ?


-ಸಾಮಾನ್ಯವಾಗಿ ಅನಿಯಂತ್ರಿತ ಮಧುಮೇಹವನ್ನು ಹೊಂದಿರುವವರು ಎಲ್ಲ ಸೋಂಕುಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುವ ಮಧುಮೇಹಿಗಳು ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿಲ್ಲ,ಆದರೆ ಕೆಲವರು ಸೋಂಕಿಗೆ ತುತ್ತಾದರೆ ಹೆಚ್ಚು ತೀವ್ರ ಕಾಯಿಲೆಗೆ ಗುರಿಯಾಗಬಹುದು. ಹೀಗಾಗಿ ಮಧುಮೇಹಿಗಳು ತಮ್ಮ ರೋಗವನ್ನು ನಿಯಂತ್ರಣದಲ್ಲಿರಿಸಲು ತಮ್ಮ ಆಹಾರ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಸಾಧ್ಯವಾದಷ್ಟು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಔಷಧಿಗಳನ್ನು ಸೇವಿಸುವ ಮೂಲಕ ಆಗಾಗ್ಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಮಧುಮೇಹಿಗಳು ಅನಾರೋಗ್ಯಕ್ಕೊಳಗಾದಾಗ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಯಮಿತ ನಿಗಾ,ಇನ್ಸುಲಿನ್ ಸೇರಿದಂತೆ ಔಷಧಿಗಳ ಹೊಂದಾಣಿಕೆ,ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮತ್ತು ಅಧಿಕ ದ್ರವಗಳ ಸೇವನೆ ಅಗತ್ಯವಾಗಬಹುದು. ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಗಳನ್ನು ಹೊಂದಿರುವವರು ಸೌಮ್ಯ ಸ್ವರೂಪದ ಸೋಂಕಿನ ಲಕ್ಷಣಗಳಿದ್ದರೂ ಮೊದಲಿನಂತೆ ಎಲ್ಲ ಔಷಧಿಗಳನ್ನು ನಿಯಮಿತವಾಗಿ ಸೇವಿಸಬೇಕು ಎನ್ನುತ್ತಾರೆ ತಜ್ಞರು. ನಿಮ್ಮ ವೈದ್ಯರು ಸೂಚಿಸಿದ ಹೊರತು ಯಾವುದೇ ಔಷಧಿಯ ಸೇವನೆಯನ್ನು ನಿಲ್ಲಿಸಬೇಡಿ,ನಿಮ್ಮ ವೈದ್ಯರನ್ನು ಭೇಟಿಯಾಗಲು ತಕ್ಷಣಕ್ಕೆ ಸಾಧ್ಯವಿಲ್ಲದಿದ್ದರೆ ನಿಮ್ಮ ಅಧಿಕ ರಕ್ತದೊತ್ತಡ,ಮಧುಮೇಹ ಮತ್ತು ಹೃದ್ರೋಗಗಳ ಔಷಧಿಗಳ ಸೇವನೆಯನ್ನು ಮುಂದುವರಿಸಿ. ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವ ಔಷಧಿಗಳ (ಸ್ಟಾಟಿನ್‌ಗಳು) ಸೇವನೆಯನ್ನು ಅಗತ್ಯವಾಗಿ ಮುಂದುವರಿಸಬೇಕು.


* ಅಧಿಕ ರಕ್ತದೊತ್ತಡದ ಔಷಧಿಗಳು ಕೋವಿಡ್-19ರ ತೀವ್ರತೆಯನ್ನು ಹೆಚ್ಚಿಸುತ್ತವೆ ಎಂಬ ವರದಿಗಳಿವೆಯಲ್ಲ?


 - ರ್ಯಾಮಿಪ್ರಿಲ್,ಎನಲ್‌ಪ್ರಿಲ್‌ನಂತಹ ಎಸಿಇ ಇನಹಿಬಿಟರ್‌ಗಳು ಮತ್ತು ಲೊಸಾರ್ಟಿನ್,ಟೆಲ್ಮಿಸಾರ್ಟಾನ್‌ನಂತಹ ಆ್ಯಂಜಿಯೊಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು ಈ ಎರಡು ಗುಂಪುಗಳಿಗೆ ಸೇರಿದ ಔಷಧಿಗಳು ಕೋವಿಡ್-19ಕ್ಕೆ ತುತ್ತಾಗುವ ಅಪಾಯವನ್ನು ಅಥವಾ ಅಥವಾ ತೀವ್ರತೆಯನ್ನು ಹೆಚ್ಚಿಸುತ್ತವೆ ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷಾಧಾರವಿಲ್ಲ. ಈ ಔಷಧಿಗಳು ಹೃದಯದ ಕಾರ್ಯವನ್ನು ಬೆಂಬಲಿಸುವ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯ ವೈಫಲ್ಯದ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿವೆ. ವೈದ್ಯರ ಸಲಹೆ ಪಡೆಯದೆ ನೀವಾಗಿಯೇ ಈ ಔಷಧಿಗಳ ಸೇವನೆಯನ್ನು ನಿಲ್ಲಿಸುವುದು ಹಾನಿಕಾರಕವಾಗಬಹುದು ಮತ್ತು ಹೃದಯದ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.


    * ನೋವು ಅಥವಾ ಜ್ವರಕ್ಕೆ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು? -ಇಬುಪ್ರೊಫೆನ್‌ನಂತಹ ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳು (ಎನ್‌ಎಸ್‌ಎಐಡಿ) ಕೋವಿಡ್-19 ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ ಎನ್ನುವುದು ಕಂಡುಬಂದಿದೆ. ಇಂತಹ ಔಷಧಿಗಳು ದುರ್ಬಲ ಹೃದಯವನ್ನು ಹೊಂದಿರುವವರಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಎನ್‌ಎಸ್‌ಎಐಡಿಗಳ ಸೇವನೆಯನ್ನು ನಿವಾರಿಸಿ ಅಥವಾ ವೈದ್ಯರು ಸೂಚಿಸಿದರೆ ಮಾತ್ರ ತೆಗೆದುಕೊಳ್ಳಿ. ಪ್ಯಾರಾಸಿಟಮಲ್ ಅಗತ್ಯವಿದ್ದರೆ ಬಳಸಬಹುದಾದ ಅತ್ಯಂತ ಸುರಕ್ಷಿತ ನೋವು ನಿವಾರಕವಾಗಿದೆ. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಅಲ್ಲದೆ ಅಪಾಯವನ್ನುಂಟು ಮಾಡುವ ಕೆಲವು ಅಂಶಗಳತ್ತಲೂ ಗಮನ ನೀಡಬೇಕು. ಧೂಮ್ರಪಾನ ಮತ್ತು ಮದ್ಯಪಾನವನ್ನು ನಿವಾರಿಸಿ. ನಿಮ್ಮ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.


 


  ಬೇಲೂರು ಪುರಸಭೆ: ಜೆಡಿಎಸ್ ಭದ್ರಕೋಟೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್

ಬೇಲೂರು ಪುರಸಭೆ: ಜೆಡಿಎಸ್ ಭದ್ರಕೋಟೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್


ಬೇಲೂರು ಪುರಸಭೆ: ಜೆಡಿಎಸ್ ಭದ್ರಕೋಟೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್

ಹಾಸನ, ಎ.30: ಬೇಲೂರು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರ ಹಿಡಿದಿದೆ.

ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಐದು ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ಸೀಮಿತವಾಗಿದೆ. 

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಳೆದ ಬಾರಿ ಪುರಸಭೆಯಲ್ಲಿ 13 ಸ್ಥಾನಗಳಲ್ಲಿ ಜೆಡಿಎಸ್ ಜಯಗಳಿಸಿತ್ತು.


 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ


ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ

ಬೆಂಗಳೂರು, ಎ.30: ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಎ.27ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಎರಡು ವಾರ್ಡುಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಮಡಿಕೇರಿ ನಗರಸಭೆ ಹೊರತುಪಡಿಸಿ ಬೇರೆ ಯಾವುದೇ ನಗರ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಆಡಳಿತರೂಢ ಬಿಜೆಪಿ ವಿಫಲವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ, ರಾಮನಗರ ನಗರಸಭೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆ, ಹಾಸನ ಜಿಲ್ಲೆಯ ಬೇಲೂರು ಪುರಸಭೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್ ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಇದಲ್ಲದೆ, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಪುರಸಭೆಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದರೆ, ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣ ಪಂಚಾಯತ್ ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ: ಒಟ್ಟು 39 ವಾರ್ಡುಗಳಲ್ಲಿ ಕಾಂಗ್ರೆಸ್-21, ಬಿಜೆಪಿ-13, ಪಕ್ಷೇತರರು 5 ಮಂದಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್, ಎಸ್‍ಡಿಪಿಐ, ಆಮ್‍ಆದ್ಮಿ ಪಕ್ಷ ಹಾಗೂ ಎಐಎಂಐಎಂ ಶೂನ್ಯ ಸಂಪಾದನೆ ಮಾಡಿವೆ.

ಬೀದರ್ ನಗರಸಭೆ: 33 ವಾರ್ಡುಗಳಲ್ಲಿ ಕಾಂಗ್ರೆಸ್-15, ಬಿಜೆಪಿ-9, ಜೆಡಿಎಸ್-7, ಆಮ್ ಆದ್ಮಿ ಪಕ್ಷ 1 ಹಾಗೂ ಎಐಎಂಐಎಂ 1 ಸ್ಥಾನದಲ್ಲಿ ಗೆದ್ದಿದೆ. ಎಸ್‍ಡಿಪಿಐ ಹಾಗೂ ಪಕ್ಷೇತರರು ಖಾತೆ ತೆರೆಯುವಲ್ಲಿ ವಿಫಲವಾಗಿದ್ದಾರೆ.

ರಾಮನಗರ ನಗರಸಭೆ: 31 ವಾರ್ಡುಗಳಲ್ಲಿ ಕಾಂಗ್ರೆಸ್-19, ಜೆಡಿಎಸ್-11, ಪಕ್ಷೇತರ-1, ಬಿಜೆಪಿ, ಎಸ್‍ಡಿಪಿಐ, ಆಮ್ ಆದ್ಮಿ ಪಕ್ಷ ಹಾಗೂ ಎಐಎಂಐಎಂ ಶೂನ್ಯ ಸಂಪಾದನೆ.

ಚನ್ನಪಟ್ಟಣ ನಗರಸಭೆ: 31 ವಾರ್ಡುಗಳಲ್ಲಿ ಕಾಂಗ್ರೆಸ್-7, ಬಿಜೆಪಿ-7, ಜೆಡಿಎಸ್-16, ಪಕ್ಷೇತರ-1.

ಭದ್ರಾವತಿ ನಗರಸಭೆ:34 ವಾರ್ಡುಗಳಲ್ಲಿ ಕಾಂಗ್ರೆಸ್-18, ಬಿಜೆಪಿ-4, ಜೆಡಿಎಸ್-11, ಪಕ್ಷೇತರ-1.

ಮಡಿಕೇರಿ ನಗರಸಭೆ: 23 ವಾರ್ಡುಗಳಲ್ಲಿ ಕಾಂಗ್ರೆಸ್-1, ಬಿಜೆಪಿ-16, ಜೆಡಿಎಸ್-1, ಎಸ್‍ಡಿಪಿಐ-5.

ಬೇಲೂರು ಪುರಸಭೆ:23 ವಾರ್ಡುಗಳಲ್ಲಿ ಕಾಂಗ್ರೆಸ್-17, ಬಿಜೆಪಿ-1, ಜೆಡಿಎಸ್-5.

ವಿಜಯಪುರ ಪುರಸಭೆ:23 ವಾರ್ಡುಗಳಲ್ಲಿ ಕಾಂಗ್ರೆಸ್-7, ಬಿಜೆಪಿ-1, ಜೆಡಿಎಸ್-13, ಪಕ್ಷೇತರ-2

ತೀರ್ಥಹಳ್ಳಿ ಪಟ್ಟಣ ಪಂ.:15 ವಾರ್ಡುಗಳಲ್ಲಿ ಕಾಂಗ್ರೆಸ್-9, ಬಿಜೆಪಿ-6.

ಗುಡಿಬಂಡೆ ಪಟ್ಟಣ ಪಂ.:11 ವಾರ್ಡುಗಳಲ್ಲಿ ಕಾಂಗ್ರೆಸ್-6, ಜೆಡಿಎಸ್-2, ಪಕ್ಷೇತರ-3.


 


 ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಆಟೋರಿಕ್ಷಾವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ ಜಾವೇದ್

ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಆಟೋರಿಕ್ಷಾವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ ಜಾವೇದ್


 ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಆಟೋರಿಕ್ಷಾವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ ಜಾವೇದ್

ಭೋಪಾಲ್: ಭೋಪಾಲದ ಆಟೋರಿಕ್ಷಾ ಚಾಲಕ ಜಾವೇದ್ ತಮ್ಮ ಆಟೋವನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ  ಉಚಿತವಾಗಿ ಸಾಗಿಸುವ ಮಾನವೀಯ ಕೈಂಕರ್ಯವನ್ನು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗೊಂಡಿದ್ದಾರೆ. ಜಾವೇದ್ ಅವರು ಕಳೆದ 20 ದಿನಗಳಿಂದ ಈ ನಿಸ್ಸ್ವಾರ್ಥ ಸೇವೆಗೈಯ್ಯುತ್ತಿದ್ದು ಎಲ್ಲರ ಶ್ಲಾಘನೆಗೊಳಗಾಗಿದ್ದಾರಲ್ಲದೆ ಸಮಾಜಕ್ಕೆ ಮಾದರಿಯೂ ಆಗಿದ್ದಾರೆ.

ದೇಶಾದ್ಯಂತ ಅಂಬ್ಯುಲೆನ್ಸ್  ಕೊರತೆಯಿಂದ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಕಷ್ಟ ಪಡುತ್ತಿರುವ ಸುದ್ದಿಗಳನ್ನು ಕೇಳಿ ತಾವು ಇಂತಹ ಒಂದು ಸೇವೆ ಒದಗಿಸಲು ನಿರ್ಧರಿಸಿದ್ದಾಗಿ ಜಾವೇದ್ ಹೇಳುತ್ತಾರೆ.

ತಮ್ಮ ಪತ್ನಿಯ ಚಿನ್ನಾಭರಣ ಮಾರಿ ತಮ್ಮ ಆಟೋರಿಕ್ಷಾವನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾಗಿ ಅವರು ತಿಳಿಸುತ್ತಾರೆ. ಅವರ ಆಟೋದಲ್ಲಿ ಸ್ಯಾನಿಟೈಸರ್, ಆಕ್ಸಿಜನ್ ಸಿಲಿಂಡರ್, ಪಿಪಿಇ ಸೂಟ್ ಹಾಗೂ ಕೆಲ ಅಗತ್ಯ ಔಷಧಿಗಳೂ ಇವೆ.

ಆಕ್ಸಿಜನ್ ರೀಫಿಲ್ಲಿಂಗ್ ಸೆಂಟರಿನಲ್ಲಿ ಸರತಿಯಲ್ಲಿ ನಿಂತು ತಮ್ಮ ಆಟೋದಲ್ಲಿನ ಸಿಲಿಂಡರಿಗೆ ಆಕ್ಸಿಜನ್ ತುಂಬಿಸುತ್ತಿರುವುದಾಗಿ ಹೇಳುವ ಅವರು ನಗರದಲ್ಲಿ ಯಾರಾದರೂ ಅಂಬ್ಯುಲೆನ್ಸ್ ದೊರೆಯದೇ ಇದ್ದರೆ ತಮಗೆ ಕರೆ ಮಾಡಬಹುದು. ಗಂಭೀರ ಸ್ಥಿತಿಯಲ್ಲಿದ್ದ 9 ರೋಗಿಗಳನ್ನು ಇಲ್ಲಿಯ ತನಕ ತಮ್ಮ ಆಟೋ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುವುದಾಗಿಯೂ ಅವರು ತಿಳಿಸುತ್ತಾರೆ.


 ಪುತ್ತೂರು ಸಂಪ್ಯ ನಿವಾಸಿ ದಮ್ಮಾಮ್ ನಲ್ಲಿ ನಿಧನ, ಅಂತ್ಯಕ್ರೀಯೆಗೆ ಸಹಕರಿಸಿದ ಕೆ.ಸಿ.ಎಫ್

ಪುತ್ತೂರು ಸಂಪ್ಯ ನಿವಾಸಿ ದಮ್ಮಾಮ್ ನಲ್ಲಿ ನಿಧನ, ಅಂತ್ಯಕ್ರೀಯೆಗೆ ಸಹಕರಿಸಿದ ಕೆ.ಸಿ.ಎಫ್


 ಪುತ್ತೂರು ಸಂಪ್ಯ ನಿವಾಸಿ ದಮ್ಮಾಮ್ ನಲ್ಲಿ ನಿಧನ, ಅಂತ್ಯಕ್ರೀಯೆಗೆ ಸಹಕರಿಸಿದ ಕೆ.ಸಿ.ಎಫ್

ಸೌದಿ ಅರೇಬಿಯಾ: ದಮ್ಮಾಮ್ ನಲ್ಲಿ ಹಲವಾರು ವರ್ಷಗಳಿಂದ ಮನೆ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತೂರು ಸಂಪ್ಯ ನಿವಾಸಿ ಝಕರಿಯ್ಯಾ(ಜಕ್ಕಿ) ಎಂಬುವವರು  ತಾ: 27 ಎಪ್ರಿಲ್ ರಂದು ಅನಾರೋಗ್ಯದ ಕಾರಣ ಮರಣಹೊಂದಿರುತ್ತಾರೆ. 

ಉತ್ತಮ ಗುಣ ನಡೆತೆಯ ವ್ಯಕ್ತಿತ್ವ ಹೊಂದಿದ್ದ ಇವರು ಸುಮಾರು 7 ವರ್ಷಗಳಿಂದಿಚೆಗೆ  ವ್ಯೆಯಕ್ತಿಕ ಕಾರಣಗಳಿಂದ ಊರಿಗೆ ಹೋಗದೆ ಕೆಲಸದಲ್ಲಿ ನಿರ್ವಹಿಸುತ್ತಿದ್ದರು, ಧಿಡೀರಣೆ ಕಾಣಿಸಿಕೊಂಡು ರೋಗದಿಂದ ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು ಮೊನ್ನೆ ಮರಣ ಹೊಂದಿದರು. ಮ್ರತರು ತಾಯಿ, ಹೆಂಡತಿ ಹಾಗು ಒಬ್ಬ ಮಗನನ್ನು ಅಗಲಿದ್ದಾರೆ.

 ಮರಣೋತ್ತರ ಕ್ರೀಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗು ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಕೇವಲ 1 ದಿವಸಗಳೊಳಗೆ ಅಂದರೆ ತಾ: ಎಪ್ರಿಲ್ 28 ರಂದು ಲುಹರ್ ನಮಾಜಿನ ಬಳಿಕ ದಮ್ಮಾಮ್  ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು. 

ಈ ಒಂದು ಉತ್ತಮ ಕಾರ್ಯದಲ್ಲಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ  ಮ್ರತರ ಕುಟುಂಬದವರಾದ ಆಸಿಫ್ ಹಾಗು ಝೋನ್ ಸಾಂತ್ವನ ಕನ್ವೀನರ್ ಬಾಷಾ ಗಂಗಾವಲಿ, ರಾಷ್ಟ್ರೀಯ ಸಾಂತ್ವನ ಚೇರ್ಮಾನ್ ಮಹಮ್ಮದ್ ಮಲಬೆಟ್ಟು ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮ್ರತರ ಕುಟುಂಬದವರು, ಗೆಳೆಯರು ಹಾಗು ಕೆ.ಸಿ.ಎಫ್ ನಾಯಕರು ಅಂತ್ಯಕ್ರೀಯೆಯಲ್ಲಿ ಭಾಗಿಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು.


 ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಿಸಿದ ರಾಜ್ಯ ಸರಕಾರ

ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಿಸಿದ ರಾಜ್ಯ ಸರಕಾರ


 ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಿಸಿದ ರಾಜ್ಯ ಸರಕಾರ

ಬೆಂಗಳೂರು: ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿ ವಾಹನ ತೆರಿಗೆಯನ್ನು ಪಾವತಿಸಲು ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಅವರು, ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ಎಪ್ರಿಲ್ 15ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆ ಅವಧಿಯನ್ನು ಮೇ 15ರವರೆಗೆ ಮತ್ತು ದಂಡ ಸಹಿತವಾಗಿ ಎಪ್ರಿಲ್ 30ರ ಒಳಗೆ ಪಾವತಿಸಬೇಕಾಗಿದ್ದ ಅವಧಿಯನ್ನು ಮೇ31 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ  ಎಂದು ತಿಳಿಸಿದ್ದಾರೆ.

 ನಾಳೆ ಲಸಿಕೆಗಾಗಿ ಕ್ಯೂ ನಿಲ್ಲಬೇಡಿ: ದಿಲ್ಲಿ ನಾಗರಿಕರಿಗೆ ಅರವಿಂದ ಕೇಜ್ರಿವಾಲ್ ಮನವಿ

ನಾಳೆ ಲಸಿಕೆಗಾಗಿ ಕ್ಯೂ ನಿಲ್ಲಬೇಡಿ: ದಿಲ್ಲಿ ನಾಗರಿಕರಿಗೆ ಅರವಿಂದ ಕೇಜ್ರಿವಾಲ್ ಮನವಿ


 ನಾಳೆ ಲಸಿಕೆಗಾಗಿ ಕ್ಯೂ ನಿಲ್ಲಬೇಡಿ: ದಿಲ್ಲಿ ನಾಗರಿಕರಿಗೆ ಅರವಿಂದ ಕೇಜ್ರಿವಾಲ್ ಮನವಿ

ಹೊಸದಿಲ್ಲಿ: ನಗರಕ್ಕೆ ಇನ್ನೂ ಲಸಿಕೆ ಸರಬರಾಜು ಬಂದಿಲ್ಲವಾದ್ದರಿಂದ ಕೋವಿಡ್ ಲಸಿಕೆಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಡಿ ಎಂದು ದಿಲ್ಲಿ ನಾಗರಿಕರಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿನಂತಿಸಿಕೊಂಡರು.

18 ವರ್ಷಕ್ಕಿಂತ ಮೇಲ್ಮಟ್ಟ ಎಲ್ಲರಿಗೂ ಲಸಿಕೆಗಳನ್ನು ಆರಂಭಿಸುವ ಮುನ್ನಾದಿನ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂತಹದ್ದೊಂದು ಮನವಿ ಮಾಡಿದ್ದಾರೆ.

ನಾಳೆ ಲಸಿಕೆಗಳಿಗಾಗಿ ಕ್ಯೂ ನಿಲ್ಲಬೇಡಿ. ಲಸಿಕೆಗಳು ಬಂದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ. ನಂತರ ನೀವು ಲಸಿಕೆ ಸ್ವೀಕರಿಸಲು ಬರಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮೇ 1ರಂದು ವ್ಯಾಕ್ಸಿನೇಶನ್ ಗಳನ್ನು 18 ವರ್ಷದಿಂದ 44 ವರ್ಷದ ತನಕ ವಿಸ್ತರಿಸಲಾಗುವುದು ಎಂದು ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿತ್ತು. ಆದರೆ ಹಲವಾರು ರಾಜ್ಯಗಳು ಲಸಿಕೆ ದಾಸ್ತಾನು ಇಲ್ಲದ ಕಾರಣ ಮೇ 1ರಂದು ಶನಿವಾರ ಲಸಿಕೆ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿವೆ.


 ಕೋವಿಡ್‌ ವಾರ್ಡ್‌ ನೊಳಗೆ ತೆರಳಿ, ಆಕ್ಸಿಜನ್‌ ಪೈಪ್‌ ತೆಗೆದು ರೋಗಿಗಳಿಗೆ ಜ್ಯೂಸ್‌ ನೀಡಿದ ಎಬಿವಿಪಿ ಕಾರ್ಯಕರ್ತರು !

ಕೋವಿಡ್‌ ವಾರ್ಡ್‌ ನೊಳಗೆ ತೆರಳಿ, ಆಕ್ಸಿಜನ್‌ ಪೈಪ್‌ ತೆಗೆದು ರೋಗಿಗಳಿಗೆ ಜ್ಯೂಸ್‌ ನೀಡಿದ ಎಬಿವಿಪಿ ಕಾರ್ಯಕರ್ತರು !

 

ಕೋವಿಡ್‌ ವಾರ್ಡ್‌ ನೊಳಗೆ ತೆರಳಿ, ಆಕ್ಸಿಜನ್‌ ಪೈಪ್‌ ತೆಗೆದು ರೋಗಿಗಳಿಗೆ ಜ್ಯೂಸ್‌ ನೀಡಿದ ಎಬಿವಿಪಿ ಕಾರ್ಯಕರ್ತರು !

ಡೆಹ್ರಾಡೂನ್:‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಕೋವಿಡ್‌ ಸೋಂಕಿತ ರೋಗಿಗಳಿದ್ದ ವಾರ್ಡ್‌ ಗೆ ತೆರಳಿ ರೋಗಿಗಳ ಆಕ್ಸಿಜನ್‌ ಪೈಪ್‌ ತೆಗೆದು ಜ್ಯೂಸ್‌ ವಿತರಿಸಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಪಿಪಿಇ ಕಿಟ್‌ ಧರಿಸಿ ಡೂನ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ ಪ್ರವೇಶಿಸಿ ಜ್ಯೂಸ್‌ ನೀಡುತ್ತಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಈ ಕುರಿತು ಮಾತನಾಡಿದ ಡೂನ್‌ ಮೆಡಿಕಲ್‌ ಕಾಲೇಜ್‌ ನ ಪ್ರಿನ್ಸಿಪಾಲ್‌ ಅಶುತೋಷ್‌ ಸಯಾನಾ, "ಎಬಿವಿಪಿಯ ಕಾರ್ಯಕರ್ತರು ನಮ್ಮಲ್ಲಿ ಆಸ್ಪತ್ರೆಯ ಆಡಳಿತಕ್ಕೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಆದರೆ ಕೋವಿಡ್‌ ವಾರ್ಡ್‌ ಗೆ ಪ್ರವೇಶಿಸಲು ಅವರಿಗೆ ಅನುಮತಿ ನೀಡಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಎಬಿವಿಪಿಯ ಸ್ಟಿಕರ್‌ ಧರಿಸಿರುವ ಕಾರ್ಯಕರ್ತರು ಪಿಪಿಇ ಕಿಟ್‌ ಧರಿಸಿಕೊಂಡು ಕೋವಿಡ್‌ ವಾರ್ಡ್‌ ಪ್ರವೇಶಿಸಿ ರೋಗಿಗಳ ಆಕ್ಸಿಜನ್‌ ಮಾಸ್ಕ್‌ ಅನ್ನು ತೆಗೆದು ಜ್ಯೂಸ್‌ ನೀಡುತ್ತಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯ ಕಾರ್ಯಕರ್ತರಲ್ಲದೇ ಬೇರೆ ಯಾರೂ ಕೋವಿಡ್‌ ರೋಗಿಗಳಿರುವ ವಾರ್ಡ್‌ ಪ್ರವೇಶಿಸುವುದು ನಿಷಿದ್ಧವಾಗಿದೆ. "ನಮ್ಮ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಕೋವಿಡ್‌ ವಾರ್ಡ್‌ ಹೈ ರಿಸ್ಕ್‌ ಪ್ರದೇಶ ಆಗಿರುವ ಕಾರಣ ನಾವು ಅನುಮತಿ ನೀಡಿರಲಿಲ್ಲ. ಅವರು ಕೋವಿಡ್‌ ವಾರ್ಡ್‌ ಹೇಗೆ ಪ್ರವೇಶಿಸಿದ್ದಾರೆಂದು ನಾವು ತನಿಖೆ ನಡೆಸುತ್ತೇವೆ" ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಚಾರವು ಬೆಳಕಿಗೆ ಬರುತ್ತಿದ್ದಂತೆಯೇ ಆಸ್ಪತ್ರೆಯ ಮುಖ್ಯಸ್ಥರು ಎಬಿವಿಪಿ ಕಾರ್ಯಕರ್ತರಿಗೆ ಆಸ್ಪತ್ರೆ ಪ್ರವೇಶ ನಿಷೇಧಿಸಿದ್ದಾರೆ ಎಂದು ತಿಳಿದು ಬಂದಿದೆ.


 ಬೇರೆಯವರ ಹೆಂಡತಿಯರ ಲೆಕ್ಕ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ?: ಸುಧಾಕರ್ ಗೆ ಕಾಂಗ್ರೆಸ್ ಚಾಟಿ

ಬೇರೆಯವರ ಹೆಂಡತಿಯರ ಲೆಕ್ಕ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ?: ಸುಧಾಕರ್ ಗೆ ಕಾಂಗ್ರೆಸ್ ಚಾಟಿ


 ಬೇರೆಯವರ ಹೆಂಡತಿಯರ ಲೆಕ್ಕ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ?: ಸುಧಾಕರ್ ಗೆ ಕಾಂಗ್ರೆಸ್ ಚಾಟಿ  

ಬೆಂಗಳೂರು: ಸಚಿವ ಸುಧಾಕರ್ ಅವರೇ, ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ!? ಎಂದು ರಾಜ್ಯ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ ಸುದ್ದಿಗಳು, ಆದರೆ ಸರ್ಕಾರ ವೈಫಲ್ಯ ಮುಚ್ಚಲು ಸಾವಿನ ಲೆಕ್ಕ ಮುಚ್ಚಿಡುತ್ತಿದೆ. ಮೋದಿಯ ಚಾಳಿ ಮುಂದುವರೆಸಿದೆ ಎಂದು ಟೀಕಿಸಿದೆ.

'ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ' ಇದೇ ಈ ಸರ್ಕಾರದ ಸಾಧನೆ. ಯಡಿಯೂರಪ್ಪಅವರೇ ಹಸಿವು ಕೊಲ್ಲುತ್ತಿದೆ ಕೂಡಲೇ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸಿ, ಇಲ್ಲದೆ ಹೋದಲ್ಲಿ ಸೋಂಕಿತರ ಸಾವುಗಳೊಂದಿಗೆ ಹಸಿದವರ ಸಾವೂ ಸೇರಲಿದೆ, ನಿಮ್ಮ ಮಸಣಗಳು ಸಾಲುವುದಿಲ್ಲ. ಈ ಮನಕಲುಕುವ ಘಟನೆ ಕಂಡೂ ಸುಮ್ಮನಿದ್ದರೆ ಕ್ಷಮೆ ಇರುವುದಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

 ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವತಿಯಿಂದ ರಂಝಾನ್ ಕಿಟ್ ವಿತರಣೆ

 

ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಮಂಗಳೂರು : ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ ಅವರ ನೇತೃತ್ವದಲ್ಲಿ ಆಯ್ದ 150 ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಕ್ರಷ್ಣಾಪುರದ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್ ಉದ್ಘಾಟಿಸಿದರು. ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಇಬ್ರಾಹಿಂ ಅಹ್ಸನಿ ಮಂಜನಾಡಿ ಹಾಗೂ ದಹ್ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಆಶಂಸ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ,ಜಿಲ್ಲಾ ಸದಸ್ಯರಾದ ರಫೀಖ್ ಸುರತ್ಕಲ್ ಹಾಗೂ ಹಮೀದ್ ವರಕೋಡಿ ಉಪಸ್ಥಿತರಿದ್ದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಹೈದರಾಲಿ 4ನೇ ಬ್ಲಾಕ್ ಕಾಟಿಪಳ್ಳ ಸ್ವಾಗತಿಸಿ, ಜಿಲ್ಲಾ ರೈನ್ಬೋ ಕಾರ್ಯದರ್ಶಿ ಮನ್ಸೂರ್ ಬಜಾಲ್ ವಂದಿಸಿದರು.

Thursday, 29 April 2021

 ಮಂಗಳೂರಿನ ‌ಸೆಂಟ್ರಲ್‌ ಮಾರ್ಕೆಟ್ ಸಂಪೂರ್ಣ ಬಂದ್

ಮಂಗಳೂರಿನ ‌ಸೆಂಟ್ರಲ್‌ ಮಾರ್ಕೆಟ್ ಸಂಪೂರ್ಣ ಬಂದ್


 ಮಂಗಳೂರಿನ ‌ಸೆಂಟ್ರಲ್‌ ಮಾರ್ಕೆಟ್ ಸಂಪೂರ್ಣ ಬಂದ್

ಮಂಗಳೂರು : ನಿನ್ನೆ ಬೆಳಗ್ಗೆ ವಿನಾಯಿತಿ ಅವಧಿಯಲ್ಲಿ ಜನ‌ರಿಂದ‌ ತುಂಬಿ ತುಳುಕಿದ್ದ ಸೆಂಟ್ರಲ್ ಮಾರ್ಕೆಟ್ ಇಂದು ಸ್ತಬ್ಧವಾಗಿತ್ತು.

ನಿನ್ನೆ ಬೆಳಗ್ಗೆ 10 ಗಂಟೆಯವರೆಗೂ ಜನ ಜಂಗುಳಿಯಿಂದ ಕೂಡಿದ್ದ ಮಾರ್ಕೆಟ್ ಮಾಸ್ಕ್ ಇಲ್ಲದೆ, ಸುರಕ್ಷಿತ ಅಂತರ ಇಲ್ಲದೆ ವ್ಯಾಪಾರ ಹಾಗೂ ಜನಜಂಗುಳಿಯ ಕಾರಣ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ನಿನ್ನೆ ಆದೇಶ ಹೊರಡಿಸಿ ಬೈಕಂಪಾಡಿ ಎಪಿಎಂಸಿಯಲ್ಲೇ ರಖಂ ವ್ಯಾಪಾರ ಮಾಡಲು ಸೂಚಿಸಿದ್ದರು. ಹಾಗಾಗಿ‌ ಇಂದು ಮಾರ್ಕೆಟ್ ಸುತ್ತ ಬ್ಯಾರಿಕೇಡಿ ಹಾಕಿದ ಪೊಲೀಸರು ಸೆಂಟ್ರಲ್ ಮಾರುಕಟ್ಟೆ ಪ್ರವೇಶಿಸದಂತೆ  ಬಂದ್ ಮಾಡಿದ್ದಾರೆ.

ಕೇಂದ್ರ ಮಾರುಕಟ್ಟೆ ಯಲ್ಲಿ ವ್ಯಾಪಾರ ಬಂದ್ ಮಾಡಿ ಜಿಲ್ಲಾಧಿಕಾರಿ ನಿನ್ನೆ ಆದೇಶಿಸುವ ಹಿನ್ನೆಲೆಯಲ್ಲಿ ಇಂದು ನಗರದ ಟೌನ್ ಹಾಲ್ ಎದುರು ವ್ಯಾಪಾರ ನಡೆಸಿದ ಸಂದರ್ಭದಲ್ಲಿ ಜನರು ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೋವಿಡ್ ಎರಡನೇ ಅಲೆಯ ನಡುವೆಯೂ ಕುಂಭಮೇಳದಲ್ಲಿ 91 ಲಕ್ಷ ಮಂದಿ ಭಾಗಿ: ವರದಿ

ಕೋವಿಡ್ ಎರಡನೇ ಅಲೆಯ ನಡುವೆಯೂ ಕುಂಭಮೇಳದಲ್ಲಿ 91 ಲಕ್ಷ ಮಂದಿ ಭಾಗಿ: ವರದಿ


 ಕೋವಿಡ್ ಎರಡನೇ ಅಲೆಯ ನಡುವೆಯೂ ಕುಂಭಮೇಳದಲ್ಲಿ 91 ಲಕ್ಷ ಮಂದಿ ಭಾಗಿ: ವರದಿ

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಎರಡನೇ ಅಲೆಯ ಅಬ್ಬರದ ನಡುವೆಯೇ ನಡೆದ ಕುಂಭಮೇಳದ ಸಂದರ್ಭದಲ್ಲಿ ಹರಿದ್ವಾರಕ್ಕೆ 91 ಲಕ್ಷ ಯಾತ್ರಿಗಳು ಭೇಟಿ ನೀಡಿದ್ದಾರೆ ಎಂದು ಸಂಘಟಕರು ಪ್ರಕಟಿಸಿದ್ದಾರೆ.

ಕೋವಿಡ್-19 ಶಿಷ್ಟಾಚಾರಗಳ ಉಲ್ಲಂಘನೆ ವ್ಯಾಪಕವಾಗಿ ಈ ಸಂದರ್ಭದಲ್ಲಿ ನಡೆದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಲು ಕುಂಭಮೇಳದ ಕೊಡುಗೆ ಅತ್ಯಧಿಕ ಎಂದು ಆರೋಪಿಸಲಾಗುತ್ತಿದೆ.

ಕುಂಭಮೇಳ ಫೋರ್ಸ್‌ನ ಅಂಕಿ ಅಂಶಗಳ ಪ್ರಕಾರ ಜ. 14ರಿಂದ ಎ. 27ರೊಳಗೆ ಗಂಗಾನದಿಯಲ್ಲಿ 91 ಲಕ್ಷ ಯಾತ್ರಾರ್ಥಿಗಳು ಪುಣ್ಯಸ್ನಾನ ಕೈಗೊಂಡಿದ್ದಾರೆ. ಈ ಪೈಕಿ ಅತ್ಯಧಿಕ ಮಂದಿ ಅಂದರೆ 60 ಲಕ್ಷ ಮಂದಿ ಎಪ್ರಿಲ್‌ನಲ್ಲೇ ಭಾಗವಹಿಸಿದ್ದಾರೆ.

ಎ. 12ರಂದು ಸೋಮಾವತಿ ಅಮಾವಾಸ್ಯೆಯಂದು 35 ಲಕ್ಷ ಮಂದಿ ಶಾಹಿಸ್ನಾನ ಮಾಡಿದ್ದರು. ಮಾರ್ಚ್ 11ರಂದು ಮಹಾಶಿವರಾತ್ರಿಯಂದು 32 ಲಕ್ಷ ಮಂದಿ, ಮೇಷ ಸಂಕ್ರಾಂತಿಯಾದ ಎ. 14ರಂದು 13 ಲಕ್ಷ ಮಂದಿ ಹಾಗೂ ಎ. 27ರಂದು ನಡೆದ ಮೂರನೇ ಶಾಹಿಸ್ನಾನದಲ್ಲಿ 25 ಸಾವಿರ ಮಂದಿ ಭಾಗವಹಿಸಿದ್ದರು. ಇಡೀ ಕುಂಭಮೇಳದ ವೇಳೆ ಕೋವಿಡ್-19 ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು ಎಂದು ಆರೋಪಿಸಲಾಗಿದೆ.

ಜನವರಿಯಿಂದ ಎಪ್ರಿಲ್‌ವರೆಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ಈ ಬಾರಿ ಒಂದು ತಿಂಗಳಿಗೆ ಮೊಟಕುಗೊಳಿಸಲಾಗಿತ್ತು. ಆದರೆ ಕುಂಭಮೇಳ ಆರಂಭಕ್ಕೆ ಮುನ್ನವೇ ಲಕ್ಷಾಂತರ ಭಕ್ತರು ಹರಿದ್ವಾರಕ್ಕೆ ಆಗಮಿಸಿದ್ದರು. ಕಳೆದ ವಾರ ಆರೋಗ್ಯ ಸಚಿವಾಲಯ, ಭಕ್ತರ ಸಮಾವೇಶದಿಂದಾಗಿ ಕೋವಿಡ್-19 ಪ್ರಕರಣಗಳು ಹೆಚ್ಚಲಿವೆ ಎಂದು ಎಚ್ಚರಿಕೆ ನೀಡಿತ್ತು. ಹರಿದ್ವಾರದಲ್ಲಿ ಎ. 1ರಂದು 15226 ಇದ್ದ ಒಟ್ಟು ಕೋವಿಡ್ ಪ್ರಕರಣಗಳು ಇದೀಗ 31596 ಕ್ಕೇರಿವೆ. ಸಾವಿನ ಸಂಖ್ಯೆ ಕೂಡಾ 2508ಕ್ಕೇರಿದೆ. ರಾಜ್ಯದಲ್ಲಿ 2236ರಷ್ಟಿದ್ದ ಸಕ್ರಿಯ ಪ್ರಕರಣಗಳು ಇದೀಗ 48,318ಕ್ಕೆ ಹೆಚ್ಚಿವೆ.

 ಈಜಿಪ್ಟ್‌, ಯುಎಇ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಿಂದ ಭಾರತಕ್ಕೆ ಸಹಾಯ ಹಸ್ತ: ಕೇಂದ್ರ ಸರಕಾರ

ಈಜಿಪ್ಟ್‌, ಯುಎಇ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಿಂದ ಭಾರತಕ್ಕೆ ಸಹಾಯ ಹಸ್ತ: ಕೇಂದ್ರ ಸರಕಾರ

 ಈಜಿಪ್ಟ್‌, ಯುಎಇ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಿಂದ ಭಾರತಕ್ಕೆ ಸಹಾಯ ಹಸ್ತ.

ಹೊಸದಿಲ್ಲಿ, ಎ.29: ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ನೆರವಾಗಲು 550 ಆಮ್ಲಜನಕ ಉತ್ಪಾದನಾ ಘಟಕ, 4000 ಆಮ್ಲಜನಕ ಸಾಂದ್ರಕಗಳು ಹಾಗೂ 10000 ಆಮ್ಲಜನಕ ಸಿಲಿಂಡರ್ಗಳು ವಿದೇಶದಿಂದ ಲಭಿಸುವ ನಿರೀಕ್ಷೆಯಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

ಈಜಿಪ್ಟ್ ನಿಂದ 4,00,000 ಡೋಸ್ ರೆಮ್ಡೆಸಿವಿರ್ ಲಸಿಕೆ ಪಡೆಯಲಾಗುವುದು. ಜೊತೆಗೆ ಯುಎಇ, ಬಾಂಗ್ಲಾದೇಶ ಮತ್ತು ಉಜ್ಬೇಕಿಸ್ತಾನದಿಂದಲೂ ರೆಮ್ಡೆಸಿವಿರ್ ಲಸಿಕೆ ಲಭಿಸುವ ನಿರೀಕ್ಷೆಯಿದೆ. 40ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ನೆರವಿನ ಹಸ್ತ ಚಾಚಿವೆ ಎಂದು ಸುದ್ಧಿಗೋಷ್ಟಿಯಲ್ಲಿ ಅವರು ಹೇಳಿದ್ದಾರೆ. 

ಆಕ್ಸಿಜನ್ ಜನರೇಟರ್ಗಳು, ಸಾಂದ್ರಕಗಳು, ಆಕ್ಸಿಜನ್ ಸಿಲಿಂಡರ್ಗಳು, ದ್ರವ ಆಮ್ಲಜನಕ ಮತ್ತು ಕ್ರಯೋಜೆನಿಕ್ ಟ್ಯಾಂಕರ್ಗಳನ್ನು ಪಡೆಯುವುದಕ್ಕೆ ಸರಕಾರ ಆದ್ಯತೆ ನೀಡಿದೆ. ನೇರವಾಗಿ ಪಡೆಯುವ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಅಮೆರಿಕದಿಂದ ವೈದ್ಯಕೀಯ ಸಾಧನಗಳನ್ನು ತರುತ್ತಿರುವ ಎರಡು ವಿಮಾನಗಳು ಶುಕ್ರವಾರ ಭಾರತದಲ್ಲಿ ಬಂದಿಳಿಯುವ ನಿರೀಕ್ಷೆಯಿದೆ. ಮುಂದಿನ ಕೆಲ ದಿನಗಳಲ್ಲಿ ಮತ್ತೊಂದು ವಿಮಾನ ಆಗಮಿಸಲಿದೆ. ದೇಶದಲ್ಲಿ ಆತಂಕ ಹುಟ್ಟಿಸಿರುವ ಸೋಂಕಿನ ವಿನಾಶಕಾರಿ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡುವುದಾಗಿ ವಿಶ್ವದ ಹಲವು ರಾಷ್ಟ್ರಗಳು ಘೋಷಿಸಿವೆ ಎಂದವರು ಹೇಳಿದ್ದಾರೆ.

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಗುರುವಾರ ಎಂಟನೇ ಮತ್ತು ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ ಪಂಚರಾಜ್ಯಗಳ ಮತದಾನ ಪ್ರಕ್ರಿಯೆ ಮಗಿದಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಚುನಾವಣಾ ಪ್ರಕ್ರಿಯೆ ಮುಕ್ತಾಯದ ಬಳಿಕ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಮೇ 2, ಭಾನುವಾರ ಮತಎಣಿಕೆ ನಡೆದು, ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ಕೇರಳದಲ್ಲಿ ಈ ಬಾರಿ ಮತ್ತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಮರಳಿ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೇರಳದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ 15ನೇ ವಿಧಾನಸಭೆಗೆ 140 ಸದಸ್ಯರ ಆಯ್ಕೆಗಾಗಿ ಮತದಾನ ನಡೆದಿತ್ತು. ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು.

2016ರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಮೂರನೇ ಎರಡರಷ್ಟು ಮತಗಳಿಸಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 47 ಮತ್ತು ಬಿಜೆಪಿ 1 ಸ್ಥಾನ ಗಳಿಸಿತ್ತು. ಓರ್ವ ಪಕ್ಷೇತರ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದರು.

ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಈ ಬಾರಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ 71-77 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 62-68 ಮತ್ತು ಬಿಜೆಪಿ 0-2 ಸ್ಥಾನ ಗಳಿಸಲಿದೆ.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಪ್ರಕಾರ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 104-120 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 20-36 ಮತ್ತು ಬಿಜೆಪಿ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿರುವಂತೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 72-80 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 58-64 ಮತ್ತು ಬಿಜೆಪಿ 1-5 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದೆ.

ಒಟ್ಟಾರೆ ಮೂರು ಪ್ರಮುಖ ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್, ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ಅಧಿಕಾರಕ್ಕೇರುವುದು ಖಚಿತ ಎನ್ನಲಾಗಿದೆ. ಅಲ್ಲದೆ, ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ ಪಿಣರಾಯಿ ವಿಜಯನ್ ಸೂಕ್ತ ಎಂದು ಅತ್ಯಧಿಕ ಮಂದಿ ಉತ್ತರಿಸಿದ್ದಾರೆ.


 ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ

ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ


ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಗುರುವಾರ ಎಂಟನೇ ಮತ್ತು ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ ಪಂಚರಾಜ್ಯಗಳ ಮತದಾನ ಪ್ರಕ್ರಿಯೆ ಮಗಿದಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಚುನಾವಣಾ ಪ್ರಕ್ರಿಯೆ ಮುಕ್ತಾಯದ ಬಳಿಕ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಮೇ 2, ಭಾನುವಾರ ಮತಎಣಿಕೆ ನಡೆದು, ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ಕೇರಳದಲ್ಲಿ ಈ ಬಾರಿ ಮತ್ತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಮರಳಿ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೇರಳದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ 15ನೇ ವಿಧಾನಸಭೆಗೆ 140 ಸದಸ್ಯರ ಆಯ್ಕೆಗಾಗಿ ಮತದಾನ ನಡೆದಿತ್ತು. ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು.

2016ರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಮೂರನೇ ಎರಡರಷ್ಟು ಮತಗಳಿಸಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 47 ಮತ್ತು ಬಿಜೆಪಿ 1 ಸ್ಥಾನ ಗಳಿಸಿತ್ತು. ಓರ್ವ ಪಕ್ಷೇತರ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದರು.

ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಈ ಬಾರಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ 71-77 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 62-68 ಮತ್ತು ಬಿಜೆಪಿ 0-2 ಸ್ಥಾನ ಗಳಿಸಲಿದೆ.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಪ್ರಕಾರ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 104-120 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 20-36 ಮತ್ತು ಬಿಜೆಪಿ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿರುವಂತೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 72-80 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 58-64 ಮತ್ತು ಬಿಜೆಪಿ 1-5 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದೆ.

ಒಟ್ಟಾರೆ ಮೂರು ಪ್ರಮುಖ ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್, ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ಅಧಿಕಾರಕ್ಕೇರುವುದು ಖಚಿತ ಎನ್ನಲಾಗಿದೆ. ಅಲ್ಲದೆ, ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ ಪಿಣರಾಯಿ ವಿಜಯನ್ ಸೂಕ್ತ ಎಂದು ಅತ್ಯಧಿಕ ಮಂದಿ ಉತ್ತರಿಸಿದ್ದಾರೆ.


Exit Poll: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ಪ್ರಬಲ ಪೈಪೋಟಿ

ಡೆಲ್ಲಿ ಕ್ಯಾಪಿಟಲ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯ

ಡೆಲ್ಲಿ ಕ್ಯಾಪಿಟಲ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯ


ಡೆಲ್ಲಿ ಕ್ಯಾಪಿಟಲ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯ

ಅಹಮದಾಬಾದ್: ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪೃಥ್ವಿ ಶಾ(82) ಹಾಗೂ ಶಿಖರ್ ಧವನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌, ಆಯಂಡ್ರೆ ರಸೆಲ್(45) ಮತ್ತು ಶುಭಮನ್ ಗಿಲ್ (43) ರನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.

ಗೆಲುವಿಗೆ 155 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಕೇವಲ 16.3 ಓವರ್ ಗಳಲ್ಲೇ ಗೆಲುವಿನ ಗುರಿ ತಲುಪಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನಕ್ಕೇರಿದೆ.

ಪೃಥ್ವಿ ಶಾ ಕೆಕೆಆರ್‌ ಎದುರು 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಐಪಿಎಲ್ 2021 ಟೂರ್ನಿಯ ಅತಿ ವೇಗದ ಫಿಫ್ಟಿ ತಮ್ಮದಾಗಿಸಿಕೊಂಡರು. 41 ಎಸೆತಗಳಲ್ಲಿ 11 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 82 ರನ್‌ ಸಿಡಿಸುವ ಮೂಲಕ ಪಂದ್ಯ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು.

 ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 270 ಸೋಂಕಿತರು ಮೃತ್ಯು, 35 ಸಾವಿರ ಮಂದಿಗೆ ಸೋಂಕು

ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 270 ಸೋಂಕಿತರು ಮೃತ್ಯು, 35 ಸಾವಿರ ಮಂದಿಗೆ ಸೋಂಕು


ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 270 ಸೋಂಕಿತರು ಮೃತ್ಯು, 35 ಸಾವಿರ ಮಂದಿಗೆ ಸೋಂಕು

ಬೆಂಗಳೂರು, ಎ.29: ರಾಜ್ಯದಲ್ಲಿ ಗುರುವಾರದಂದು 35,024 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 270 ಜನರು ಸೋಂಕಿಗೆ ಬಲಿಯಾಗಿದ್ದು, 14,142 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 14,74,846ಕ್ಕೆ ತಲುಪಿದ್ದು, 2,431 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 15,306ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 3,49,496ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

270 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 16, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 143, ಬೀದರ್ 5, ಚಾಮರಾಜನಗರ 7, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 1, ಧಾರವಾಡ 5, ಹಾಸನ 9, ಹಾವೇರಿ 6, ಕಲಬುರಗಿ 11, ಕೋಲಾರ 1, ಮಂಡ್ಯ 9, ಮೈಸೂರು 12, ರಾಮನಗರ 4, ಶಿವಮೊಗ್ಗ 3, ತುಮಕೂರು 9, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 35,024 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 302, ಬಳ್ಳಾರಿ 896, ಬೆಳಗಾವಿ 545, ಬೆಂಗಳೂರು ಗ್ರಾಮಾಂತರ 1,129, ಬೆಂಗಳೂರು ನಗರ 19,637, ಬೀದರ್ 180, ಚಾಮರಾಜನಗರ 359, ಚಿಕ್ಕಬಳ್ಳಾಪುರ 545,  ಚಿಕ್ಕಮಗಳೂರು 242, ಚಿತ್ರದುರ್ಗ 126, ದಕ್ಷಿಣ ಕನ್ನಡ 1,175, ದಾವಣಗೆರೆ 196, ಧಾರವಾಡ 427, ಗದಗ 132, ಹಾಸನ 624, ಹಾವೇರಿ 111, ಕಲಬುರಗಿ 957, ಕೊಡಗು 537, ಕೋಲಾರ 536, ಕೊಪ್ಪಳ 220, ಮಂಡ್ಯ 939, ಮೈಸೂರು 1,219, ರಾಯಚೂರು 628, ರಾಮನಗರ 183, ಶಿವಮೊಗ್ಗ 372, ತುಮಕೂರು 1,195, ಉಡುಪಿ 568, ಉತ್ತರ ಕನ್ನಡ 377, ವಿಜಯಪುರ 408, ಯಾದಗಿರಿ ಜಿಲ್ಲೆಯಲ್ಲಿ 259 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 143 ಜನರು ಸಾವು

ರಾಜಧಾನಿಯಲ್ಲಿ ಗುರುವಾರದಂದು 19,637 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 143 ಜನರು ಮೃತಪಟ್ಟಿದ್ದಾರೆ. 6,128 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 7,29,984 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 6282 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,86,183 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


ದಿನವೂ ಹೊಸ ಅನುಭವಗಳೊಂದಿಗೆ ನಮ್ಮನ್ನು ಅಚ್ಚರಿ ಗೊಳಿಸುತ್ತಿದೆ ಈ ಉತ್ತರ ಕರ್ನಾಟಕ!! ಭವಿಷ್ಯದ ಭರವಸೆಯ ಬೆಳಕಾಗಿ ಮಸ್‌ದರ್

ದಿನವೂ ಹೊಸ ಅನುಭವಗಳೊಂದಿಗೆ ನಮ್ಮನ್ನು ಅಚ್ಚರಿ ಗೊಳಿಸುತ್ತಿದೆ ಈ ಉತ್ತರ ಕರ್ನಾಟಕ!! ಭವಿಷ್ಯದ ಭರವಸೆಯ ಬೆಳಕಾಗಿ ಮಸ್‌ದರ್


ದಿನವೂ ಹೊಸ ಅನುಭವಗಳೊಂದಿಗೆ ನಮ್ಮನ್ನು ಅಚ್ಚರಿ ಗೊಳಿಸುತ್ತಿದೆ ಈ ಉತ್ತರ ಕರ್ನಾಟಕ!!
ಭವಿಷ್ಯದ ಭರವಸೆಯ ಬೆಳಕಾಗಿ ಮಸ್‌ದರ್

ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ 

(ಪ್ರ.ಕಾರ್ಯದರ್ಶಿ: ಮಸ್‌ದರ್ ಎಜ್ಯು ಆಂಡ್ ಚಾರಿಟಿ)

ದಿನವೂ ನಮ್ಮನ್ನು ಅಚ್ಚರಿ ಗೊಳಿಸುತ್ತದೆ ಈ ಉತ್ತರ ಕರ್ನಾಟಕ! 

ಪ್ರತಿ ಜಿಲ್ಲೆಗಳಲ್ಲೂ ಸಾವಿರಾರು ಹಳ್ಳಿಗಳು, ಪ್ರತಿ ಹಳ್ಳಿಗಳಲ್ಲೂ ಬಗೆಬಗೆಯ ಧಾರ್ಮಿಕ ಆಚರಣೆಗಳು. ಹಲವು ರೀತಿಯ ಕಂದಾಚಾರ, ಮೂಢನಂಬಿಕೆಗಳಿಗೆ ಬಲಿಬಿದ್ದ ಮುಗ್ಧರು! ಒಟ್ಟಿನಲ್ಲಿ ಧಾರ್ಮಿಕವಾಗಿ ತೀರಾ ಹಿಂದುಳಿದಿರುವ ಈ ಪ್ರದೇಶಗಳಲ್ಲಿ ನಮಗೆ ಮಾಡಲಿಕ್ಕಿರುವ ಕೆಲಸ ಅಷ್ಟಿಷ್ಟಲ್ಲ!

ಇಲ್ಲಿನ ಹಳ್ಳಿಗಳಿಗೆ ಅವರ ಸೇವೆಗಾಗಿ ಹಲವು ಸಂಸ್ಥೆಗಳ ಜೊತೆಗೆ ಈಗ ಮಸ್‌ದರ್ ಕೂಡ ಇಳಿದಿದೆ.

ರಬೀವುಲ್ ಅವ್ವಲ್ ತಿಂಗಳಲ್ಲಿ ಆರಂಭವಾದ ನಮ್ಮ ಮಸ್‌ದರ್‌ ಈಗ ಆರು ತಿಂಗಳ ಹಸುಗೂಸು! 

ಆದರೆ, ಅಲ್ ಹಂದುಲಿಲ್ಲಾಹ್.. 28 ಮದ್ರಸಾಗಳು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಎರಡು ತದ್‌ರೀಸ್ (ಶರೀಅತ್ ಕಾಲೇಜು), ಕೊಪ್ಪಳ ಹಾಗೂ ಗಂಗಾವತಿ ಪಟ್ಟಣದಲ್ಲಿ ಎರಡು ತಹ್ಫೀಝುಲ್ ಖುರ್‌ಆನ್ ಕಾಲೇಜುಗಳು ಈಗಾಗಲೇ ಆರಂಭಗೊಂಡಿದೆ. 

ಹೂವಿನ ಹಡಗಲಿ ಹಾಗೂ ಕೊಪ್ಪಳ ಪಟ್ಟಣದಲ್ಲಿ ನಮಗೆ ಲಭಿಸಿರುವ ವಿಶಾಲವಾದ ಜಾಗದಲ್ಲಿ ಸಂಸ್ಥೆಯ ಪ್ರಧಾನ ಕಟ್ಟಡಗಳಿಗೆ ಗೌರವಾಧ್ಯಕ್ಷ ಖುರ್ರತುಸ್ಸಾದಾತ್ ರವರ ಹಸ್ತರತ್ನಗಳ ಮೂಲಕ ಅಡಿಗಲ್ಲು ಹಾಕಲಾಗಿದೆ. ರಂಝಾನ್ ಬಳಿಕ ಕಾಮಗಾರಿ ಆರಂಭಿಸಬೇಕಿದೆ. ಯಲಬುರ್ಗಾ ತಾಲೂಕಿನ ಕುಡಗುಂಟಿಯಲ್ಲಿ ಮಸ್‌ದರ್ ಮಸೀದಿಯೊಂದರ ಕೆಲಸ ಪ್ರಗತಿಯಲ್ಲಿದೆ. ಮೂವತ್ತು ಉಸ್ತಾದ್‌ಗಳು ಉತ್ತರ ಕರ್ನಾಟಕದಲ್ಲಿ ಮಸ್‌ದರ್ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ. 

4 ಸಂಸ್ಥೆಗಳು, 28 ಮದ್ರಸಾಗಳು, ಮೂವತ್ತು ಖಾದಿಂಗಳುಳ್ಳ ನಮ್ಮ ಸಂಸ್ಥೆಯ ತಿಂಗಳ ಖರ್ಚು ಈಗಾಗಲೇ ನಾಲ್ಕೂವರೆ ಲಕ್ಷ ದಾಟುತ್ತಿದೆ. ಸಹೃದಯಿಗಳ ಸಹಾಯಹಸ್ತ ಮಾತ್ರವೇ ಈಗಿರುವ ಆದಾಯ ಮಾರ್ಗ. ಪವಿತ್ರ ರಂಝಾನ್ ತಿಂಗಳಲ್ಲಿ ಹಲವಾರು ಒಳ್ಳೆಯ ಮನಸ್ಸುಗಳು ನಮ್ಮೊಂದಿಗೆ ಸಹಕರಿಸಿದೆ. ಅವರಿಗೆ ಅಲ್ಲಾಹು ಧಾರಾಳ ಖೈರ್ ನೀಡಲಿ - ಆಮೀನ್.

ಈ ಸಂದಿಗ್ಧ ಸಂದರ್ಭದಲ್ಲೂ ನಮ್ಮೊಂದಿಗೆ ಕೈಜೋಡಿಸಲಿಚ್ಛಿಸುವ ಸಹೃದಯಿಗಳು ಸಂಪರ್ಕಿಸಬಹುದಾಗಿದೆ. ಪವಿತ್ರ ರಂಝಾನ್ ತಿಂಗಳಲ್ಲಿ ನೀವು ನೀಡುವ ಸ್ವದಖಾ ಅಲ್ಲಾಹು ಖಬೂಲ್ ಮಾಡಲಿ-ಆಮೀನ್


📲 +91 9164630384

🗓️ 29-04-2021    2.38pm  @ಕಾವಳಕಟ್ಟೆ 


http://hafizsufyansaquafi.blogspot.com/2021/04/blog-post.html


Google pay / Phonepay/paytm

9663134444

---------------------------------------------------------

MASDAR EDU & CHARITY

A/c.  : 99980116035242

IFSC : FDRL0001685

 ಸರಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತೇ ?:  ಸಿದ್ದರಾಮಯ್ಯ

ಸರಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತೇ ?: ಸಿದ್ದರಾಮಯ್ಯ


 ಸರಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತೇ ?:  ಸಿದ್ದರಾಮಯ್ಯ

ಬೆಂಗಳೂರು: ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್ ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಅಂತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದರೆ ಟೀಕೆಯಾಗುತ್ತಾ? ಎಂದು ಮಾಜಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ಕೊರೋನದಿಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.

ಬಡ ರೈತನೊಬ್ಬನಿಗೆ "ಹೊಟ್ಟೆಗಿಲ್ಲದಿದ್ದರೆ ಸಾಯೋದೆ ಒಳ್ಳೆಯದು" ಎಂಬ ಉಡಾಫೆ ಉತ್ತರ ನೀಡಿರುವ ಉಮೇಶ್ ಕತ್ತಿ ಸಚಿವನಾಗಿ ಮುಂದುವರಿಯಲು ನಾಲಾಯಕ್. ಕತ್ತಿ ಪರವಾಗಿ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವ ಬದಲು ಮಂತ್ರಿಮಂಡಲದಿಂದ ಕೈಬಿಡಬೇಕಿತ್ತು. ಇಂತಹ ಅಯೋಗ್ಯರನ್ನು ಇಟ್ಟುಕೊಂಡು ಸರ್ಕಾರ ಬಡವರ ಪರವಾಗಿ ಕೆಲಸ ಮಾಡಲು ಆಗುತ್ತಾ?. ಲಾಕ್‌ಡೌನ್ ನಿಂದಾಗಿ ಜನ ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಅವರ ಬಳಿ ಹಣವಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

 ದಿಲ್ಲಿ: ಆಕ್ಸಿಜನ್‌ ಇಲ್ಲದೇ ಪರದಾಡುತ್ತಿರುವವರಿಗೆ ನೆರವಾಗುತ್ತಿರುವ ಶಾಹೀನ್‌ ಭಾಗ್‌ ನ ವಸೀಮ್‌ ಗ್ಯಾಸ್‌

ದಿಲ್ಲಿ: ಆಕ್ಸಿಜನ್‌ ಇಲ್ಲದೇ ಪರದಾಡುತ್ತಿರುವವರಿಗೆ ನೆರವಾಗುತ್ತಿರುವ ಶಾಹೀನ್‌ ಭಾಗ್‌ ನ ವಸೀಮ್‌ ಗ್ಯಾಸ್‌


 ದಿಲ್ಲಿ: ಆಕ್ಸಿಜನ್‌ ಇಲ್ಲದೇ ಪರದಾಡುತ್ತಿರುವವರಿಗೆ ನೆರವಾಗುತ್ತಿರುವ ಶಾಹೀನ್‌ ಭಾಗ್‌ ನ ವಸೀಮ್‌ ಗ್ಯಾಸ್‌

ಹೊಸದಿಲ್ಲಿ: ಈಗಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪರಿಸ್ಥಿತಿಯು ತಾರಕಕ್ಕೇರಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಗಳ ಕೊರತೆ ಎದುರಾಗಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ದಿಲ್ಲಿಯ ಶಾಹಿನ್‌ ಭಾಗ್‌ ನಲ್ಲಿರುವ ಸಣ್ಣ ಎಸಿ ರಿಪೇರಿ ಅಂಗಡಿಯೊಂದು ಅವಶ್ಯಕತೆಯಿರುವವರಿಗೆ ಆಮ್ಲಜನಕ ತುಂಬಿಸಿ ನೀಡುತ್ತಿರುವ ಕುರಿತು ವರದಿ 

"ಶಾಹಿನ್‌ ಭಾಗ್‌ ನಲ್ಲಿ ನಮಗೆ ಒಟ್ಟು ಮೂರು ಎಸಿ ರಿಪೇರಿ ಅಂಗಡಿಗಳಿವೆ. ಬೇಸಿಗೆಯ ಸಂದರ್ಭ ನಾವು ನೈಟ್ರೋಜನ್‌ ಮತ್ತು ಆಕ್ಸಿಜನ್‌ ಅನ್ನು ನಮ್ಮ ಅಂಗಡಿಗಳಲ್ಲಿ ತುಂಬಿಸಿಟ್ಟಿರುತ್ತೇವೆ. ಇದು ಎಸಿಗಳನ್ನು ರಿಪೇರಿ ಮಾಡುವ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ" ಎಂದು ವಸೀಮ್‌ ಗ್ಯಾಸ್‌ ನ ಮಾಲಕ 30ರ ಹರೆಯದ ವಸೀಮ್‌ ಮಲಿಕ್‌ ಹೇಳುತ್ತಾರೆ.

ಕಳೆದ ವರ್ಷ ಕೋವಿಡ್‌ ಪ್ರಕರಣಗಳು ಹೆಚ್ಚಾದಾಗಲೇ ವಸೀಮ್‌ ಜನರಿಗೆ ಆಮ್ಲಜನಕ ಪೂರೈಕೆ ಮಾಡಲು ಪ್ರಾರಂಭಿಸಿದ್ದರು. "ಈ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ ಈ ವರ್ಷ ಮಾತ್ರ ಸಾವಿರಾರು ಜನರಿಂದ ಬೇಡಿಕೆಗಳ ಬರುತ್ತಿವೆ. ನಮ್ಮ ಅಂಗಡಿಯ ಫೋಟೊವನ್ನು ಸಮೀಪದಲ್ಲೇ ವಾಸಿಸುವ ಇಬ್ಬರು ಯುವಕರು ಟ್ವಿಟರ್‌ ನಲ್ಲಿ ಪ್ರಕಟಿಸಿದ ಬಳಿಕ ಇನ್ನೂ ಜನರು ಬರಲು ಆರಂಭಿಸಿದರು. ಆದರೆ ಸದ್ಯ ನಮ್ಮ ಬಳಿಯೂ ಆಕ್ಸಿಜನ್‌ ಮುಗಿಯುತ್ತಿದೆ ಎನ್ನುವುದು ದುರದೃಷ್ಟಕರ" ಎಂದು ವಸೀಮ್‌ ಹೇಳುತ್ತಾರೆ.

ಒಂದು ಆಕ್ಸಿಜನ್‌ ಸಿಲಿಂಡರ್‌ ಅನ್ನು ರಿಫಿಲ್‌ ಮಾಡಲು 100ರಿಂದ 130ರೂ. ದರ ನಿಗದಿಪಡಿಸಲಾಗುತ್ತಿದೆ. ಆದರೆ ಆಸ್ಪತ್ರೆಗಳು ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ದರ ವಿಧಿಸುತ್ತದೆ ಎಂದು ತಿಳಿದು ಬಂದಿದೆ. ಸಾಮಾಜಿಕ ತಾಣದಿಂದ ಬೇಡಿಕೆಗಳು ಹೆಚ್ಚಾದ ಕೂಡಲೇ ವಸೀಮ್‌ ರ ಸಹೋದರ ಕೂಡಾ ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ದಿನದ 24 ಗಂಟೆಯೂ ಆಕ್ಸಿಜನ್‌ ಪೂರೈಕೆ ಮಾಡುತ್ತಿದ್ದಾರೆ. ವಸೀಮ್‌ ಹಗಲಿನ ವೇಳೆ ಕೆಲಸಕ್ಕೆ ನಿಂತರೆ ಅವರ ಸಹೋದರ ಝುಬೈರ್‌ ರಾತ್ರಿಯ ವೇಳೆ ಕೆಲಸ ನಿರ್ವಹಿಸುತ್ತಿದ್ದಾರೆ. 

"ನನಗೆ ಅತೀ ಹೆಚ್ಚು ನೋವು ನೀಡುವ ಸಂಗತಿಯೆಂದರೆ, ಅತ್ಯವಶ್ಯಕವಾಗಿ ಆಕ್ಸಿಜನ್‌ ಬೇಕು ಎಂದು ನನ್ನ ಬಳಿ ಬಂದು ಬೇಡಿಕೆಯಿಡುವವರಿಗೆ, ಆಕ್ಸಿಜನ್‌ ಖಾಲಿಯಾಗಿದೆ ಎಂದು ಹೇಳುವುದಾಗಿದೆ. ಇದಕ್ಕಿಂತ ನೋವಿನ ಸಂಗತಿ ಬೇರಿಲ್ಲ ಎಂದು ವಸೀಮ್‌ ಹೇಳಿದ್ದಾಗಿ ವರದಿ ತಿಳಿಸಿದೆ.


 ಮೂರು ತಿಂಗಳ ಕಾಲ ವೈದ್ಯಕೀಯ ಸಾಧನಗಳ ಆಮದಿಗೆ ಕೇಂದ್ರ ಸರಕಾರ ಅನುಮತಿ

ಮೂರು ತಿಂಗಳ ಕಾಲ ವೈದ್ಯಕೀಯ ಸಾಧನಗಳ ಆಮದಿಗೆ ಕೇಂದ್ರ ಸರಕಾರ ಅನುಮತಿ


 ಮೂರು ತಿಂಗಳ ಕಾಲ ವೈದ್ಯಕೀಯ ಸಾಧನಗಳ ಆಮದಿಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ತಿಂಗಳ ತನಕ 17 ವೈದ್ಯಕೀಯ ಸಾಧನಗಳನ್ನು  ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಗುರುವಾರ ಅನುಮತಿ ನೀಡಿದೆ.

ಕಸ್ಟಮ್ ಕ್ಲಿಯರೆನ್ಸ್ ನಂತರ ಕಾನೂನು ಮೆಟ್ರಾಲಜಿ ನಿಯಮಗಳು 2011ರ ಪ್ರಕಾರ ಕಡ್ಡಾಯ ಘೋಷಣೆಯೊಂದಿಗೆ 17 ವೈದ್ಯಕೀಯ ಸಾಧನಗಳನ್ನು ಮೂರು ತಿಂಗಳ ತನಕ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವಿಟರ್ ಮುಖಾಂತರ ಸುದ್ದಿಯನ್ನು ದೃಢಪಡಿಸಿದರು.

"ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವೈದ್ಯಕೀಯ ಸಾಧನಗಳನ್ನು ಲೀಗಲ್ ಮೆಟ್ರೊಲಜಿ ರೂಲ್ಸ್ 2011ರ ಅಡಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಇದು ಕೋವಿಡ್-19ಗೆ ಅಗತ್ಯವಾದ ವೈದ್ಯಕೀಯ ಸಾಧನಗಳ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ'' ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

 ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಪುತ್ತೂರಿನ ಯುವಕನ ಮೃತದೇಹ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಪುತ್ತೂರಿನ ಯುವಕನ ಮೃತದೇಹ ಪತ್ತೆ


 ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಪುತ್ತೂರಿನ ಯುವಕನ ಮೃತದೇಹ ಪತ್ತೆ

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಗುರುವಾರ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.

ಪುತ್ತೂರು ನಿವಾಸಿ ನಿರಂಜನ್ (35) ಮೃತ ಯುವಕ. ಈತ ಬುಧವಾರ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾತ್ರಿ ಗೂಡಿನಬಳಿಯ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಬೈಕೊಂದು ನಿಂತಿತ್ತು. ಗುರುವಾರ ಬೆಳಗ್ಗೆಯೂ ಬೈಕ್ ಅಲ್ಲೇ ಇದ್ದುದರಿಂದ ಅನುಮಾನಗೊಂಡ ಗೂಡಿನಬಳಿ ಪರಿಸರದ ಯುವಕರು ನದಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಈಜುಗಾರರಾದ ಹಾರಿಸ್, ಮುಹಮ್ಮದ್ ಮಮ್ಮು, ಇಬ್ರಾಹೀಂ, ಅಮ್ಮಿ, ಇಕ್ಬಾಲ್, ಶಮೀರ್ ಅವರ ತಂಡ ಮೃತದೇಹವನ್ನು ನದಿಯಲ್ಲಿ ಪತ್ತೆ ಹಚ್ಚಿದೆ.

ಬೈಕ್‌ನಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಮೃತ ಯುವಕನ ಹೆಸರು, ವಿಳಾಸ ಪತ್ತೆಯಾಗಿದೆ. ಮೃತ ನಿರಂಜನ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ವರ್ಷದ ಹಿಂದೆ ಊರಿಗೆ ಬಂದಿದ್ದರು. ವಿವಾಹಿತರಾಗಿರುವ ಅವರಿಗೆ ಒಂದು ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತನ ಕುಟುಂಬಿಕರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಬೆಂಕಿ ಹೊತ್ತಿ ಉರಿಯುತ್ತಿದೆ, ಬಿಜೆಪಿಗರೇ ಎಲ್ಲಿದ್ದೀರಾ?: ದಿಲ್ಲಿ ಆರೆಸ್ಸೆಸ್‌ ಮುಖಂಡನ ಟ್ವಿಟರ್‌ ಪೋಸ್ಟ್‌

ಬೆಂಕಿ ಹೊತ್ತಿ ಉರಿಯುತ್ತಿದೆ, ಬಿಜೆಪಿಗರೇ ಎಲ್ಲಿದ್ದೀರಾ?: ದಿಲ್ಲಿ ಆರೆಸ್ಸೆಸ್‌ ಮುಖಂಡನ ಟ್ವಿಟರ್‌ ಪೋಸ್ಟ್‌


 ಬೆಂಕಿ ಹೊತ್ತಿ ಉರಿಯುತ್ತಿದೆ, ಬಿಜೆಪಿಗರೇ ಎಲ್ಲಿದ್ದೀರಾ?: ದಿಲ್ಲಿ ಆರೆಸ್ಸೆಸ್‌ ಮುಖಂಡನ ಟ್ವಿಟರ್‌ ಪೋಸ್ಟ್‌

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಿಲ್ಲಿ ರಾಜ್ಯ ಕಾರ್ಯನಿರ್ವಾಹಕ ಸದಸ್ಯ ರಾಜೀವ್‌ ತುಲಿ ಎಂಬವರು ಟ್ವಿಟರ್‌ ನಲ್ಲಿ ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಧಾನಿಯಲ್ಲಿ ಕೋವಿಡ್‌ ಪರಿಸ್ಥಿತಿಯು ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಬಿಜೆಪಿಗರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲವೇಕೆ? ಎಂದು ಟಾವರು ಟ್ವಿಟರ್‌ ನಲ್ಲಿ ಪ್ರಶ್ನಿಸಿದ್ದಾಗಿ indianexpress.com ವರದಿ ಮಾಡಿದೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿದ ಅವರು, "ದಿಲ್ಲಿಯ ಎಲ್ಲಾ ಸ್ಥಳಗಳಲ್ಲೂ ಬೆಂಕಿ ಹೊತ್ತಿ ಉರಿಯುತ್ತಿದೆ. ದಿಲ್ಲಿವಾಲಾ ಯಾರಾದರೂ ಬಿಜೆಪಿಗರನ್ನು ನೋಡಿದ್ದೀರಾ? ಅಥವಾ ಬಿಜೆಪಿಯ ರಾಜ್ಯ ಸಮಿತಿಯನ್ನು ಬರ್ಕಾಸ್ತುಗೊಳಿಸಿದ್ದಾರಾ? ಎಂದು ರಾಜೀವ್‌ ತುಲಿ ಬರೆದಿದ್ದಾರೆ. ರಾಜೀವ್‌ ಆರೆಸ್ಸೆಸ್‌ ನ ಮಾಜಿ ಪ್ರಾಂತ್‌ ಪ್ರಚಾರ್‌ ಪ್ರಮುಖ್‌ ಆಗಿದ್ದರು. ಈ ಕುರಿತು ಮಾತನಾಡಲು ರಾಜೀವ್‌ ರನ್ನು ಮಾಧ್ಯಮ ತಂಡವು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿ ತಿಳಿಸಿದೆ.

ಈ ಕುರಿತು ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್‌ ಗುಪ್ತಾರನ್ನು ಸಂಪರ್ಕಿಸಿದಾಗ, ನನಗೆ ರಾಜೀವ್‌ ತುಲಿ ಯಾರೆಂದು ತಿಳಿದಿಲ್ಲ. ಅವರ ಟ್ವೀಟ್‌ ಬಗ್ಗೆಯೂ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹರ್ಶ್‌ ಮಲ್ಹೋತ್ರಾ, "ಎಪ್ರಿಲ್‌ 21ರಿಂದ ೨೪ ಗಂಟೆಯೂ ನಮ್ಮ ಸಹಾಯವಾಣಿ ಚಾಲ್ತಿಯಲ್ಲಿದೆ. ಆಹಾರ ಸಾಮಗ್ರಿಗಳ ವ್ಯವಸ್ಥೆ ಸೇರಿದಂತೆ ರೋಗಿಗಳಿಗೆ ಹಲವು ವಿಧಾನಗಳಲ್ಲಿ ನೆರವಾಗುತ್ತಿದ್ದೇವೆ" ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

Wednesday, 28 April 2021

 SSF :ಇದು ದಿಗಂತವನ್ನು ನೋಡಿ ನಿಂತಿರುವ ಪೈರು

SSF :ಇದು ದಿಗಂತವನ್ನು ನೋಡಿ ನಿಂತಿರುವ ಪೈರು


 SSF :ಇದು ದಿಗಂತವನ್ನು ನೋಡಿ ನಿಂತಿರುವ ಪೈರು 

( ಇವತ್ತು  ಸಂಘಟನೆಯ ಸ್ಥಾಪಕ ದಿನ)

       ಅಂದು ನಾವು ಸಣ್ಣವರು ನಮಗೆ SSF ನ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕೆಂಬ ಹಂಬಲ. ಆದುದರಿಂದ ನಾವು SSFನ ಕುರಿತು ನಮ್ಮ ಒಬ್ಬರು ಉಸ್ತಾದರಲ್ಲಿ ಕೇಳಿದಾಗ "ಅದು ಬೆಂಕಿಯಲ್ಲಿ ಬೆಳೆದ ಸಂಘಟನೆ ಆದುದರಿಂದ ಅದು ಸೂರ್ಯನ ಬಿಸಿಲಿಗೆ ಬಾಡಲ್ಲ" ಎಂದರು. ಇದರ ಒಳ ಅರ್ಥವನ್ನು ತಿಳಿಯದ ನಾವು ಒಳಾರ್ಥವನ್ನು ಕೇಳಿದಾಗ ಉಸ್ತಾದರು ಹೇಳಿದರು " ಪವಿತ್ರ ಖುರ್ ಆನ್ ಹೇಳಿದ್ದು ನಿಮ್ಮಲ್ಲಿ ಒಳಿತಿನೆಡೆಗೆ ಆಹ್ವಾನ ನೀಡುವ ಕೆಡುಕಿನ ವಿರುದ್ಧ ಶಬ್ದವೆತ್ತುವ ಸಂಘಟನೆ ಇರಲಿ. ಎಂದಿಲ್ಲವೇ? ಅಂತಹ ಒಂದು ಸಂಘಟನೆಯಾಗಿದೆ SSF " ಎಂದರು. ಆಗ ನಾವು ಬೆಂಕಿಯಲ್ಲಿ ಬೆಳೆದ ಸಂಘಟನೆಯೆಂದರೆ?  " SSF ದಾಟಿ ಬಂದ ಹಾದಿಗಳು ಸುಗಮವಾಗಿರಲಿಲ್ಲ ಹಲವು ನೋವು, ಯಾತನೆಗಳನ್ನು ಸಹಿಸಿಕೊಂಡಾಗಿದೆ SSF ಬೆಳೆದು ಬಂದದ್ದು.ನೇರ ಹಾದಿಯಲ್ಲಿ ನಿಂತು ಸತ್ಯ ಹೇಳುವಾಗ ಎಲ್ಲವನ್ನು ಸಹಿಸಬೇಕಾಗುತ್ತದೆ, ಆದರೆ ನಮ್ಮ ಸಂಘಟನೆ ಯಾವುದೇ ಸವಾಲಿಗೆ ಬಂದರು ಹಿಗ್ಗಲಿಲ್ಲ,ಬಗ್ಗಲಿಲ್ಲ,ಕುಗ್ಗಲಿಲ್ಲ. ಬಯಸಿದ್ದೆಲ್ಲವೂ ಉನ್ನತಿ ಪಡೆದದ್ದು ಕೂಡ ಸದುನ್ನತೀನೆ. ಇಂದು ಜಗತ್ತಿನಲ್ಲಿ ಎಷ್ಟು ಸಂಘಟನೆಗಳಿಲ್ಲ ಹೇಳಿ. ನಾಯಿಕೊಡೆಗಳಂತೆ ಮೇಲೇರುತ್ತಿರುವ ದಿನಕ್ಕೊಂದು ಸಂಘಟನೆಗಳು ಹತ್ತಲವು.ಆದರೆ ಅದೆಲ್ಲವೂ ಕಾಲದ ಕಡಲ ಸೆರೆಗೆ ತೇಲಿ ಹೋಗುತ್ತಿದೆ,ಅಥವಾ ಕೇವಲ ಹೆಸರಿಗೆ ಮಾತ್ರ ಸಂಘಟನೆಯಾಗಿ ನಿಲ್ಲುತ್ತಿವೆ. ಆದರೆ ಎಸ್ಎಸ್ಎಫ್ ಹಾಗಲ್ಲ ಕೇವಲ ಹೆಸರಿಗೆ ಮಾತ್ರ ಸಂಘಟನೆಯಾಗಿ ನಿಂತು ಕೊಳ್ಳದೆ ಜನ್ಮತಾಳಿದ ಅಂದಿನಿಂದ ಪವಿತ್ರ ಇಸ್ಲಾಮಿನ ನೈಜ ಆಶಯವನ್ನು ಜನಮನಕ್ಕೆ ತಲುಪಿಸಿ ಜನರನ್ನು ಸರಿದಾರಿಗೆ ಕೈ ಹಿಡಿದುಕೊಂಡು ಬಂದು ಪರಂಪರಾಗತ ಇಸ್ಲಾಮಿನ ಪತಾಕೆಯ ಕೆಳಗೆ ವಿದ್ಯಾರ್ಥಿ ಮತ್ತು ಯುವಜನತೆಯನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ"

       1978 ಎಪ್ರಿಲ್ 29 SSF ಕೇರಳ ಮಣ್ಣಿನಲ್ಲಿ ಜನ್ಮ ತಾಳಿದ ದಿನ. ಅಂದರೆ SSFನ ಸ್ಥಾಪನಾ ದಿನ. ಕರ್ನಾಟಕದ ಮಣ್ಣಲ್ಲಿ 1989 ಸೆಪ್ಟೆಂಬರ್ 19 ರಂದು SSF ರೂಪುಗೊಂಡಿತು. ಕನ್ನಡ ಮಣ್ಣಲ್ಲಿ SSFಗೆ 32 ವರ್ಷದಾಟಿದೆ. ನಾವಿರುವುದು 21ನೇ ಶತಮಾನದಲ್ಲಿ ಆಧುನಿಕ ಯುಗದಲ್ಲಿ ನೈಜ ವಿಶ್ವಾಸಿಯಾಗಿ, ನೇರ ಸುನ್ನಿಯಾಗಿ ಬದುಕು ಸಾಗಿಸುತ್ತಿದ್ದರೆ ಅದಕ್ಕಿಂತ ಮಿಗಿಲಾದ ಸೌಭಾಗ್ಯ ಬೇರಾವುದಿದೆ ಹೇಳಿ. ಸಂಘ ಬದುಕು ಎಲ್ಲಾ ರೀತಿಯಲ್ಲೂ ಅತ್ಯುತ್ತಮವಾಗಿದೆ. ವಿದ್ಯಾರ್ಥಿ ಮತ್ತು ಯುವಜನತೆಗೆ ಧಾರ್ಮಿಕತೆಯನ್ನು ನೀಡಿ ಇಸ್ಲಾಮಿನ ಪರಂಪರಾಗತ ವಿಶ್ವಾಸದಲ್ಲಿ ನೆಲೆನಿಲ್ಲಿಸಿ ಸುನ್ನೀ ಆಶಯಗಳ ಸಂರಕ್ಷಣೆಗೆ ಬೇಕಾಗಿ ಸಮರ ನಡೆಸಿದ ಕ್ರಾಂತಿಕಾರಿ ಸಂಘಟನೆಯಾಗಿದೆ SSF .

          ಮುಸ್ಲಿಮರ ಸಂಘಟನೆ ಹೇಗಿರಬೇಕೋ, ಕಾರ್ಯಕರ್ತನ ಮನೋಭಾವ ಹೇಗಿರಬೇಕೋ ಆ ರೀತಿಯಲ್ಲಿ ನಮ್ಮ ಸಂಘಟನೆ ಮುನ್ನುಗ್ಗುತ್ತಿದೆ. ಸಂಘಟನೆಯ ವೈಶಿಷ್ಟ್ಯ  ಗುರಿ ವಿಚಾರಗಳೆಲ್ಲವೂ ಭಿನ್ನವೂ ಹೌದು. ಪವಿತ್ರ ಖುರ್ ಆನ್ ಒಂದು ಕಡೆ ಕರೆ  ಕೊಟ್ಟಂತೆ ಒಳಿತಿನೆಡೆಗೆ ಆಹ್ವಾನವಿಡುವ ಕೆಡುಕಿನ ವಿರುದ್ಧ ಶಬ್ದವೆತ್ತುವ ಸಂಘಟನೆಯಾಗಿ ಅತೀ ಶೀಘ್ರದಲ್ಲಿ ಉತ್ತುಂಗ ಶಿಖರವನ್ನು SSF ಏರುತ್ತಲಿದೆ.ಅಲ್ ಹಂದುಲಿಲ್ಲ

       ಈ  ಮೂರಕ್ಷರ ರಾಷ್ಟ್ರಕ್ಕೆ, ಮುಸ್ಲಿಂ ಸಮಾಜಕ್ಕೆ ಮಾಡಿದ ಸೇವೆಯನ್ನು ಬರೆದು ಮುಗಿಸಲಸಾಧ್ಯ.ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ  ಧಾರ್ಮಿಕ ಬೋಧವನ್ನು ಕೊಟ್ಟು ಪವಿತ್ರ ಇಸ್ಲಾಮಿನ ನೈಜ ಆಶಯವನ್ನು ಮೈಗೂಡಿಸಿಕೊಂಡು,  ಅದನ್ನು ಪ್ರಚಾರ ಮಾಡುವುದರೊಂದಿಗೆ ಕಾರ್ಯಕರ್ತರು ಬದುಕುವುದನ್ನು ಕಾಣುವಾಗ ಸಂಘಟನೆಯ ಆತ್ಮೀಯ ಶಕ್ತಿಯನ್ನು ಸ್ಪಷ್ಟವಾಗಿ ಕಾಣಲು ಸಾಧ್ಯ.  ಧಾರ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಲವು ಪರಿವರ್ತನೆಗೆ ನಾಂದಿ ಹಾಡಿದ ಸಂಘಟನೆಯು ದಾರಿ ತಪ್ಪುತ್ತಿರುವ ಯುವ ಜನಾಂಗದ ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧವನ್ನು ಕೊಟ್ಟು ಒಳಿತಿನೆಡೆಗೆ ಕೈ ಹಿಡಿದು ಕೊಂಡೊಯ್ಯುತ್ತಿದೆ.

         ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿಕೊಟ್ಟ ಪರಂಪರಾಗತ ಆಶಯ  ಆದರ್ಶವನ್ನು ಅಪ್ಪಿಕೊಂಡು ಸುನ್ನಿಯಾಗಿ ಮರಣದ ತನಕ ಅಲ್ಲಾಹನ ನೂರನ್ನು ಕಲಿತುಕೊಂಡು ಒಳಿತಿನೆಡೆಗೆ ಜನತೆಯನ್ನು ಮುನ್ನುಗ್ಗಿಸುತ್ತಾ.. ಸಮಾಜಕ್ಕೆ ಒಳಿತನ್ನು ಮಾಡುತ್ತಾ.. ಸುನ್ನಿ ಆದ ನೈಜ ಕಾರ್ಯಕರ್ತರನ್ನು ಸೃಷ್ಟಿಸುತ್ತಾ.. ಇದೆಲ್ಲವನ್ನೂ ಹೆಸರಲ್ಲೇ ಸೂಚಿಸುವಂತೆ SSF ಮುನ್ನೇರುತ್ತಿದೆ. ನೈತಿಕತೆ ಮಾಯವಾದ ಸಮಾಜದಲ್ಲಿ ಶಿಸ್ತುಬದ್ಧವಾದ ತಂಡವನ್ನು SSF ಕಟ್ಟಿ ಬೆಳೆಸಿದೆ.. ಬೆಳೆಸುತ್ತಿದೆ.. ಇನ್ನೂ ಬೆಳೆಸಲಿದೆ....

       ನಮಗಿಲ್ಲಿ ವಿಶ್ರಾಂತಿಗೆ  ಸಮಯವಿಲ್ಲ ,ಸುಮ್ಮನೆ ಕೂರಲು ಮನಸ್ಸಿಲ್ಲ, ಶತ್ರುಗಳ ಆಯುಧದ ಮುಂದೆ ಎದೆ ತೋರಿಸಿದವರು ನಾವು, ವಿಶ್ವಾಸವಿಟ್ಟ ಆಶಯ ಆದರ್ಶಕ್ಕೆ ಜೀವ ಕೊಡಲು ಸಿದ್ಧರಾಗಿ ನಿಂತವರು ನಾವು, ನವ ಕಾಲದ ಸವಾಲುಗಳನ್ನು ಸ್ವೀಕರಿಸಿ, ಬರುವ ಎದುರುವಿಕೆಯನ್ನು ಮೆಟ್ಟಿಲಾಗಿಸಿ, ನಿರ್ಮಾಣ ಕ್ರಿಯೆಗಳಲ್ಲಿ ಸಕ್ರಿಯರಾಗಿ ಹೋರಾಡುವೆವು ನಾವು,ಸರ್ವಧರ್ಮಿಯರ ಶಾಂತಿಯ ತೋಟವಾದ ಭಾರತ ವನ್ನು ಗೌರವಿಸಿ ಶಾಂತಿಯ ಬೆಳಕನ್ನು ಚೆಲ್ಲುತ್ತಾ ಸುನ್ನೀ ಆಶಯಗಳ ಸಂರಕ್ಷಣೆಗೆ ಬೇಕಾಗಿ ಸಮರ ನಡೆಸುತ್ತಾ.. ಮತ್ತಷ್ಟು ಸಂಘಟನಾ ಕಾರ್ಯಾಚರಣೆಯನ್ನು ಶಕ್ತಗೊಳಿಸುವವರು ನಾವಾಗೋಣ.. ಅಲ್ಲಾಹನು ತೌಫೀಖ್ ನೀಡಲಿ... ಆಮೀನ್.

    - ಅಮೀನ್ ಕೊಳಕೆ 

(ಮುಹಿಮ್ಮಾತ್ ವಿದ್ಯಾರ್ಥಿ) ಕೋವಿಡ್ ಸುನಾಮಿ: ಆಸ್ಪತ್ರೆ, ಸ್ಮಶಾನಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಕೋವಿಡ್ ಸುನಾಮಿ: ಆಸ್ಪತ್ರೆ, ಸ್ಮಶಾನಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

 

ಕೋವಿಡ್ ಸುನಾಮಿ: ಆಸ್ಪತ್ರೆ, ಸ್ಮಶಾನಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬುಧವಾರ ಎರಡು ಲಕ್ಷದ ಗಡಿ ದಾಟಿದ್ದು, ಕಳೆದ ಒಂದು ವಾರದಿಂದ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಈ ಕೊರೋನ ವೈರಸ್ ಸುನಾಮಿಯಿಂದಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ, ವೈದ್ಯಕೀಯ ಸಲಕರಣೆಗಳ ಕೊರತೆ ವ್ಯಾಪಕವಾಗಿ ಕಾಡುತ್ತಿದ್ದು, ಆರೋಗ್ಯ ಸೇವಾ ಕ್ಷೇತ್ರ ಹಾಗೂ ಸ್ಮಶಾನಗಳ ಮೇಲೆ ಭಾರೀ ಹೊರೆ ಬಿದ್ದಿವೆ.

ಜನ ಬೀದಿಗಳಲ್ಲಿ ಸಾಯುತ್ತಿರುವ, ಹತಾಶ ಕುಟುಂಬಗಳು ಚಿಕಿತ್ಸೆ ಮತ್ತು ವೈದ್ಯಕೀಯ ಸಲಕರಣೆಗಳಿಗಾಗಿ ಆಸ್ಪತ್ರೆಗಳ ಹೊರಗೆ ಮತ್ತು ಫಾರ್ಮಸಿಗಳ ಮುಂದೆ ಹಪಹಪಿಸುತ್ತಿರುವ ಕರುಣಾಜನಕ ದೃಶ್ಯಗಳು ದೇಶದ ವಿವಿಧೆಡೆಗಳಿಂದ ವರದಿಯಾಗುತ್ತಿವೆ.

 ಭಾರತದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೇರಿದ್ದು, ಸಾವಿನ ಸಂಖ್ಯೆ ಎರಡು ಲಕ್ಷವನ್ನು ಮೀರಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ವಿಶಾಖಪಟ್ಟಣಂನ ಅತಿದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಏದುಸಿರು ಬಿಡುತ್ತಿದ್ದ ಮಗುವನ್ನು ಕೋವಿಡ್-19 ಚಿಕಿತ್ಸೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆ ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಮಗು ಆಸ್ಪತ್ರೆಯ ಹೊರಗೆಯೇ ಪ್ರಾಣ ಬಿಟ್ಟ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಪುಟ್ಟ ಬಾಲಕಿಯ ತಂದೆ ಆಮ್ಲಜನಕ ಪಂಪ್ ಮಾಡುತ್ತಿರುವ ಹಾಗೂ ತಾಯಿ ಅಸಹಾಯಕವಾಗಿ ರೋದಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "ದಯವಿಟ್ಟು ನನ್ನ ಮಗುವನ್ನು ಕಾಪಾಡಿ. ಆಸ್ಪತ್ರೆಯವರು ಆಕೆಯನ್ನು ಬೀದಿಯಲ್ಲಿ ಬೀಳಿಸಿದ್ದಾರೆ. ಇದಕ್ಕಾಗಿ ನೀವು ವೈದ್ಯರಾಗಿದ್ದೀರಾ?" ಎಂದು ತಾಯಿ ಉಮಾ (23) ರೋದಿಸುತ್ತಿದ್ದರು.

ಲಕ್ನೋದಲ್ಲಿ ರಾಜೇಂದ್ರ ಕರಣ್ ಎಂಬವರಿಗೆ ಕೋವಿಡ್-19 ಸೋಂಕಿನಿಂದಾಗಿ ಉಸಿರಾಟ ತೊಂದರೆ ತೀವ್ರವಾದಾಗ ಆ್ಯಂಬುಲೆನ್ಸ್‌ಗೆ ಕಾಯದೇ ಮಗ ಸ್ವಂತ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ, ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಯ ನೋಂದಣಿ ಚೀಟಿ ಇಲ್ಲ ಎಂಬ ಕಾರಣಕ್ಕಾಗಿ ಚಿಕಿತ್ಸೆ ನಿರಾಕರಿಸಲಾಯಿತು. ಕೊನೆಗೂ ಹರಸಾಹಸ ಮಾಡಿ ಮಗ ಅದನ್ನು ತರುವ ವೇಳೆಗೆ ಆಸ್ಪತ್ರೆಯ ಬಾಗಿಲ ಮುಂದೆಯೇ ಕಾರಿನಲ್ಲಿ ರಾಜೇಂದ್ರ ಕರಣ್ ಕೊನೆಯುಸಿರೆಳೆದರು.

ಇಂಥ ದೃಶ್ಯಗಳು ದೇಶದ ವಿವಿಧೆಡೆಗಳಿಂದ ವರದಿಯಾಗುತ್ತಿವೆ.

ಟ್ರಕ್ ಗೆ ಅಪ್ಪಳಿಸಿದ ಕಾರ್:ಭೀಕರ ಅಪಘಾತದಲ್ಲಿ ಮೂವರ ಸಾವು

ಟ್ರಕ್ ಗೆ ಅಪ್ಪಳಿಸಿದ ಕಾರ್:ಭೀಕರ ಅಪಘಾತದಲ್ಲಿ ಮೂವರ ಸಾವು


ಟ್ರಕ್ಗೆ ಅಪ್ಪಳಿಸಿದ ಕಾರ್ :ಭೀಕರ ಅಪಘಾತದಲ್ಲಿ ಮೂವರ ಸಾವು

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಕ್ರಾಸ್ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಹಿಂಬದಿಯಿಂದ ಲಾರಿ ಗುದ್ದಿ ನಿಯಂತ್ರಣ ತಪ್ಪಿದ ಕಾರ್ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಒಬ್ಬರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಶಾಂತಮ್ಮ, ಲಕ್ಷ್ಮಿ, ದುಂಡವ್ವ ಉಳ್ಳಾಗಡ್ಡಿ ಮೃತಪಟ್ಟವರು ಎಂದು ಹೇಳಲಾಗಿದೆ. ಕಾರು ಚಾಲಕ ಮತ್ತು ಸುನಂದಾ ಬಾಗೋಡಿ ಅಪಾಯದಿಂದ ಪಾರಾಗಿದ್ದಾರೆ. ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


 ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕಾ ಬೋಟ್ ಪತ್ತೆ: 11 ಮೀನುಗಾರರ ರಕ್ಷಣೆ

ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕಾ ಬೋಟ್ ಪತ್ತೆ: 11 ಮೀನುಗಾರರ ರಕ್ಷಣೆ


ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕಾ ಬೋಟ್ ಪತ್ತೆ: 11 ಮೀನುಗಾರರ ರಕ್ಷಣೆ

ಹೊಸದಿಲ್ಲಿ: ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ ಎ.6ರಂದು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ‘ಮರ್ಸಿಡಿಸ್’ ಎಂಬ ಮೀನುಗಾರಿಕಾ ಬೋಟ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

‘ಮರ್ಸಿಡಿಸ್’ ಆಳ ಸಮುದ್ರದ ಮೀನುಗಾರಿಕೆಗಾಗಿ 11 ಸಿಬ್ಬಂದಿಯೊಂದಿಗೆ ಎ.6ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ ಪ್ರಯಾಣ ಬೆಳೆಸಿತ್ತು. ಕೇರಳದ ಪಶ್ಚಿಮಕ್ಕೆ 30 ದಿನಗಳ ಪ್ರಯಾಣಕ್ಕಾಗಿ ಹೊರಟಿದ್ದ ಈ ಬೋಟ್ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು. ಈ ನಡುವೆ ಮರ್ಸಿಡಿಸ್‌ನ್ನೇ ಹೋಲುವ ಬೋಟ್‌ನ ಅವಶೇಷಗಳು ಬಂಗಾಳ ಕೊಲ್ಲಿಯಲ್ಲಿ, ಗೋವಾ ಕರಾವಳಿಯಿಂದ 110 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮರ್ಸಿಡಿಸ್ ಮುಳುಗಿ ಅದರಲ್ಲಿದ್ದ ಎಲ್ಲ ಮೀನುಗಾರರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿತ್ತು.

ಈ ನಡುವೆ ಕರಾವಳಿ ರಕ್ಷಣಾ ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಸಾಗರದಲ್ಲಿ ಸತತ ಶೋಧ ನಡೆಸಿತ್ತು. ಇದೀಗ ಮರ್ಸಿಡಿಸ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ.

ಹಡಗಿನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ. ಅವರನ್ನ ದಡಕ್ಕೆ ತರಲಾಗುತ್ತಿದೆ. ಮೇ 3ರಂದು ಮರ್ಸಿಡಿಸ್’ ಸುರಕ್ಷಿತವಾಗಿ ತೀರಕ್ಕೆ ತಲುಪಬಹುದು ಎಂದು ಐಸಿಜಿ ಪ್ರಕಟನೆಯಲ್ಲಿ ತಿಳಿಸಿದೆ.


 


 ಬೆಂಗಳೂರು: ಒಂದೇ ದಿನ 31 ಮಂದಿ ಪೊಲೀಸರಲ್ಲಿ ಕೊರೊನಾ ಸೋಂಕು

ಬೆಂಗಳೂರು: ಒಂದೇ ದಿನ 31 ಮಂದಿ ಪೊಲೀಸರಲ್ಲಿ ಕೊರೊನಾ ಸೋಂಕು


ಬೆಂಗಳೂರು: ಒಂದೇ ದಿನ 31 ಮಂದಿ ಪೊಲೀಸರಲ್ಲಿ ಕೊರೊನಾ ಸೋಂಕು

ಬೆಂಗಳೂರು : ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ನಗರದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೇರಿ ಒಂದೇ ದಿನ 31 ಮಂದಿ ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಇನ್ನು ಈವರೆಗೆ ಒಟ್ಟು 688 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 112 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 541 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿ ನಿನ್ನೆ ಒಂದೇ ದಿನ 39047 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 229 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


 ಉ.ಪ್ರದೇಶ:135 ಪಂಚಾಯತ್ ಚುನಾವಣೆ ಅಧಿಕಾರಿಗಳು ಕೊರೋನ ಸೋಂಕಿನಿಂದ ಮೃತ್ಯು

ಉ.ಪ್ರದೇಶ:135 ಪಂಚಾಯತ್ ಚುನಾವಣೆ ಅಧಿಕಾರಿಗಳು ಕೊರೋನ ಸೋಂಕಿನಿಂದ ಮೃತ್ಯು


ಉ.ಪ್ರದೇಶ:135 ಪಂಚಾಯತ್ ಚುನಾವಣೆ ಅಧಿಕಾರಿಗಳು ಕೊರೋನ ಸೋಂಕಿನಿಂದ ಮೃತ್ಯು

ಲಕ್ನೊ: ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆ ಸಂದರ್ಭ ಕರ್ತವ್ಯ ನಿರ್ವಹಿಸಿದ್ದ 135 ಮತಗಟ್ಟೆ ಅಧಿಕಾರಿಗಳು ಕೊರೋನ ಸೋಂಕಿನಿಂದ ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿರುವ ಅಲಹಾಬಾದ್ ಹೈಕೋರ್ಟ್, ಚುನಾವಣೆಯ ಸಂದರ್ಭ ಕೊರೋನ ಮಾರ್ಗದರ್ಶಿ ಸೂತ್ರದ ಪಾಲನೆಯಾಗದಿರುವುದನ್ನು ಯಾಕೆ ಗಮನಿಸಿಲ್ಲ ಎಂದು ಪ್ರಶ್ನಿಸಿದೆ.

ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಮತಗಟ್ಟೆ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದ 135 ಶಿಕ್ಷಕರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಹಿಂದಿ ದೈನಿಕ ‘ಅಮರ್ ಉಜಾಲ’ದಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿ ಅಲಹಾಬಾದ್ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಅಂತಿಮ ಹಂತದ ಮತದಾನದ ಸಂದರ್ಭ ಕೊರೋನ ಮಾರ್ಗದರ್ಶಿ ಸೂತ್ರ ಮತ್ತು ಶಿಷ್ಟಾಚಾರ ಪಾಲನೆಯಾಗಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ವಿಫಲವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಮಾರಣಾಂತಿಕ ಸೋಂಕಿನ ದವಡೆಯಿಂದ ಪಾರುಮಾಡಲು ಪೊಲೀಸರಾಗಲೀ ಅಥವಾ ಚುನಾವಣಾ ಆಯೋಗವಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಣುತ್ತದೆ. ಕಳೆದ ವರ್ಷಾಂತ್ಯ ಕೊರೋನ ಸೋಂಕು ಪ್ರಕರಣ ಇಳಿಕೆಯಾಗಿರುವುದರಿಂದ ರಾಜ್ಯ ಸರಕಾರವೂ ನಿರ್ಲಕ್ಷ್ಯ ವಹಿಸಿರುವುದನ್ನು ಗಮನಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿದೆ. ಆಮ್ಲಜನಕದ ಸಿಲಿಂಡರ್ ತಂದರೆ ಮಾತ್ರ ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ಖಾಸಗಿ ಆಸ್ಪತ್ರೆಯವರು ಸೂಚಿಸುತ್ತಿದ್ದಾರೆ ಎಂಬ ವರದಿಯ ಬಗ್ಗೆ ವಕೀಲರೊಬ್ಬರು ಹೈಕೋರ್ಟ್ ನ ಗಮನ ಸೆಳೆದರು. ಆಮ್ಲಜನಕದ ಕೊರತೆಯಿಂದಾಗಿ ಯಾರೊಬ್ಬರೂ ಸಾವನ್ನಪ್ಪದಂತೆ ಖಚಿತಪಡಿಸಬೇಕು. ಸ್ವಾತಂತ್ರ್ಯ ದೊರೆತ 7 ದಶಕದ ಬಳಿಕವೂ, ದೇಶದಲ್ಲಿ ಇಷ್ಟೊಂದು ಬೃಹತ್ ಕೈಗಾರಿಕೆ ಕಾರ್ಯಾರಂಭ ಮಾಡಿದ್ದರೂ ಜನರಿಗೆ ಆಮ್ಲಜನಕ ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂಬುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಉತ್ತರಪ್ರದೇಶಕ್ಕೆ ಹಂಚಿಕೆಯಾಗಿರುವ ದ್ರವ ಆಮ್ಲಜನಕದ ಪ್ರಮಾಣದ ಬಗ್ಗೆ ರಾಜ್ಯ ಸರಕಾರದ ವಕೀಲರು ಮಾಹಿತಿ ನೀಡಿದರಲ್ಲದೆ, ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲು ಬದ್ಧ ಎಂದು ಹೇಳಿದರು. ಕೈಗಾರಿಕೆಗಳಿಗೆ ಪೂರೈಕೆಯಾಗುವ ಆಮ್ಲಜನಕವನ್ನು ಆಸ್ಪತ್ರೆಗೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿತು. ರಾಜ್ಯದಲ್ಲಿ ಕೊರೋನ ಸೋಂಕು ಸಮಸ್ಯೆ ಇದೇ ರೀತಿ ಮುಂದುವರಿದರೆ 2 ವಾರದ ಲಾಕ್ಡೌನ್ ಘೋಷಿಸುವಂತೆ ಹೈಕೋರ್ಟ್ ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ಸಲಹೆ ನೀಡಿತು. ಅಲ್ಲದೆ ಅತೀ ಹೆಚ್ಚು ಸೋಂಕು ಬಾಧಿತ 9 ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಿ, ಅಧಿಕಾರಿಗಳು ಎಲ್ಲಾ ದಿಕ್ಕಿನಿಂದ ಬರುವ ಸಲಹೆಗಳಿಗೆ ಕಿವಿಗೊಡಬೇಕು ಎಂದು ಸಲಹೆ ನೀಡಿತು.


 


 ಅಕ್ಕಿ ಕೇಳಿದವನಿಗೆ `ಸಾಯೋರ್ ಸಾಯ್ಲಿ' ಎಂದ ಆಹಾರ ಸಚಿವ ಕತ್ತಿ!

ಅಕ್ಕಿ ಕೇಳಿದವನಿಗೆ `ಸಾಯೋರ್ ಸಾಯ್ಲಿ' ಎಂದ ಆಹಾರ ಸಚಿವ ಕತ್ತಿ!


ಅಕ್ಕಿ ಕೇಳಿದವನಿಗೆ `ಸಾಯೋರ್ ಸಾಯ್ಲಿ' ಎಂದ ಆಹಾರ ಸಚಿವ ಕತ್ತಿ!

ಬೆಳಗಾವಿ : ಸರ್ಕಾರದಿಂದ ಕೊಡುತ್ತಿದ್ದಂತ ರೇಷನ್ ಅಕ್ಕಿ ಕಡಿತ ಮಾಡೋದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ.. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದಿರೋ ಉಡಾಫೆಯ ಉತ್ತರ, ಈಗ ವೈರಲ್ ಆಗಿದೆ.

ಇಂತಹ ಸಚಿವ ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯ ಹಾಗೂ ಸಚಿವ ಉಮೇಶ್ ಕತ್ತಿ ಮಾತನಾಡಿರುವಂತ ಸಂಭಾಷಣೆ ಎಂದು ಹೇಳಲಾಗುತ್ತಿದೆ.

ಸಚಿವ ಉಮೇಶ್ ಕತ್ತಿಗೆ ಪೋನ್ ಮಾಡಿದಂತ ಈಶ್ವರ್ ಆರ್ಯ ಅವರು, 2 ಕೆಜಿ ಅಕ್ಕಿ ಮಾಡಿದ್ದೀರಾ ಸಾಲುತ್ತಾ ಎಂಬುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕತ್ತಿ 3 ಕೆಜಿ ರಾಗಿ ಮಾಡಿತ್ತೀವಿ ಎಂದಿದ್ದಾರೆ. ಉತ್ತರ ಕರ್ನಾಟಕದ ಜನ ರಾಗಿ ತಿನ್ನಾತ್ತಾರಾ ಎಂದು ಮರು ಪ್ರಶ್ನಿಸಿದ್ದಕ್ಕೆ, 2 ಕೆಜಿ ಜೋಳ ಮಾಡಿದ್ದೀವಿ ಎಂದಿದ್ದಾರೆ. ಸಾರ್ ತಿಂಗಳಿಗೆ 2 ಕೆಜಿ ಸಾಲುತ್ತಾ ಅಂದ್ರೆ, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ ಅಂತ ಸಚಿವರು ಹೇಳಿದ್ದಾರೆ.

ಆಯ್ತು ಸಾರ್.. ಅಕ್ಕಿ, ಜೋಳ ಯಾವಾಗ ಕೊಡ್ತೀರಿ ಅಂದ ಈಶ್ವರ್ ಅವರ ಮಾತಿಗೆ, ಬರುವ ತಿಂಗಳ ಮೇ ನಲ್ಲಿ ನೀಡುತ್ತೇವೆ ಅಂತ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಾರ್ ಬರುವ ತಿಂಗಳು ಕೊಡ್ತೀರಾ.. ಅಲ್ಲಿಯವರೆಗೆ ಉಪವಾಸ ಇರುದಾ ಅಥವಾ ಸತ್ತು ಹೋಗುದಾ ಅಂದಾಗ, ಸಚಿವ ಉಮೇಶ್ ಕತ್ತಿ ಸತ್ತು ಹೋಗೋದು ಒಳ್ಳೆದು, ಅದಕ್ಕಿಂತ ಪೋನ್ ಮಾಡುವುದು ಬಿಡಿ ಎಂದಿದ್ದಾರೆ. ಆದ್ರೇ ಸಾರ್ ನೀವು ಮಂತ್ರಿಗಳು, ಜನಕ್ಕೆ ಉತ್ತರಿಸಬೇಕಾದವರು ನೀವು ಹೀಗ್ ಅಂದ್ರೆ ಅಂದಿದ್ದಕ್ಕೆ ಸಚಿವರು ಪೋನ್ ಕಟ್ ಮಾಡಿದ್ದಾರೆ. ಈ ಮೂಲಕ ಅಕ್ಕಿ ಕೊಡದೇ ಇದ್ದರೇ ಸತ್ತೋಗಿ ಎಂಬುದಾಗಿ ರಾಜ್ಯದ ಜನರಿಗೆ ದರ್ಪದಿಂದ ನುಡಿದಿರೋದು, ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.


 ವಿಶಾಖಪಟ್ಟಣ :ಚಿಕಿತ್ಸೆಗಾಗಿ ಕಾದು ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ಮಗು

ವಿಶಾಖಪಟ್ಟಣ :ಚಿಕಿತ್ಸೆಗಾಗಿ ಕಾದು ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ಮಗು


 ವಿಶಾಖಪಟ್ಟಣ :ಚಿಕಿತ್ಸೆಗಾಗಿ ಕಾದು ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ಮಗು

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಲು ಬಹಳಷ್ಟು ಸಮಯ ಕಾದಿದ್ದ ಶಿಶುವೊಂದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.

ಶಿಶು ಕೋವಿಡ್-19ನಿಂದ ಬಳಲುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿತ್ತು. ಮಗುವಿಗೆ ಚಿಕಿತ್ಸೆ ನೀಡುವಂತೆ  ಪೋಷಕರು ಸುಮಾರು ಒಂದು ಗಂಟೆಕಾಲ ಬೇಡಿಕೊಂಡರು. ಅಂತಿಮವಾಗಿ ಮಗುವನ್ನು ಚಿಕಿತ್ಸೆಗಾಗಿ ಸೇರಿಸಿಕೊಳ್ಳಲಾಗಿತ್ತು. ತೀರಾ ವಿಳಂಬವಾಗಿದ್ದ ಕಾರಣ ಮಗು ಮೃತಪಟ್ಟಿದೆ.

ಮಗು ಮೃತಪಟ್ಟ ಬಳಿಕ ಕೋಪಗೊಂಡ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಸಿಬ್ಬಂದಿಯೊಬ್ಬರು ಜಗಳವಾಡಿದರು.

ವಿಶಾಖಪಟ್ಟಣದ ಅತಿ ದೊಡ್ಡ ಕಿಂಗ್ ಜಾರ್ಜ್ ಆಸ್ಪತ್ರೆಯ ಹೊರಗೆ ಒಂದೂವರೆ ವರ್ಷದ ಹೆಣ್ಣುಮಗು ಸರಿತಾ ಆ್ಯಂಬುಲೆನ್ಸ್ ನಲ್ಲಿ ಉಸಿರಾಡಲು ಕಷ್ಟಪಡುತ್ತಿತ್ತು. ಮಗುವಿನ ಪೋಷಕರು ಚಿಕಿತ್ಸೆಗಾಗಿ ಕಾದು ಕಾದು ಸುಸ್ತಾಗಿದ್ದರು.

ವೀಡಿಯೊದಲ್ಲಿ ಬಾಲಕಿಯ ತಂದೆ ವೀರಾ ಬಾಬು ಅವರು ಆಂಬುಬ್ಯಾಗ್ ಬಳಸಿ ಮಗುವಿಗೆ ಆಮ್ಲಜನಕ ಪಂಪ್ ಮಾಡುತ್ತಿರುವುದು, ಬಾಲಕಿಯ ತಾಯಿ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವುದು ಕಂಡುಬಂದಿದೆ.

“ದಯವಿಟ್ಟು ನನ್ನ ಮಗುವನ್ನು ಉಳಿಸಿ, ಯಾರಾದರೂ ದಯವಿಟ್ಟು ನನ್ನ ಮಗುವನ್ನು ಉಳಿಸಿ. ಅವರು ರಸ್ತೆಯಲ್ಲಿಯೇ ಬಿಟ್ಟು ಹೋದರು. ಇದಕ್ಕಾಗಿ ಅವರು ವೈದ್ಯರಾಗಿದ್ದೀರಾ?ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದೆ. ಆದರೆ ಅವರು ರಸ್ತೆಯಲ್ಲಿಯೇ ಬಿಟ್ಟುಹೋದರು. ಅವರು 104 ಸಂಖ್ಯೆಗೆ ಫೋನ್ ಕರೆ ಮಾಡಲು ಹೇಳಿದರು. ಅಲ್ಲಿ ಯಾರೂ ಉತ್ತರಿಸುವವರು ಇರಲಿಲ’’್ಲ ಎಂದು ಮಗುವಿನ ತಾಯಿ ಕಣ್ಣೀರಿಟ್ಟಿರು.

ಮಗುವಿನ ತಾಯಿಯ ಹತಾಶೆಯು ಭಾರತದ ಕೋವಿಡ್ ಸ್ಫೋಟದಿಂದಾಗಿರುವ ಅಪಾರ ಮಾನವ ದುರಂತವನ್ನು ಪ್ರತಿಬಿಂಬಿಸಿದೆ. ಕೊರೋನ ಎರಡನೇ ಅಲೆಯಿಂದಾಗಿ ದೇಶಾದ್ಯಂತ ಆಸ್ಪತ್ರೆಗಳು ಹಾಗೂ ಸೌಲಭ್ಯಗಳಲ್ಲಿ ಕೊರತೆ ಕಾಡುತ್ತಿದೆ.

ನಿನ್ನೆ ಮಗುವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಬಾಲಕಿ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆಗಾಗಿ ಬಾಲಕಿಯ ಹೆತ್ತವರು 90 ನಿಮಿಷ ಕಾದಿದ್ದರು. ಆದರೆ ಮಗು ಆಸ್ಪತ್ರೆಯ ಬಾಗಿಲಲ್ಲಿ ಪ್ರಾಣಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

 ಬದ್‌ರ್ ಮೌಲಿದ್ : ಇತಿಹಾಸ ಮತ್ತು ಪ್ರಭಾವ

ಬದ್‌ರ್ ಮೌಲಿದ್ : ಇತಿಹಾಸ ಮತ್ತು ಪ್ರಭಾವ

 

ಬದ್‌ರ್ ಮೌಲಿದ್ : ಇತಿಹಾಸ ಮತ್ತು ಪ್ರಭಾವ

   ಇಸ್ಲಾಮಿನ ಇತಿಹಾಸದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದ ಯುದ್ಧವಾಗಿದೆ ಬದ್ರ್ ಯುದ್ಧ . 313 ರಷ್ಟು ಬರುವ ಮುಸ್ಲಿಂ ಸೈನ್ಯವು ಸಾವಿರದಷ್ಟು ಬರುವ ಅವಿಶ್ವಾಸಿಗಳ ಸೈನ್ಯದ ವಿರುದ್ಧ ವಿಜಯ ಪತಾಕೆಯನ್ನು ಹಾರಿಸಿದ ಯುದ್ಧವದು. ಈ ಯುದ್ಧದ ನಂತರ ಮುಸ್ಲಿಮರು ಇನ್ನಷ್ಟು ಬಲಶಾಲಿಗಳಾದರು. ಯುದ್ಧದ ಮೂಲಕ ಮುಸ್ಲಿಮರ ಶಕ್ತಿ ಏನೆಂದು ಅವಿಶ್ವಾಸಿಗಳು ತಿಳಿದರು. ಪ್ರವಾದಿ(ಸ ಅ) ರವರ ನಾಯಕತ್ವದಲ್ಲಿ ಮುನ್ನಡೆದ ಮುಸ್ಲಿಂ ಸೈನ್ಯವು ಅಲ್ಲಾಹನ ಸಹಾಯದೊಂದಿಗೆ ಅವಿಶ್ವಾಸಿ ಗಳನ್ನು ರಣರಂಗ ಬಿಡುವಂತೆ ಮಾಡಿತು.

ಈ ಇತಿಹಾಸ ಪ್ರಸಿದ್ಧ ಚರಿತ್ರೆಯನ್ನು ಇಂದಿಗೂ ಕೂಡ ಯಾರಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಾಹನ ಮಾರ್ಗದಲ್ಲಿ  ರಕ್ತ ಸಾಕ್ಷಿಗಳು ಅಲ್ಲಾಹನ ಬಳಿ ಎಂದಿಗೂ ಅಮರರಾಗಿದ್ದಾರೆ ಎಂಬ ಅಲ್ಲಾಹನ ಪವಿತ್ರ ಮಾತನ್ನು ಹೃದಯದಲ್ಲಿ ಇಟ್ಟುಕೊಂಡು ರಚಿಸಿದ ಮೌಲಿದಾಗಿದೆ ಬದ್ರ್ ಮೌಲಿದ್ . ಇದನ್ನು ರಚಿಸಿದ್ದು ಇಂದಿನ ಉಲಮಾಗಳ 5 ನೇ ತಲೆಮಾರುವಿನ ವಿದ್ವಾಂಸರಾದ ಅಬ್ದುಲ್ ಆಝೀಝ್ ಮುಸ್ಲಿಯಾರ್ (ಖ ಸಿ) ಪೋನ್ನಾನಿ  ರವರಾಗಿದ್ದಾರೆ. ಈ ಮೌಲಿದ್ ಬದ್ರ್ ಹುತಾತ್ಮರ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

      ಹೌದು, ಇಸ್ಲಾಮಿನ ಚರಿತ್ರೆಯಲ್ಲಿ ಅಲ್ಲಾಹನು ಶತ್ರುಗಳೊಂದಿಗೆ ಹೋರಾಡಲು  ಅನುಮತಿ ಕೊಟ್ಟ ಮೊದಲ ಯುದ್ಧವಾಗಿದೆ ಬದ್ರ್ . ಯುದ್ಧದಲ್ಲಿ 14 ಮಂದಿ ಸ್ವಹಾಬಿಗಳು ರಕ್ತ ಸಾಕ್ಷಿಯಾಗುತ್ತಾರೆ. ಈ ಯುದ್ಧದಲ್ಲಿ ಪಾಲ್ಗೊಂಡವರಿಗೆ ಅಲ್ಲಾಹನು ಪ್ರತ್ಯೇಕವಾದ ಸ್ಥಾನವನ್ನು ಕೊಟ್ಟಿದ್ದಾನೆ. ಇವರನ್ನು ಜಗತ್ತು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಕಾರಣ ಇವರ ತ್ಯಾಗವು ಇಸ್ಲಾಮಿನ ರಕ್ಷಣೆಗೆ ಕಾರಣವಾಗಿತ್ತು. ಇವರ ತ್ಯಾಗವನ್ನು ಮತ್ತು ಅವರ ಮಹತ್ವವನ್ನು ತಿಳಿಸಿ ಕೊಡುವ  ಮೌಲಿ ದಾಗಿದೆ ಬದ್ರ್ ಮೌಲಿದ್.

ಒಂದು ದಿನ ಪ್ರವಾದಿವರ್ಯರು ಒಂದು ಮನೆಗೆ ಧಾವಿಸಿ ಬರುತ್ತಾರೆ ಆ ಸಮಯದಲ್ಲಿ ಆ ಮನೆಯವರು ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರ ಮದ್ಹನ್ನು ಹಾಡುತ್ತಿರುತ್ತಾರೆ. ಪ್ರವಾದಿವರ್ಯ ರು ಬರುವುದನ್ನು ಕಂಡ ಅವರು ಪ್ರವಾದಿ ಪ್ರಕೀರ್ತನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಆ ಸಂದರ್ಭದಲ್ಲಿ ಅವರು ನೀವು ಮೊದಲು ಹಾಡಿದ್ದನ್ನು ಆಡಿರಿ ಎಂದು ಹೇಳುತ್ತಾ ಬದ್ರ್ ಹುತಾತ್ಮರ  ಮಹತ್ವವನ್ನು ತಿಳಿಸಿ ಕೊಡುತ್ತಾರೆ ಎಂದು ಸ್ವಹೀಹುಲ್ ಬುಖಾರಿಯಲ್ಲಿ ಉಲ್ಲೇಖಿಸಲಾಗಿದೆ.

ಬದ್ರ್ ಸಾಕ್ಷಿಗಳ ಮಹತ್ವ ಹೇಳುವುದಾದರೆ...

ಒಬ್ಬರು ಹಜ್ಜ್ ಯಾತ್ರೆಯನ್ನು ಉದ್ದೇಶವಿಟ್ಟು ಮನೆಯಿಂದಿಲಿಯುತ್ತಾರೆ. ಹೊರಡುವ ಮುನ್ನ ಮನೆಯಲ್ಲಿರುವ ವಸ್ತುಗಳ ಸಂರಕ್ಷಣೆಗಾಗಿ ಅಸ್ಮಾವುಲ್ ಬದ್ರ್ ನಾಮವನ್ನು ಬರೆದಿಟ್ಟಾಗಿದೆ ಹೊರಡೋದು. ಅಂದಿನ ರಾತ್ರಿ ಒಬ್ಬ ಕಳ್ಳ ಕದಿಯಲು ಯಾರೂ ಇಲ್ಲದ  ಈ ಮನೆಗೆ ಬರುತ್ತಾನೆ ಆ ಸಂದರ್ಭದಲ್ಲಿ ಅವನು ಆ ಮನೆಯಿಂದ ತುಂಬಾ ಜನರು ಮಾತನಾಡುವ ಶಬ್ದವನ್ನು ಕೇಳುತ್ತಾನೆ ಹೀಗೆ ಎರಡನೇ ಮತ್ತು ಮೂರನೇ ದಿವಸ ಬಂದಾಗಲೂ ಕೂಡ ಅದೇ ಶಬ್ದವನ್ನು ಕೇಳುತ್ತಾನೆ. ಹಾಗೆ ಹಜ್ಜ್ ಗೆ ಹೋದ ವ್ಯಕ್ತಿ ಬಂದಾಗ  ಕಳ್ಳನುನೀವು ನಿಮ್ಮ ಮನೆಯಲ್ಲಿ ಯಾರನ್ನು ನೇಮಿಸಿ ಹೋಗಿದ್ದೀರಿ ಎಂದು ಕೇಳುತ್ತಾನೆ: ಅವಾಗ ಅವನು ನಾನು ನನ್ನ ಮನೆಯಲ್ಲಿ ಆಸ್ಮಾವುಲ್ ಬದ್ರ್ ನ್ನು ಬರೆದಿಟ್ಟು ಹೋಗಿದ್ದೇನೆ ಅವರು ನನ್ನ ಮನೆಗೆ ಕಾವಲು ನಿಂತಿದ್ದಾರೆ ಎಂದು ಹೇಳುತ್ತಾನೆ  ಈ ಮಾತನ್ನು ಕೇಳಿದ ಕಳ್ಳ ನಿಬ್ಬೆರಗಾಗುತ್ತಾನೆ.

ಹೀಗೆಯೇ ಬದ ರ್ ಮೌಲಿದ್ ಕೂಡ ಹಲವಾರು ಸಂಕಷ್ಟಗಳನ್ನು ನೆರವೇರಿಸುತ್ತದೆ . ಬದ್ರ್ ಪಾಲ್ಗೊಂಡವರ ಕಾವಲು ಓದಿದವರ ಮನೆಯಲ್ಲಿ  ಇರುತ್ತದೆ. ಆದರೆ ಒಂದು ವಿಭಾಗವು ಇದನ್ನು ಶಿರ್ ಕೆಂದು ಹೇಳುತ್ತಾ ರಂಗ ಪ್ರವೇಶಿಸಿದೆ. ಅವರ ಪೊಳ್ಳುವಾದ ಗಳನ್ನು ನಮ್ಮ ಉಲಮಾಗಳು ಪುರಾವೆಗಳ ಮೂಲಕ ಬೀದಿಗೆ ಎಸೆದಿದ್ದಾರೆ. ಆದರೆ ಜನಸಾಮಾನ್ಯರು ಅವರ ಪೊಳ್ಳು ವಾದಗಳಿಗೆ ಕಿವಿಗೊಟ್ಟು ಸುನ್ನತ್ ಜಮಾ ಅತಿನ ಆಶಯದಿಂದ ಹಿಂದೆ ಸರಿಯುತ್ತಿದ್ದಾರೆ ಆದ್ದರಿಂದ ಈ ಸಮಯದಲ್ಲಿ ಧರ್ಮಬೋಧಕರಾದ ನಾವು ಬದ್ರ್ ಸ್ವಹಾಬಿಗಳ ಪ್ರಾಮುಖ್ಯತೆಯನ್ನು  ಭಾಷಣ, ಪ್ರಬಂಧ, ಬರಹಗಳ ಮೂಲಕ ಜನರಿಗೆ ತಿಳಿಸಿಕೊಡಬೇಕಾಗಿದೆ  ಅಲ್ಲಾಹನು ತೌಫೀಕ್ ನೀಡಿ ಅನುಗ್ರಹಿಸಲಿ ....ಆಮೀನ್

 ನೌಶಾದ್ ಹಸನ್ ನಗರ
(ಮುಹಿಮ್ಮಾತ್ ವಿದ್ಯಾರ್ಥಿ)

 ನಾಳೆ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಗೋವಾದಲ್ಲಿ ಲಾಕ್ಡೌನ್

ನಾಳೆ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಗೋವಾದಲ್ಲಿ ಲಾಕ್ಡೌನ್


 ನಾಳೆ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಗೋವಾದಲ್ಲಿ ಲಾಕ್ಡೌನ್

ಪಣಜಿ:ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಲಾಕ್ ಡೌನ್ ವಿಧಿಸುವುದಾಗಿ ಘೋಷಿಸಿದರು. 'ಜನರು ಭಯಪಡಬಾರದು. ಎಲ್ಲಾ ಕಿರಾಣಿ ಅಂಗಡಿಗಳು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಅವಕಾಶ ನೀಡಲಾಗುವುದು, ವಲಸೆ ಕಾರ್ಮಿಕರನ್ನು ರಾಜ್ಯವನ್ನು ತೊರೆಯದಂತೆ ನಾನು ಒತ್ತಾಯಿಸುತ್ತೇನೆ 'ಎಂದು ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾವಂತ್ ಹೇಳಿದರು.

'ಮುಂದಿನ ನಾಲ್ಕು ದಿನಗಳವರೆಗೆ ಜನರು ಹೆಜ್ಜೆ ಹಾಕದಿದ್ದರೆ ನಾವು ಈ ಉಲ್ಬಣದ ಸರಪಳಿಯನ್ನು ಮುರಿಯುವಲ್ಲಿ ಯಶಸ್ವಿಯಾಗುತ್ತೇವೆ' ಎಂದು ಸಾವಂತ್ ಹೇಳಿದರು.ಲಾಕ್‌ಡೌನ್ ಅವಧಿಯಲ್ಲಿ ಕ್ಯಾಸಿನೊಗಳು ಮತ್ತು ಬಾರ್‌ಗಳು ಮುಚ್ಚಲ್ಪಡುತ್ತವೆ, ಆದರೆ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿಸಲಾಗುತ್ತದೆ.

ಡೈನ್-ಇನ್ಗಳನ್ನು ಅನುಮತಿಸಲಾಗುವುದಿಲ್ಲ. ರಾಜ್ಯದ ಪ್ರವೇಶ ಕೇಂದ್ರಗಳಲ್ಲಿ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.ಈಗಾಗಲೇ ರಾಜ್ಯದಲ್ಲಿರುವ ಪ್ರವಾಸಿಗರು ತಮ್ಮ ಹೋಟೆಲ್ ಕೋಣೆಗಳಿಂದ ಹೊರಬರಲು ಅನುಮತಿಸುವುದಿಲ್ಲ ಮತ್ತು ಲಾಕ್ ಡೌನ್ ಅವಧಿಯಲ್ಲಿ ಅವರ ನಿವಾಸದಲ್ಲಿ ಇರಬೇಕಾಗುತ್ತದೆ.

ಹಲವಾರು ಪ್ರದೇಶಗಳನ್ನು ಧಾರಕ ವಲಯವೆಂದು ಘೋಷಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಸಾವಂತ್, ಇಂದು ಮುಂಚೆಯೇ, ಪಂಚಾಯತ್ ಸದಸ್ಯರೊಂದಿಗೆ ಉತ್ತರ ಕರಾವಳಿ ಪ್ರದೇಶದ ಕ್ಯಾಲಂಗುಟ್ ಮತ್ತು ಕ್ಯಾಂಡೋಲಿಮ್ ಸೇರಿದಂತೆ ಸಭೆ ನಡೆಸಿದರು, ಇವುಗಳನ್ನು ನಿಯಂತ್ರಣ ವಲಯವೆಂದು ಘೋಷಿಸಲಾಗಿದೆ.

ಆರ್‌ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶಗಳಿಗಾಗಿ ಈಗ 24 ಗಂಟೆಗಳಿರುತ್ತದೆ ಎಂದು ರಾಜ್ಯವು ತನ್ನ ಪರೀಕ್ಷಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ ಎಂದು ಸಾವಂತ್ ಹೇಳಿದರು. ರೋಗಲಕ್ಷಣಗಳನ್ನು ತೋರಿಸುವವರು ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು ಮತ್ತು ಅವರ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಬಾರದು ಎಂದು ಮುಖ್ಯಮಂತ್ರಿ ಒತ್ತಾಯಿಸಿದರು. ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಆಮ್ಲಜನಕದ ಕೊರತೆಯಿಲ್ಲ ಮತ್ತು ಅಗತ್ಯವನ್ನು ಪೂರೈಸಲಾಗುತ್ತಿದೆ ಎಂದು ಸಾವಂತ್ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಹ ಕೋವಿಡ್ -19 ರೋಗಿಗಳ ಗಮನಾರ್ಹ ವೆಚ್ಚವನ್ನು ದೀನ್ ದಯಾಳ್ ಸ್ವಾಸ್ಥ್ಯ ಸೇವಾ (ಡಿಡಿಎಸ್‌ಎಸ್‌ವೈ) ವಿಮಾ ಯೋಜನೆಯಡಿ ಸರಕಾರದ ವ್ಯಾಪ್ತಿಗೆ ತರಲಾಗುವುದು ಎಂದು ಸಾವಂತ್ ಘೋಷಿಸಿದರು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು.

 ಕೋವಿಡ್ ಹೆಚ್ಚಳಕ್ಕೆ ಸುದ್ದಿ ಮಾಧ್ಯಮವನ್ನೂ ಹೊಣೆ ಮಾಡಿದ ಸಂಸದ ಪ್ರತಾಪ್ ಸಿಂಹ!

ಕೋವಿಡ್ ಹೆಚ್ಚಳಕ್ಕೆ ಸುದ್ದಿ ಮಾಧ್ಯಮವನ್ನೂ ಹೊಣೆ ಮಾಡಿದ ಸಂಸದ ಪ್ರತಾಪ್ ಸಿಂಹ!

 

ಕೋವಿಡ್ ಹೆಚ್ಚಳಕ್ಕೆ ಸುದ್ದಿ ಮಾಧ್ಯಮವನ್ನೂ ಹೊಣೆ ಮಾಡಿದ ಸಂಸದ ಪ್ರತಾಪ್ ಸಿಂಹ!

ಮೈಸೂರು: ಕೊರೋನ ವಿಚಾರವನ್ನು ಸುದ್ದಿ ಮಾಧ್ಯಮದವರೂ ಮರೆತರು,  ಜನಪ್ರತಿನಿಧಿಗಳು ವಿಳಂಬ ಮಾಡಿದರು. ಇದು ಈ ಸೋಂಕು ಹೆಚ್ಚಲು ಕಾರಣವಾಯಿತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

 ನಗರದ ತುಳಸಿದಾಸ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ 100 ಆಕ್ಸಿಜನ್ ಬೆಡ್ ನಿರ್ಮಾಣ ಸಂಬಂಧ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ ಜೊತೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಕಳೆದ ವರ್ಷ, ಎಪ್ರಿಲ್ ಮೇ ತಿಂಗಳಿನಲ್ಲಿ ಕೊರೋನ ಅಲೆ ಬಂತು, ಆಗ ಮಾಧ್ಯಮಗಳು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದವು. ಆದಾದ ಬಳಿಕ ಅಕ್ಟೋಬರ್, ನೆವೆಂಬರ್ ನಂತರ ಮಾಧ್ಯಮದವರು ಕೊರೋನ ವಿಚಾರವನ್ನು ಮರೆತರು. ಜನಪ್ರತಿನಿಧಿಗಳಾದ ನಾವು ಕೂಡಾ ವಿಳಂಬ ಮಾಡಿದೆವು. ಈ ನಡುವೆ ಅದು ಮತ್ತೆ ಬಂದು ಅಪ್ಪಳಿಸಿದೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಸಾಂಘಿಕವಾಗಿ ಕೊರೋನ ಹೊರಟು ಹೋಯಿತು ಎಂದುಕೊಂಡಿದ್ದೆವು. ಆದರೆ ಅದು ಮತ್ತೆ ಬಂದು ಅಪ್ಪಳಿಸಿದೆ. ಈಗ ಮಾಧ್ಯಮದವರು ಗಮನಹರಿಸುತ್ತಿದ್ದಾರೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದೇವೆ ಎಂದರು.

ಕೊರೋನ ಇರಲಿ ಬಿಡಲಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ನಾವೆಲ್ಲರೂ ಕೊರೋನ ಹೋಯಿತು ಎಂಬ ಭಾವನೆಯಲ್ಲಿ ಇದ್ದೆವು. ಆದರೆ ಅದು ವಾಪಸ್ ಬಂದಿದೆ‌. ಈ ಮೊದಲು ಯುಕೆ ಸ್ಪೇನ್, ಆಫ್ರಿಕನ ಸ್ಪೇನ್ ಎಂದು ಹೇಳಲಾಗುತ್ತಿತ್ತು, ಈಗ ಬೆಂಗಳೂರು ಸ್ಟ್ರೈನ್  ಎಂದು ಹೇಳಲಾಗುತ್ತಿದೆ. ಇದು ನಿರೀಕ್ಷೆಗೂ ಮೀರಿದಂತಹದು. ನೂರು ವರ್ಷಗಳ ಹಿಂದೆ ಬಂದಿದಂತ ರೋಗ, ಈಗ ಬಂದಿರುವುದರಿಂದ ನಾವು ಸ್ವಲ್ಪ ಗಲಿಬಿಲಿಗೊಳಗಾಗಿದ್ದೇವೆ ಎಂದು ಹೇಳಿದರು.

 ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ಆದೇಶ

ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ಆದೇಶ

 

ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ಆದೇಶ

ಹೊಸದಿಲ್ಲಿ: ಹತ್ರಸ್‌ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಗಾರಿಕೆಗೆಂದು ತೆರಳಿದ್ದ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ರನ್ನು ಯುಎಪಿಎ ಅಡಿ ಬಂಧಿಸಲಾಗಿತ್ತು. ಮಥುರಾ ಜೈಲಿನಲ್ಲಿ ಅವರು ಕೋವಿಡ್‌ ಪಾಸಿಟಿವ್‌ ಆಗಿದ್ದು, ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡಬೇಕೆಂದು ಅವರ ಪತ್ನಿ ರೈಹಾನತ್‌ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ ಕಪ್ಪನ್‌ ರನ್ನು ದಿಲ್ಲಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದೆ. 

ದಿಲ್ಲಿ ಸರಕಾರದ ಯಾವುದೇ ಆಸ್ಪತ್ರೆ ಅಥವಾ ಏಮ್ಸ್‌ ಗೆ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಚಿಕಿತ್ಸೆ ನೀಡಿದ ಬಳಿಕ ಮಥುರಾ ಜೈಲಿಗೆ ವಾಪಸಾಗಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸದ್ಯ ಈ ಆದೇಶದಿಂದ ಉತ್ತರಪ್ರದೇಶದ ಆದಿತ್ಯನಾಥ್‌ ಸರಕಾರಕ್ಕೆ ಹಿನ್ನಡೆಯಾಗಿದೆ.

Tuesday, 27 April 2021

 ಲಾಕ್‌ಡೌನ್‌ನಲ್ಲಿ ಬಡವರಿಗೆ ಆಹಾರ ಸಾಮಗ್ರಿ ಕಿಟ್ ನೀಡಿ: ರಮಾನಾಥ ರೈ ಒತ್ತಾಯ

ಲಾಕ್‌ಡೌನ್‌ನಲ್ಲಿ ಬಡವರಿಗೆ ಆಹಾರ ಸಾಮಗ್ರಿ ಕಿಟ್ ನೀಡಿ: ರಮಾನಾಥ ರೈ ಒತ್ತಾಯ

 

ಲಾಕ್‌ಡೌನ್‌ನಲ್ಲಿ ಬಡವರಿಗೆ ಆಹಾರ ಸಾಮಗ್ರಿ ಕಿಟ್ ನೀಡಿ: ರಮಾನಾಥ ರೈ ಒತ್ತಾಯ

ಮಂಗಳೂರು: ಕೊರೋನ 2ನೇ ಅಲೆ ತೀವ್ರವಾಗಿದ್ದು ರಾಜ್ಯದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಮುಂದುವರಿಯ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರ ಬಡವರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಒದಗಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಮಾಡುವುದು ಸುಲಭ. ಆದರೆ ಆ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಹಿತ ಕಾಯ್ದುಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿಯೂ ವಲಸೆ ಕಾರ್ಮಿಕರು ಬಹಳಷ್ಟು ಸಂಕಟ ಎದುರಿಸಿದ್ದಾರೆ. ದ.ಕ. ಜಿಲ್ಲೆಯ ಹಲವಾರು ಕಾರಣಗಳಿಗೆ ವಲಸೆ ಕಾರ್ಮಿಕರನ್ನು ಅವಲಂಬಿಸಿದೆ. ಇದೀಗ ಸರಕಾರ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪಂಚಾಯತ್‌ಗಳಲ್ಲಿ ವಲಸೆ ಕಾರ್ಮಿಕರಿಗೆ ಗಂಜಿ ಕೇಂದ್ರವನ್ನು ತೆರೆದು ಅವರ ಹಸಿವನ್ನು ನೀಗಿಸಬೇಕು ಎಂದು ಸಲಹೆ ನೀಡಿದರು.

ಲಾಕ್‌ಡೌನ್ ಅವಧಿಯಲ್ಲಿ ವಿದ್ಯುತ್, ನೀರು, ಟೆಲಿಫೋನ್ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ ರೈ, ಕೆಲವು ರಾಜ್ಯಗಳು ಈಗಾಗಲೇ ವಿದ್ಯುತ್ ಬಿಲ್ ಮನ್ನಾ ಮಾಡಿವೆ. ಹಾಗಾಗಿ ರಾಜ್ಯ ಸರಕಾರವೂ ಆ ಕ್ರಮ ಕೈಗೊಳ್ಳಬೇಕು. ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜನ ಸಾಮಾನ್ಯರಿಗೆ ಸಹಕಾರ ನೀಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ರಾಜ್ಯಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ತಾರತಮ್ಯ ಎಸಗಲಾಗುತ್ತಿರುವ ಆರೋಪವಿದೆ. ಪಿಎಂ ಕೇರ್‌ನಿಂದ ಎಲ್ಲ ರಾಜ್ಯಗಳಲ್ಲೂ ಆಮ್ಲಜನಕ ಘಟಕ ಸ್ಥಾಪಿಸುವ ಪ್ರಸ್ತಾವ ಇದೆಯಾದರೂ ಕರ್ನಾಟಕಕ್ಕೆ ಆ ಪ್ರಸ್ತಾವ ಇಲ್ಲಿಯವರೆಗೆ ಇಲ್ಲ ಎಂದು ಅವರು ಆಕ್ಷೇಪಿಸಿದರು.

ಪಿಎಂ ಕೇರ್‌ನಡಿ ಎಷ್ಟು ಹಣ ಸಂಗ್ರವಾಗಿದೆ, ಖರ್ಚಾಗಿದೆ ಎಂಬ ಬಗ್ಗೆ ಕೇಂದ್ರ ಸರಕಾರ ಶ್ವೇತ ಪತ್ರ ಹೊರಡಿಸಬೇಕು. ಮಾತ್ರವಲ್ಲದೆ. ಕಳೆದ ಬಾರಿ ಕೋವಿಡ್ ನಿರ್ವಹಣೆಗಾಗಿ ಕೇಂದ್ರ ಬಿಡುಗಡೆ ಮಾಡಿರುವ 20,000 ಕೋಟಿ ರೂ.ಗಳನ್ನು ಯಾವ ರೀತಿಯಲ್ಲಿ ಖರ್ಚು ಮಾಡಲಾಗಿದೆ ಎಂಬ ಬಗ್ಗೆಯೂ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವರು ಆಗ್ರಹಿಸಿದರು.

ರಾಜ್ಯದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ ಎಂದು ಆರೋಪಿಸಿದ ರಮಾನಾಥ ರೈ, ರಾಜ್ಯ ಸರಕಾರ ನಿಸ್ತೇಜವಾಗಿರುವುದರಿಂದಲೇ ರಾಜ್ಯಪಾಲರು ಸಭೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗೆ ಆರೋಗ್ಯ ಸಮಸ್ಯೆ ಇದ್ದಾಗ ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದರೂ ರಾಜ್ಯಪಾಲರು ಸಭೆ ನಡೆಸಿರುವುದು ಸರಕಾರ ಕ್ರಿಯಾಶೀಲವಾಗಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಸರಕಾರಕ್ಕೆ ಯಾವ ರೀತಿಯಲ್ಲಿ ಸಹಾಯ ನೀಡಬಹುದು ಎಂಬ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು, ಪಕ್ಷದ ವತಿಯಿಂದ ಯಾವ ರೀತಿಯಲ್ಲಿ ಜನಸಾಮಾನ್ಯರಿಗೆ ಸಹಕಾರ ನೀಡಲು ಸಾಧ್ಯವೋ ಅದನ್ನು ಮಾಡಲಾಗುವುದು ಎಂದು ರಮಾನಾಥ ರೈ ಹೇಳಿದರು.

ವ್ಯಾಕ್ಸಿನ್ ಕೊರತೆ- ರಾಜ್ಯ ಸರಕಾರ ಖರೀದಿಸಿ ಒದಗಿಸಲಿ:

ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಂಗಳೂರು ನಗರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಇಲ್ಲದೆ ನೂರಾರು ಜನರು ಹಿಂದಿರುಗುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ 15 ಲಕ್ಷ ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಈವರೆಗೆ ಲಸಿಕೆ ಪಡೆದವರ ಸಂಖ್ಯೆ ಶೇ.5ರಷ್ಟು ಮಾತ್ರ. ಅದರಲ್ಲೂ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ. ಹಾಗಿರುವಾಗ ಸರಕಾರ ಲಸಿಕೆ ಕೊರತೆ ಇದ್ದಾಗ ಕೇಂದ್ರದಿಂದ ಬರುವುದನ್ನು ಕಾಯದೆ ತಾನೇ ಖರೀದಿಸಿ ಜನರಿಗೆ ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮುಖಂಡರಾದ ಜೆ.ಆರ್.ಲೋಬೋ, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್, ವಿನಯರಾಜ್, ಅಪ್ಪಿ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಶುಭೋದಯ ಆಳ್ವ, ಸುಧೀರ್ ಶೆಟ್ಟಿ, ನವೀನ್ ಡಿಸೋಜ, ಸದಾಶಿವ ಶೆಟ್ಟಿ, ಮಹಾಬಲ ಮಾರ್ಲ, ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.

 ಕುಂಭ ಮೇಳದ ಅಂತಿಮ ಶಾಹಿ ಸ್ನಾನದ ಮರುದಿನ ಉತ್ತರಾಖಂಡದ ಹರಿದ್ವಾರದಲ್ಲಿ ಕರ್ಫ್ಯೂ

ಕುಂಭ ಮೇಳದ ಅಂತಿಮ ಶಾಹಿ ಸ್ನಾನದ ಮರುದಿನ ಉತ್ತರಾಖಂಡದ ಹರಿದ್ವಾರದಲ್ಲಿ ಕರ್ಫ್ಯೂ


 ಕುಂಭ ಮೇಳದ ಅಂತಿಮ ಶಾಹಿ ಸ್ನಾನದ ಮರುದಿನ ಉತ್ತರಾಖಂಡದ ಹರಿದ್ವಾರದಲ್ಲಿ ಕರ್ಫ್ಯೂ

ಡೆಹ್ರೂಡೂನ್: ದೇಶದಲ್ಲಿ ಕಳೆದ ಒಂದು ವಾರದಲ್ಲೇ ಕೋವಿಡ್ ನಿಂದಾಗಿ 17,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರೂ ಸಾವಿರಾರು ಭಕ್ತರು ಕೋವಿಡ್ ಪ್ರೊಟೊಕಾಲ್ ಧಿಕ್ಕರಿಸಿ ಮೆಗಾ ಕುಂಭದ ಅಂತಿಮ ಶಾಹಿಸ್ನಾನದಲ್ಲಿ ಭಾಗಿಯಾದ ಮರುದಿನ   ಉತ್ತರಾಖಂಡ ಹರಿದ್ವಾರದಲ್ಲಿ ಬುಧವಾರದಿಂದ ಕರ್ಫ್ಯೂ ಆದೇಶಿಸಲಾಗಿದೆ. 

ಕರ್ಫ್ಯೂ ಅವಧಿಯಲ್ಲಿ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗುವುದು. ಕರ್ಫ್ಯೂವನ್ನು ಹರಿದ್ವಾರ, ರೂರ್ಕಿ, ಲಕ್ಸಾರ್  ಹಾಗೂ ಭಗವಾನ್ ಪುರ ನಗರ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. 

ಕುಂಭ ಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎ.18ರಂದು ಮನವಿ ಮಾಡಿದ ಬಳಿಕ ಮಂಗಳವಾರ ನಾಲ್ಕರಲ್ಲಿ ಕೊನೆಯ ಶಾಹಿ ಸ್ನಾನವು ನೆರವೇರಿದೆ.

ಉತ್ತರಾಖಂಡದಲ್ಲಿ ಸೋಮವಾರ 5,000ಕ್ಕೂ ಅಧಿಕ ಕೋವಿಡ್-19 ಕೇಸ್ ಗಳು ವರದಿಯಾಗಿದ್ದು, ಇದು ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಟ ಪ್ರಕರಣವಾಗಿದೆ.

 ಕೋವಿಡ್ ಕರ್ಫ್ಯೂ: ಪುತ್ತೂರಿನಲ್ಲಿ ಜನಜೀವನ ಸಂಪೂರ್ಣ ಸ್ಥಗಿತ

ಕೋವಿಡ್ ಕರ್ಫ್ಯೂ: ಪುತ್ತೂರಿನಲ್ಲಿ ಜನಜೀವನ ಸಂಪೂರ್ಣ ಸ್ಥಗಿತ


 ಕೋವಿಡ್ ಕರ್ಫ್ಯೂ: ಪುತ್ತೂರಿನಲ್ಲಿ ಜನಜೀವನ ಸಂಪೂರ್ಣ ಸ್ಥಗಿತ

ಪುತ್ತೂರು: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರು ತಾಲೂಕಿನಾದ್ಯಂತ ಬೆಳಗ್ಗೆ 10 ಗಂಟೆಯ ಬಳಿಕ ಎಲ್ಲಾ ವ್ಯಾಪಾರ ಮತ್ತು ವಹಿವಾಟುಗಳ ಸಹಿತ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತು.

ಬೆಳಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಮಂಗಳವಾರವೇ ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ದ ಕಾರಣ ಬುಧವಾರ ಅಂಗಡಿಗಳ ಮುಂಭಾಗದಲ್ಲಿ ಜನದಟ್ಟಣೆ ಕಂಡು ಬಂದಿರಲಿಲ್ಲ. ಬಸ್ಸು ಸಂಚಾರ ಇಲ್ಲದ ಕಾರಣ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಕ್ಕೆ ಆಗಮಿಸಿಲ್ಲ. ನಗರದಲ್ಲಿ ಹೋಟೆಲ್‌ಗಳು ಬೆಳಗ್ಗೆ 6ರಿಂದ 10ರ ತನಕ ಮಾತ್ರ ತೆರೆದಿದ್ದು, ನಂತರ ಮುಚ್ಚಲ್ಪಟ್ಟಿತು. ಸರಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆಯ ಕಚೇರಿಗಳು ಎಂದಿನಂತೆ ತೆರೆದಿವೆ.

ನಗರದಲ್ಲಿ ಆಟೋರಿಕ್ಷಾ, ದ್ವಿಚಕ್ರ ವಾಹನ ಸೇರಿದಂತೆ ವಾಹನಗಳ ಓಡಾಟವು ಬೆಳಗ್ಗಿನ ವೇಳೆಯಲ್ಲಿ ವಿರಳವಾಗಿತ್ತು. 10 ಗಂಟೆಯ ಬಳಿಕ ಸಂಪೂರ್ಣ ನಿಲುಗಡೆಯಾಗಿತ್ತು. ಬಳಿಕ ಆಗಮಿಸಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಕಳುಹಿಸುತ್ತಿದ್ದರು. 10 ಗಂಟೆಯ ಬಳಿಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಿತ್ತು.

ಸರಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ: ಸಿದ್ದರಾಮಯ್ಯ ಆರೋಪ

ಸರಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ: ಸಿದ್ದರಾಮಯ್ಯ ಆರೋಪ


ಸರಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು, ಎ.27: ಕೋವಿಡ್ ಎರಡನೆ ಅಲೆ ಎಷ್ಟು ಭೀಕರವಾಗಿರುತ್ತದೆ ಮತ್ತು ಇದಕ್ಕೆ ತಕ್ಕಂತೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ತಜ್ಞರ ಸಮಿತಿ 2020 ನವೆಂಬರ್ 30ರಂದೆ ಸರಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದೇ ಇಷ್ಟೆಲ್ಲಾ ಸಾವು, ನೋವು, ಸಂಕಟ, ಕಣ್ಣೀರಿಗೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತ್ತೊಂದು ಕಡೆ ಕೇಂದ್ರ ಸರಕಾರ ಇದೇ ರೀತಿಯ ಬೇಜವಾಬ್ದಾರಿಯಿಂದ ವರ್ತಿಸಿತು. ಎರಡನೇ ಅಲೆ ಜನವರಿ ಬಳಿಕ ಬರುತ್ತದೆ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಗೊತ್ತಿತ್ತು. ಆದರೂ ಕೇಂದ್ರ ಸರಕಾರ ಐದು ರಾಜ್ಯಗಳ ಚುನಾವಣೆ ಘೋಷಿಸಿತು. ಕುಂಬಮೇಳ ನಡೆಯುವುದಕ್ಕೂ ಅವಕಾಶ ನೀಡಿತು ಎಂದು ಟೀಕಿಸಿದರು.

ಇತರೆ ದೇಶಗಳಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಉಂಟಾದ ಸ್ಥಿತಿ ಗೊತ್ತಿದ್ದೂ ಕೇಂದ್ರ ಸರಕಾರ ಸಂಪೂರ್ಣ ಮೈಮರೆಯಿತು. 2020 ಡಿಸೆಂಬರ್ ನಲ್ಲಿ 2021ರ ಜನವರಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೇಂದ್ರ ಸರಕಾರ ಎಪ್ರಿಲ್ ಕೊನೆಯಲ್ಲಿ ತೆಗೆದುಕೊಳ್ಳುತ್ತಿದೆ. ಅದೂ ದೇಶದ ಕೋಟ್ಯಂತರ ಜನರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಲು ಶುರು ಮಾಡಿದ ಬಳಿಕ ಈಗ ತುರ್ತು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಪರಮ ನಿರ್ಲಕ್ಷ್ಯದ ಕಾರಣಕ್ಕೇ ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡರು. ಲಕ್ಷಾಂತರ ಮಂದಿ ಕನಿಷ್ಠ ಆರೋಗ್ಯ ಸವಲತ್ತುಗಳು, ಜೀವರಕ್ಷಕ ಔಷಧಿಗಳು ಸಿಗದೆ ಸಾವು ಬದುಕಿನ ನಡುವೆ ಸೆಣೆಸುತ್ತಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತೀ ದಿನ ದೇಶದಲ್ಲಿ 3.5 ಲಕ್ಷದಷ್ಟು ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಆದರೆ ತಜ್ಞ ವೈದ್ಯ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ ಸೋಂಕಿತರ ಪ್ರಮಾಣ ಇನ್ನೂ ಐದು ಪಟ್ಟು ಹೆಚ್ಚಿದೆ. ಕೋವಿಡ್ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಕಡಿಮೆ ಇದೆ. ಹೀಗಾಗಿ ಈಗಿರುವುದಕ್ಕಿಂತ ಐದು ಪಟ್ಟು ಹೆಚ್ಚು ಸೋಂಕಿತರು ಇರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಸರಕಾರ ಪಾರದರ್ಶಕವಾಗಿ ವರ್ತಿಸುತ್ತಿಲ್ಲ. ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ. ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ. ಸರಕಾರದ ಲೆಕ್ಕಕ್ಕೂ, ಬಿಬಿಎಂಪಿ ನೀಡುವ ಲೆಕ್ಕಕ್ಕೂ, ಅಂಕಿ-ಸಂಖ್ಯೆ ಇಲಾಖೆಯ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. ಈ ರೀತಿ ಸುಳ್ಳು ಲೆಕ್ಕ ಮತ್ತು ಪಾರದರ್ಶಕತೆ ಇಲ್ಲದೆ ಸರಕಾರ ತನ್ನ ಲೋಪಗಳಿಗೆ ತೇಪೆ ಹಾಕಿಕೊಳ್ಳಲು ಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಪ್ರತೀ ಕ್ಷಣ ತಮ್ಮದಲ್ಲದ ತಪ್ಪಿಗೆ ಜನ ಸಾಯುತ್ತಿದ್ದಾರೆ. ಅದರಲ್ಲೂ 28, 30, 40 ವರ್ಷದವರೆಲ್ಲಾ ಸಾವನ್ನಪ್ಪುತ್ತಿರುವುದು ಬಹಳ ದುಃಖದ ಸಂಗತಿ. ಇಂಥಾ ಧಾರುಣ ಸಾವುಗಳು ಸಂಭವಿಸುತ್ತಿರುವ ಹೊತ್ತಲ್ಲೂ ದೇಶದ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವವನ್ನು ಕೊರೋನ ವಿಪತ್ತಿನಿಂದ ಭಾರತ ರಕ್ಷಿಸಿಬಿಟ್ಟಿತು ಎಂದು ಹೇಳಿಕೆ ನೀಡಿದರು. ಈಗ ವೈದ್ಯ ಸವಲತ್ತುಗಳಿಲ್ಲದೆ ವಿಶ್ವದಲ್ಲೆ ಅತೀ ಹೆಚ್ಚು ನರಳುತ್ತಿರುವ ದೇಶ ಭಾರತ ಆಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಎರಡನೇ ಅಲೆ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, “ಮಹಾಕುಂಬಕ್ಕೆ ಬರುತ್ತಿರುವವರಿಗೆ ಸ್ವಾಗತ” ಎಂದು ಟ್ವೀಟ್ ಮಾಡುತ್ತಾರೆ. ಎರಡನೇ ಅಲೆ ತಡೆಗಟ್ಟಲು ಕನಿಷ್ಠ ಸಿದ್ಧತೆಗಳನ್ನೂ ಮಾಡದ ಪ್ರಧಾನಿ ಅವರು ಹತ್ತಾರು ಚುನಾವಣಾ ರ್ಯಾಲಿಗಳನ್ನು ನಡೆಸಿದರು. ಸಾಲದ್ದಕ್ಕೆ “ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ನಾನು ನೋಡಿಯೇ ಇಲ್ಲ” ಎಂದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಇದೆಲ್ಲಾ ದೇಶದ ಪ್ರಧಾನಿ ವರ್ತಿಸುವ ರೀತಿಯಾ? ಹಾಗೆಯೇ ಉತ್ತರಾಖಂಡದ ಮುಖ್ಯಮಂತ್ರಿ, “ಗಂಗಾಮಾತೆ ಆಶೀರ್ವಾದದಿಂದ ಕೊರೋನವೇ ಇಲ್ಲ. ಕೊರೋನ ಹೊರಟು ಹೋಗಿದೆ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು ಎಂದು ಅವರು ತಿಳಿಸಿದರು.

ಆಕ್ಸಿಜನ್, ವೆಂಟಿಲೇಟರ್, ಹಾಸಿಗೆಗಳು, ಆಸ್ಪತ್ರೆಗಳು, ಔಷಧಗಳು, ಲಸಿಕೆ, ರೆಮ್‍ಡಿಸಿವಿರ್ ಚುಚ್ಚುಮದ್ದು ಇಲ್ಲದೆ ದೇಶದ ಜನ ಸಾಯುವ ಹೊತ್ತಲ್ಲೂ ಬಿಜೆಪಿ ಮುಖ್ಯಮಂತ್ರಿಗಳು, ಪ್ರಧಾನಿ, ಕೇಂದ್ರ ಸಚಿವರು ಅನಾಗರಿಕ, ಅಮಾನವೀಯ ಹೇಳಿಕೆಗಳಿಗೆ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್-19 ಮೊದಲ ಅಲೆ 2020ರ ಅಕ್ಟೋಬರ್, ನವೆಂಬರ್ ವೇಳೆಗೆ ಮುಗಿದಿತ್ತು. ಎರಡನೇ ಅಲೆ 2021ರ ಆರಂಭದಲ್ಲೇ ಅಪ್ಪಳಿಸುತ್ತದೆ ಎನ್ನುವುದೂ ಗೊತ್ತಿತ್ತು. ಆದರೆ ಇಲ್ಲಿಯವರೆಗೂ ದೇಶದ ಜನಕ್ಕೆ ಅಗತ್ಯವಾದಷ್ಟು ಲಸಿಕೆ ಲಭ್ಯವಿಲ್ಲ. 2020ರ ಅಕ್ಟೋಬರ್ ನಲ್ಲೇ ಲಸಿಕೆ ಸಿದ್ದಪಡಿಸಲು ಗುತ್ತಿಗೆ ಕರೆಯಲಾಗಿತ್ತು. ಆದರೆ ಆರು ತಿಂಗಳು ಮುಗಿದರೂ ಇಲ್ಲಿಯವರೆಗೂ ದೇಶದ ಜನಕ್ಕೆ ಲಸಿಕೆ ಸಿಗುತ್ತಿಲ್ಲ ಎಂದು ಅವರು ದೂರಿದರು.

ಮೊದಲು 65 ವರ್ಷ ಮೇಲ್ಪಟ್ಟವರಿಗೆ ಎಂದರು, ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಎಂದರು. ಈಗ 28-30 ವರ್ಷದವರೆಲ್ಲಾ ಕೊರೋನಕ್ಕೆ ಬಲಿ ಆಗುವುದು ಹೆಚ್ಚಾಗುತ್ತಿದ್ದಂತೆ 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ ಎನ್ನುತ್ತಿದ್ದಾರೆ. ಲಸಿಕೆಯಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಾರತಮ್ಯ ನೀತಿ ಅನುಸರಿಸಿದ್ದು ಮಾತ್ರ ಅಕ್ಷಮ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣೆ ಇರುವ ರಾಜ್ಯಗಳಲ್ಲಿ, “ಪಕ್ಷ ಅಧಿಕಾರಕ್ಕೆ ಬಂದರೆ ಕೊರೋನ ಲಸಿಕೆ ಉಚಿತ” ಎಂದು ಭಾಷಣ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಮುಖಂಡರು ಈಗಾಗಲೇ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯಗಳ ಜನರಿಗೆ ಏಕೆ ಉಚಿತ ಲಸಿಕೆ ಕೊಡುತ್ತಿಲ್ಲ? ರಾಜ್ಯದ ಜನ ಏನು ತಪ್ಪು ಮಾಡಿದ್ದಾರೆ? ನಿಮಗೆ ಗೆಲ್ಲಿಸಿದ್ದೇ ತಪ್ಪಾಯಿತಾ? ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಸ್ಥಿತಿ ನಿಭಾಯಿಸಲಾಗದೆ ಕೈಚೆಲ್ಲಿರುವ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ಜನರನ್ನು ಕೋವಿಡ್‍ನಿಂದ ರಕ್ಷಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಇಂದು ಮತ್ತೊಂದು ಸುತ್ತಿನ ಸಭೆಯನ್ನು ಕಾಂಗ್ರೆಸ್ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜತೆ ನಡೆಸಲಾಯಿತು ಎಂದು ಅವರು ಹೇಳಿದರು.

ಈಗಾಗಲೇ ಕಾಂಗ್ರೆಸ್‍ನ ಹಾಲಿ-ಮಾಜಿ ಶಾಸಕರು, ಸಂಸದರು ಮತ್ತು ಇತರೆ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಲವು ರೀತಿಯ ಆರೋಗ್ಯ ನೆರವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯ ಕಾಂಗ್ರೆಸ್‍ನಿಂದ ದೊಡ್ಡದೊಂದು ವೈದ್ಯರ ಪಟ್ಟಿ ಸಿದ್ದಪಡಿಸಲಾಗಿದೆ. ಸೋಂಕಿತರಿಗೆ ಅಗತ್ಯ ನೆರವು ನೀಡುವುದು, ಸಲಹೆ ನೀಡುವುದು, ಚಿಕಿತ್ಸೆಗೆ ಮಾರ್ಗದರ್ಶನ ನೀಡುವುದೂ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದು, ರಕ್ತ ಪರೀಕ್ಷೆ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಇನ್ನಷ್ಟು ವೇಗವಾಗಿ, ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೆಲ್ಲರ ಜತೆಗೆ ರಾಜ್ಯದ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ಬದಲಿಗೆ ಲಾಕ್ ಡೌನ್ ಘೋಷಿಸಿ ದುಡಿಯುವ ವರ್ಗ ಮತ್ತು ಸಮುದಾಯಗಳನ್ನು ಹಸಿವಿಗೆ ದೂಡಿವೆ. ಇಲ್ಲಿಯವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶ್ರಮಿಕರಿಗೆ, ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಿಲ್ಲ. ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಿಸಿದ್ದ ಪ್ಯಾಕೇಜ್ ಸಮರ್ಪಕವಾಗಿ ಅಗತ್ಯವಿದ್ದವರಿಗೂ ತಲುಪಿಲ್ಲ. ಆದುದರಿಂದ, ಅವತ್ತೇ ದುಡಿದು ಅವತ್ತೇ ತಿನ್ನಬೇಕಾದ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿ ಜತೆಗೆ ಅವರ ಕೈಗೆ 10 ಸಾವಿರ ರೂಪಾಯಿ ಹಣ ಕೊಡಬೇಕು.


-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ


 ಸಾವಿನ ಸಂಖ್ಯೆಯ ಕುರಿತು ಚರ್ಚಿಸುವುದರಿಂದ ಮೃತಪಟ್ಟವರು ವಾಪಸ್‌ ಬರುವುದಿಲ್ಲ ಎಂದ ಹರ್ಯಾಣ ಮುಖ್ಯಮಂತ್ರಿ

ಸಾವಿನ ಸಂಖ್ಯೆಯ ಕುರಿತು ಚರ್ಚಿಸುವುದರಿಂದ ಮೃತಪಟ್ಟವರು ವಾಪಸ್‌ ಬರುವುದಿಲ್ಲ ಎಂದ ಹರ್ಯಾಣ ಮುಖ್ಯಮಂತ್ರಿ


ಸಾವಿನ ಸಂಖ್ಯೆಯ ಕುರಿತು ಚರ್ಚಿಸುವುದರಿಂದ ಮೃತಪಟ್ಟವರು ವಾಪಸ್‌ ಬರುವುದಿಲ್ಲ ಎಂದ ಹರ್ಯಾಣ ಮುಖ್ಯಮಂತ್ರಿ

ಚಂಡಿಗಡ,ಎ.27: ಒಟ್ಟಾರೆ ಸಂಖ್ಯೆಯನ್ನು ಮರೆಮಾಚಲು ತನ್ನ ಸರಕಾರವು ಕೋವಿಡ್ ಸಂಬಂಧಿತ ಸಾವುಗಳ ಅಂಕಿಸಂಖ್ಯೆಗಳನ್ನು ತಿರುಚುತ್ತಿದೆ ಎಂಬ ಆರೋಪಗಳನ್ನು ಅರ್ಥಹೀನ ಎಂದು ತಳ್ಳಿಹಾಕಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು,ಈ ಸಂಕಷ್ಟದ ಸಮಯದಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.

‘ಇಂದು ನಾವಿರುವ ಸ್ಥಿತಿಯಲ್ಲಿ ಮಾಹಿತಿಗಳನ್ನು ತಿರುಚಲು ನಾವು ಬಯಸುತ್ತಿಲ್ಲ ’ಎಂದು ಸೋಮವಾರ ಹಿಸ್ಸಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಹಿಸ್ಸಾರ್ ಜಿಲ್ಲೆಯಲ್ಲಿ ಸೋಮವಾರ ಆಮ್ಲಜನಕ ಕೊರತೆಯಿಂದ ಸಂಭವಿಸಿದೆ ಎನ್ನಲಾಗಿರುವ ಐದು ಸಾವುಗಳನ್ನು ಪ್ರಸ್ತಾಪಿಸಿದ ಅವರು, ಲಭ್ಯ ಮೂಲಸೌಕರ್ಯಗಳ ಇತಿಮಿತಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಐವರು ಕೋವಿಡ್-19 ರೋಗಿಗಳು ಮೃತಪಟ್ಟಿದ್ದು,ಆಮ್ಲಜನಕದ ಕೊರತೆ ಸಾವುಗಳಿಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಆಡಳಿತವು ಮ್ಯಾಜ್ಟೀರಿಯಲ್ ತನಿಖೆಗೆ ಆದೇಶಿಸಿದೆ.

‘ಜನರು ಹೇಗೆ ಚೇತರಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ನಾವು ಗಮನ ಹರಿಸಬೇಕು. ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ. ಸಾವುಗಳ ಸಂಖ್ಯೆ ಕುರಿತು ಚರ್ಚೆಗಳಿಗೆ ಯಾವುದೇ ಅರ್ಥವಿಲ್ಲ ’ ಎಂದ ಖಟ್ಟರ್, ‘ಈ ಸಾಂಕ್ರಾಮಿಕದ ಬಗ್ಗೆ ನನಗೂ ಗೊತ್ತಿರಲಿಲ್ಲ,ನಿಮಗೂ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು,ನೀವು,ರೋಗಿಗಳು ಸೇರಿದಂತೆ ಎಲ್ಲರ ಸಹಕಾರದ ಅಗತ್ಯವಿದೆ ’ ಎಂದರು.

ಹರ್ಯಾಣದಲ್ಲಿ ಸೋಮವಾರ 11,504 ಹೊಸ ಸೋಂಕು ಪ್ರಕರಣಗಳು ಮತ್ತು 75 ಸಾವುಗಳು ವರದಿಯಾಗಿವೆ. ತುಲನಾತ್ಮಕವಾಗಿ ತಮ್ಮನ್ನು ಉತ್ತಮ ಸ್ಥಿತಿಯಲ್ಲಿ ತೋರಿಸಿಕೊಳ್ಳಲು ಹಲವಾರು ರಾಜ್ಯಗಳು ಸಾವುಗಳ ಸಂಖ್ಯೆಗಳನ್ನು ಕಡಿಮೆಯಾಗಿ ವರದಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.


 


 ವದಂತಿಗಳಿಗೆ ಕಿವಿಗೊಡಬೇಡಿ, ಎಲ್ಲ ಮುಸ್ಲಿಮರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಿ: ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ ಕರೆ

ವದಂತಿಗಳಿಗೆ ಕಿವಿಗೊಡಬೇಡಿ, ಎಲ್ಲ ಮುಸ್ಲಿಮರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಿ: ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ ಕರೆ


 ವದಂತಿಗಳಿಗೆ ಕಿವಿಗೊಡಬೇಡಿ, ಎಲ್ಲ ಮುಸ್ಲಿಮರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಿ: ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ ಕರೆ

ಬಿಜಾಪುರ: ಕೆಲವು ಮುಸ್ಲಿಮರು ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬುವುದರ ಕುರಿತಾದಂತೆ ಮಾತನಾಡಿದ ಅಹ್ಲೆ ಸುನ್ನತ್‌ ಜಮಾತ್‌ ಅಧ್ಯಕ್ಷ ಹಾಗೂ ಮುಸ್ಲಿಂ ವಿದ್ವಾಂಸ ಸೈಯದ್‌ ತನ್ವೀರ್‌ ಹಾಶ್ಮಿ, "ಎಲ್ಲರೂ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಮತ್ತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ಕರೆ ನೀಡಿದ್ದಾರೆ. 

"ಕೆಲವು ವ್ಯಕ್ತಿಗಳು ಕೋವಿಡ್‌ ಲಸಿಕೆಯ ಕುರಿತಾದಂತೆ ವದಂತಿಗಳನ್ನು ಹಬ್ಬುತ್ತಿದ್ದಾರೆ. ಈ ವದಂತಿಗಳಿಗೆ ಹಲವು ಮುಸಿಮರು ಬಲಿ ಬೀಳುತ್ತಿದ್ದಾರೆ" ಎಂದು ಅವರು ಹೇಳಿದರು.

"ವಿಜ್ಞಾನಿಗಳು ಮುಸ್ಲಿಮರಿಗೆ ಬೇರೆ, ಮುಸ್ಲಿಮೇತರರಿಗೆ ಬೇರೆ ಎಂಬಂತೆ ಲಸಿಕೆಗಳನ್ನು ತಯಾರಿಸಲಿಲ್ಲ. ಮುಸ್ಲಿಮರು ಲಸಿಕೆ ಹಾಕಿಸಿಕೊಳ್ಳದೆ ಇರಲಿ ಎಂಬ ಕಾರಣದಿಂದ ಯಾರೋ ಕಿಡಿಗೇಡಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಮ್ಮದೇ ಸಮುದಾಯದ ಹಲವು ಮಂದಿ ಈ ಕುರಿತಾದಂತೆ ವದಂತಿಗಳನ್ನು ಹಬ್ಬಿಸಿ ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ" ಎಂದು ಅವರು ಹೇಳಿದರು.

"ತಜ್ಞರ ಪ್ರಕಾರ, ಯಾರೆಲ್ಲಾ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆಯೋ, ಅವರಲ್ಲಿ ಬಹುತೇಕರಿಗೆ ಕೋವಿಡ್‌ ಸೋಂಕು ಉಂಟಾಗಿಲ್ಲ. ಒಂದು ವೇಳೆ ಲಸಿಕೆ ಪಡೆದ ಬಳಿಕವೂ ಸೋಂಕು ಕಂಡು ಬಂದರೆ ಅದು ತೀವ್ರ ಪ್ರಮಾಣದಲ್ಲಿರುವುದಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಎದುರಾಗುವುದಿಲ್ಲ. ಲಸಿಕೆ ಪಡೆದುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಜೀವ ಉಳಿಸುವುದಕ್ಕಿರುವ ಮಾರ್ಗ" ಎಂದು ವೈದ್ಯರು ಹೇಳಿಕೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

 ಭಾರತಕ್ಕೆ 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾಕ್ಕೆ ಕೃತಜ್ಞತೆ ಸಲ್ಲಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಭಾರತಕ್ಕೆ 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾಕ್ಕೆ ಕೃತಜ್ಞತೆ ಸಲ್ಲಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ


 ಭಾರತಕ್ಕೆ 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾಕ್ಕೆ ಕೃತಜ್ಞತೆ ಸಲ್ಲಿಸಿದ
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಭಾರತಕ್ಕೆ 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾದ ಪವಿತ್ರ ಹರಮೈನಿಗಳ ಉಸ್ತುವಾರಿ ಕಿಂಗ್ ಸಲ್ಮಾನುಬ್ನು ಅಬ್ದುಲ್ ಅಝೀಝ್ ಅಲ್ ಸಊದ್ ರವರಿಗೆ ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮರ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕೃತಜ್ಞತೆ ಸಲ್ಲಿಸಿದರು. 

ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮರ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕೃತಜ್ಞತೆ ಸಲ್ಲಿಸುತ್ತಾ ಕಳುಹಿಸಿದ ಪತ್ರವನ್ನು ಸೌದಿ ಅರೇಬಿಯಾದ ಪ್ರಮುಖ ದಿನ ಪತ್ರಿಕೆ "ಅಲ್ ರಿಯಾದ್" ಪ್ರಕಟಿಸಿ  ವರದಿ ಮಾಡಿದೆ.

 ಭಾರತದ ನೆರವಿಗೆ ಬಂದ ಅರಬ್ ರಾಷ್ಟ್ರ: 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾ

ಭಾರತದ ನೆರವಿಗೆ ಬಂದ ಅರಬ್ ರಾಷ್ಟ್ರ: 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾ

 

ಭಾರತದ ನೆರವಿಗೆ ಬಂದ ಅರಬ್ ರಾಷ್ಟ್ರ: 80 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಿದ ಸೌದಿ ಅರೇಬಿಯಾ  

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಭಾರತದಲ್ಲಿನ ಬಿಕ್ಕಟ್ಟನ್ನು ಗಮನಿಸಿ ಸೌದಿ ಸರಕಾರ ಭಾರತಕ್ಕೆ 80ಮೆಟ್ರಿಕ್ ಟನ್ ಆಕ್ಸಿಜನ್ ನ್ನು ಕಳುಹಿಸಿಕೊಟ್ಟಿದೆ.

ದಮ್ಮಾಮ್ ಬಂದರ್ ನಿಂದ ಹಡಗುಗಳ ಮೂಲಕ ಭಾರತಕ್ಕೆ ಆಕ್ಸಿಜನ್ ತುಂಬಿರುವ ಟ್ಯಾಂಕರ್ ಗಳನ್ನು ಕಳುಹಿಸಿಕೊಡಲಾಗಿದೆ.

ಭಾರತದ ಸ್ಥಿತಿಯನ್ನು ಕಂಡು ಆಮ್ಲಜನಕ ಟ್ಯಾಂಕ್‌ಗಳನ್ನು ಸಿಂಗಾಪುರದಿಂದ ವಿಮಾನದಲ್ಲಿ ಸಾಗಿಸಲಾಗಿದೆ.  ಯುಎಇ, ಇಯು, ರಷ್ಯಾ ಮತ್ತು ಸೌದಿ ಅರೇಬಿಯಾ, ಪಾಕಿಸ್ತಾನ ಭಾರತದ ನೆರವಿಗೆ ಬಂದಿದೆ.