Sunday, 14 March 2021

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಗೆ ನೆಟ್ಟಿಗರ ಫುಲ್ ಸಪೋರ್ಟ್ : #MEN too ಅಭಿಯಾನ ಶುರು..!


ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಗೆ ನೆಟ್ಟಿಗರ ಫುಲ್ ಸಪೋರ್ಟ್ : #MEN too ಅಭಿಯಾನ ಶುರು..!

ಬೆಂಗಳೂರು : ಮೇಕಪ್ ಆರ್ಟಿಸ್ಟ್ ಮಹಿಳೆಯೊಬ್ಬರ ಮುಖಕ್ಕೆ ಜೋಮ್ಯಾಟೋ ಡಿಲೆವರಿ ಬಾಯ್ ಪಂಚ್ ಮಾಡಿರೋದಾಗಿ, ಇತ್ತೀಚೆಗೆ ಬೆಂಗಳೂರಿನ ಮಹಿಳೆ ವಿಡಿಯೋ ಮಾಡಿ ಆರೋಪಿಸಿ ಕಣ್ಣೀರಿಟ್ಟಿದ್ದರು. ಆದ್ರೆ ಆರೋಪಿ ಎಂದು ಹೇಳಲಾಗಿರುವ ಕಾಮರಾಜ್ ಹೇಳಿಕೆಯಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೇ ನಾಟಕವಾಡ್ತಿದ್ದಾಲೆ ಎಂದು ಹೇಳಲಾಗ್ತಿದೆ. ಹೌದು ಮಹಿಳೆ ನನ್ನ ಮೇಲೆ ಹಲ್ಲೆ ನಡೆಸಲು ಶುರು ಮಾಡಿದರು ಆ ವೇಳೆ ನನ್ನ ಅವರೇ ತಮ್ಮ ಕೈನಲ್ಲಿದ್ದ ಉಂಗುರದಿಂದ ಏಟು ಮಾಡಿಕೊಂಡ್ರು ಎಂದಿದ್ದಾರೆ. ಇದರಿಂದಾಗಿ ಇದೀಗ ಮಹಿಳೆಯೇ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರಾ ಎಂಬ ಅನುಮಾನಗಳು ಮೂಡಿವೆ.

ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸದ್ಯ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವರು ಕಣ್ಣೀರು ಹಾಕಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು, ಬಹುತೇಕ ಎಲ್ಲರೂ ಕೂಡ ಕಾಮರಾಜ್ ಪರ ನಿಂತಿದ್ದಾರೆ. ಮಹಿಳೆಯದ್ದೇ ತಪ್ಪು ಎಂದು ವಾದಿಸೋಕೆ ಶುರು ಮಾಡಿದ್ದಾರೆ.

ಈ ನಡುವೆ ಕಾಮರಾಜ್ ಅವರನ್ನು ಬೆಂಬಲಿಸಿ ಟ್ವಿಟರ್ ನಲ್ಲಿ #MenToo ಅಭಿಯಾನ ಪ್ರಾರಂಭವಾಗಿದೆ. ಸುಳ್ಳು ಆರೋಪಗಳಿಂದ ಸಂಕಷ್ಟಕ್ಕೆ ಸಿಲುಕಿದ ಹಲವಾರು ವ್ಯಕ್ತಿಗಳ ಉದಾಹರಣೆ ನೀಡುವ ಪೋಸ್ಟ್ ಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್‍ ನಲ್ಲಿವೆ.

ಬೆಂಗಳೂರಿನ ಟ್ರಾಫಿಕ್ ನಡುವೆಯೂ ಕೇವಲ 15 ನಿಮಿಷ ತಡವಾಗಿ ಆಹಾರ ತಲುಪಿಸಿದ್ದಾನೆ. ಯುವತಿಯೇ ಈತನ ಮೇಲೆ ಹಲ್ಲೆಗೆ ಮುಂದಾಗಿ, ವಿಡಿಯೋದಲ್ಲಿ ಸುಳ್ಳು ಹೇಳಿದ್ದಾಳೆ. ಅಮಾಯಕನ ಮೇಲೆ ಆಕೆಯ ದೌರ್ಜನ್ಯ ಖಂಡನಾರ್ಹ. ಈ ಘಟನೆ ನಂತರ ಆಕೆ ಇನ್‍ಸ್ಟಾಗ್ರಾಂನಲ್ಲಿ 50 ಸಾವಿರ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾಳೆ. ಆದರೆ, ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದ ಕಾಮರಾಜ್ ಕೆಲಸ ಕಳೆದುಕೊಂಡಿದ್ದಾನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಜಾಮೀನು ಪಡೆದಿರುವ ಕಾಮರಾಜ್, ಮಹಿಳೆಯೇ ತಮ್ಮ ಉಂಗುರದಿಂದ ಮುಖಕ್ಕೆ ಹೊಡೆದು ಕೊಂಡಿದ್ದರು ಎಂದು ಹೇಳಿದ್ದಾರೆ.

ಇದೀಗ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳಲ್ಲಿ ಸತ್ಯಾಂಶದ ಬಗ್ಗೆ ಗಮನ ಹರಿಸಿ. ಒಂದು ವೇಳೆ ಡೆಲಿವರಿ ಬಾಯ್ ಕಾಮರಾಜ್ ನಿರಪರಾಧಿಯಾಗಿದ್ದರೆ, ಆ ಯುವತಿಗೆ ದಂಡ ಹಾಕಿ ಎಂದು ಜೊಮ್ಯಾಟೊಗೆ ಆಗ್ರಹಿಸಿದ್ದಾರೆ. ಅಲ್ಲದೇ ನನಗೆ ಡೆಲಿವರಿ ಬಾಯ್ ಅಮಾಯಕ , ನಿರಪರಾಧಿ ಎನ್ನಿಸುತ್ತೆ. ಅದನ್ನ ನಾನು ನಂಬುತ್ತೇನೆ ಕೂಡ.

ಇದು ಅಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ, ನಾನು ಹೇಗೆ ಸಹಾಯ ಮಾಡಬಹುದೆಂದು ದಯವಿಟ್ಟು ನನಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಮಹಿಳೆಯ ಮನೆಗೆ ನುಗ್ಗಿ ಆಕೆಯ ಮುಖಕ್ಕೆ ಪಂಚ್ ಮಾಡಿದ್ದು ಎಲ್ಲಾ ಶುದ್ಧ ಸುಳ್ಳು ಎಂದು ಕಾಮರಾಜ್ ಹೇಳಿಕೊಂಡಿದ್ದಾರೆ. ಹಿತೇಶಾ ನನ್ನ ಮೇಲೆ ಮೊದಲು ಹಲ್ಲೆ ಮಾಡಿದ್ದು, ಹಿಂದಿಯೊಲ್ಲಿ ಕೆಟ್ಟ ಪದಗಳಲ್ಲಿ ನನ್ನನ್ನ ಬೈದದ್ದೂ ಅಲ್ದೇ ಚಪ್ಪಳಿಯಲ್ಲಿ ನನಗೆ ಹೊಡೆದ್ರು. ನಾನು ಮಹಿಳೆ ಮನೆಗೆ ಊಟ ತೆಗೆದುಕೊಂಡು ಹೋಗಿ ಊಟ ಕೊಟ್ಟೆ. ಅವರು ದುಡ್ಡು ಕೊಡುವದಕ್ಕೆ ನಾನು ಕಾಯುತ್ತಿದ್ದೆ. ಹಾಗೆ ಟ್ರಾಫಿಕ್ ಕಾರಣದಿಂದಾಗಿ ಡಿಲೆವರಿ ತಡವಾಗಿದ್ದಕ್ಕೆ ನಾನು ಮಹಿಳೆಯ ಬಳಿ ಕ್ಷಮೆಯಾಚಿಸಿದೆ. ಆದ್ರೆ ಮಹಿಳೆಯು ನನ್ನ ಬಳಿ ದುರಹಂಕಾರದಿಂದ ರ್ಯಾಶ್ ಆಗಿ ಮಾತನಾಡಿದ್ರು. ಯಾಕೆ ತಡವಾಗಿ ಬಂದಿದ್ಯಾ ಎಂದು ಕೇಳಿದ್ರು. ಅದಕ್ಕೆ ನಾನು ಕಾರಣವನ್ನೂ ತಿಳಿಸಿದೆ. ಆದ್ರೂ ಮಹಿಳೆ ಕಾಂಪ್ರಮೈಸ್ ಆಗದೇ 45-50 ನಿಮಿಗಳ ಒಳಗೆ ಫುಡ್ ಡಿಲೆವರ್ ಆಗಬೇಕಿತ್ತು ಎಂದು ಸಿಕ್ಕಾಪಟ್ಟೆ ಕೋಪದಿಂದ ಮಾತನಾಡಿದ್ರು. ನಾನು 2 ವರ್ಷಗಳಿಂದ ಈ ಕೆಲಸದಲ್ಲಿದ್ದು, ಈ ರೀತಿಯಾಗಿ ಯಾವತ್ತು ಆಗಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮಹಿಳೆ ಆಹಾರವನ್ನ ತೆಗೆದುಕೊಂಡು ದುಡ್ಡು ಕೊಡಲು ನಿರಾಕರಿಸಿದ್ರು.

ಈ ವೇಳೆ ತಡವಾಗಿದ್ದಕ್ಕೆ ಫ್ರೀ ಆಗಿ ಆಹಾರ ನೀಡುವುದಕ್ಕೆ ಆಕೆ #ZOMATO @ZOMATO ಚಾರ್ಟ್ ಸಪೋರ್ಟ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಇದರಿಂದಾಗಿ ನನ್ನ ಕೆಲ ಹೋಗಬಹುದೆಂಬ ಆತಂಕದಲ್ಲಿ ನಾನು ಆಕೆಯ ಬಳಿ ದುಡ್ಡು ನೀಡುವಂತೆ ಬೇಡಿಕೊಂಡೆ. ಆದ್ರೆ ಆಗ ಆಕೆ ನನ್ನ ಗುಲಾಮ ಎಂದು ಕರೆದರು. ಅಲ್ದೇ ನನ್ನ ಮೇಲೆ ಕಿರುಚಾಡಿದರು. ನಂತರ ಆಕೆಯೇ ಫುಡ್ ಕ್ಯಾನ್ಸಲ್ ಮಾಡಿದ್ದಾಗಿ ಕಂಪನಿ ಕಡೆಯಿಂದ ನನಗೆ ಮೆಸೇಜ್ ಬಂತು. ಹೀಗಾಗಿ ನಾನು ಡಿಲೆವರ್ ಮಾಡಿದ್ದ ಆಹಾರವನ್ನ ವಾಪಸ್ ಮಾಡುವಂತೆ ಹೇಳಿದೆ. ಆದ್ರೆ ಆಕೆ ವಾಪಸ್ ಕೊಡಲು ನಿರಾಕರಿಸಿದಳು. ನಂತರ ಮಹಿಳೆಯ ವರ್ತನೆ ನೋಡಿ ದುಡ್ಡು ಬೇಡ ಊಟವೂ ಬೇಡ ಅಂತ ವಾಪಸ್ ಆಗಲು ನಿರ್ಧರಿಸಿ ನಾನು ಹೊರೆಟಿದ್ದೆ. ಆದ್ರೆ ನಾನು ಲಿಫ್ಟ್ ಕಡೆಗೆ ಹೊರಟಾಗ ಮಹಿಳೆಗೆ ನನ್ನಗೆ ತುಂಬಾನೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದರು. ಸಡನ್ ಆಗಿ ನನ್ನ ಮೇಲೆ ಚಪ್ಪಲಿಗಳನ್ನ ಎಸೆದರು.

ನನ್ನ ಮೇಲೆ ಹಲ್ಲೆ ಮಾಡಲು ಶುರುಮಾಡಿದ್ರು. ಈ ವೇಳೆ ನಾನು ನನ್ನ ರಕ್ಷಣೆಗಾಗಿ ನನ್ನ ಕೈಗಳನ್ನ ಅಡ್ಡ ಇಟ್ಟೆ. ಆಗ ಮಹಿಳೆ ನನ್ನನ್ನ ತಳ್ಳಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಆಕೆಯ ಉಂಗುರ ಆಕೆಯ ಮೂಗಿಗೆ ತಾಕಿತು ಇದರಿಂದಲೇ ಆಕೆಯ ಮೂಗಿನಿಂದ ರಕ್ತ ಬರೋದಕ್ಕೆ ಶುರುವಾಯ್ತು. ಇನ್ನೂ ಆಕೆಯ ಮೂಗಿನ ಮೇಲೆ ಆಗಿರುವ ಗಾಯ ಪಂಚ್ ಮಾಡಿರೋದರಿಂದ ಆಗಿದ್ದಲ್ಲ ಅನ್ನೋದನ್ನ ಯಾರು ಬೇಕಾದ್ರು ನೋಡಿದ ತಕ್ಷಣವೇ ಹೇಳಬಹುದು. ಅಲ್ಲದೇ ನಾನು ಉಂಗುರವನ್ನ ಧರಿಸುವುದೂ ಇಲ್ಲ ಎಂದಿದ್ದಾರೆ. ಇಷ್ಟಾದ ಮೇಲೆ ಮಹಿಳೆ ನನಗೆ ಲಿಫ್ಟ್ ನಿಂದಲೂ ಹೋಗೋಕೆ ಬಿಟ್ಟಿಲ್ಲ. ನಾನು ನಡೆದುಕೊಂಡೇ ಕೆಳಗೆ ಓಡಿಕೊಂಡು ಹೋದೆ. ಈ ಬಗ್ಗೆ ನಾನು ZOMATO ಮೇಲಾಧಿಕಾರಿಗಳ ಜೊತೆಗೆ ಮಾತನಾಡಿದೆ. ಅವರ ಬಳಿ ನಡೆದಿದ್ದೆಲ್ಲವನ್ನೂ ನಾನು ತಿಳಿಸಿದೆ. ಅವರು ಕೂಡ ಈ ಬಗ್ಗೆ ಸರಿಯಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ರು ಎಂದಿದ್ದಾರೆ. ಅಲ್ಲದೇ ಅಲ್ಲಿ ಸಿಸಿ ಕ್ಯಾಮೆರಾಗಳು ಇರಲಿಲ್ಲ. ಇದರಿಂದ ಆಕೆ ಮಾಡಿರುವ ಆರೋಪ ಸುಳ್ಳು ಎಂಬುದನ್ನ ಸಾಬೀತು ಮಾಡಲು ಸ್ವಲ್ಪ ಕಷ್ಟವಾಗ್ತಿದೆ ಎಂದಿದ್ಧಾರೆ.

ಬೆಂಗಳೂರಿನ ಹಿತೇಶಾ ತನ್ನ ಇನ್ಸ್ಟಾಗ್ರಾಂನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, ಹಲ್ಲೆ ನಡೆದ ನಂತರ ರಸ್ತ ಸ್ರಾವವಾಗುತ್ತಿರುವುದನ್ನ ಮೊದಲಿಗೆ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಬಗ್ಗೆ ಹಿತೇಶಾ ವಿವರಣೆ ನೀಡುತ್ತಾ ಹೇಗೆ ನನ್ನ ಮೇಲೆ ಹಲ್ಲೆ ನಡೆದಿದೆ ನೋಡಿ ಎಂದು ಕಣ್ಣೀರಿಟ್ಟಿದ್ದಾರೆ. ನಂತರ ಫಸ್ಟ್ ಎಡ್ ಮಾಡಿಕೊಂಡು ವಿಡಿಯೋದಲ್ಲಿ ಘಟನೆ ಬಗ್ಗೆ ವಿವರಣೆ ನೀಡಿರುವ ಮಹಿಳೆ ಫುಡ್ ಆರ್ಡರ್ ಮಾಡಿದ ನಂತರ ಅದನ್ನ ಡಿಲೆವರಿ ಮಾಡಲು ತಡವಾಗಿದೆ. ಹೀಗಾಗಿ ಈ ಬಗ್ಗೆ ಕಂಪನಿಯ ಕಸ್ಟಮರ್ ಕೇರ್ ಜೊತೆಗೆ ನಾನು ಮಾತನಾಡಿದೆ. ತಡವಾಗಿ ಆರ್ಡರ್ ತಲುಪಿಸುತ್ತಿದ್ದೀರಾ ಹಾಗಾದ್ರೆ ಕಂಪನಿಯೇ ಹೇಳಿರೋ ಹಾಗೆ ಫುಡ್ ಅನ್ನ ಫ್ರೀ ಆಗಿ ಡಿಲೆವರ್ ಮಾಡಿ ಎಂದು ಕೇಳಿಕೊಂಡೆ. ಆದ್ರೆ ಅಷ್ಟರಲ್ಲೇ ಮನೆ ಬಾಗಲಿಗೆ ಬಂದ ಡಿಲೆವರ್ ಬಾಯ್ ಸಿಟ್ಟಿನಿಂದ ಮಾತನಾಡಲು ಆರಂಭಿಸಿದ. ಆದ್ರೆ ನನಗೆ ಆರ್ಡರ್ ಬೇಡ. ತಡವಾಗಿದೆ ಎಂದು ವಾದಿಸಿದೆ. ನನಗೆ ಆರ್ಡರ್ ಬೇಡ ಕ್ಯಾನ್ಸಲ್ ಮಾಡುವುದಾಗಿ ಹೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆತ ಏಕಾಏಕಿ ನನ್ನ ಮುಖದ ಮೇಲೆ ಗುದ್ದಿ ದಾಳಿ ನಡೆಸಿದ ಎಂದು ಹೇಳುತ್ತಾ ಕಣ್ಣಿರಿಟ್ಟಿದ್ದಾರೆ.

ಆದ್ರೆ ಯಾರು ಸುಳ್ಳು ಹೇಳ್ತಿದ್ದಾರೆ. ಯಾರು ನಿಜ ಹೇಳ್ತಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಕಾಮರಾಜ್ ನನ್ನ ತಾತ್ಮಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ.


SHARE THIS

Author:

0 التعليقات: