Sunday, 28 March 2021

`CD ಪ್ರಕರಣ':`ಸಿಡಿ ಲೇಡಿ' ಇಂದು ಕೋರ್ಟ್ ಮುಂದೆ ಹಾಜರು?


`CD ಪ್ರಕರಣ':`ಸಿಡಿ ಲೇಡಿ' ಇಂದು ಕೋರ್ಟ್ ಮುಂದೆ ಹಾಜರು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗ್ತಿರುವ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಹೊಸ ಟ್ವಿಸ್ಟ್‌ʼಗಳು ಸಿಗ್ತಿದೆ. ಈ ನಡುವೆ ಇಂದು ಸಿ.ಡಿ ಯುವತಿ ನ್ಯಾಯಾಲಯದ ಮುಂದೆ ಹಾಜರಾಗ್ತಾಳೆ ಅಂತಾ ಯುವತಿಯ ಪರ ವಕೀಲ ಕೆಎನ್‌ ಜಗದೀಶ್‌ ವಕೀಲ ತಿಳಿಸಿದ್ದಾರೆ.

ಫೇಸ್‌ಬುಕ್‌ ನಲ್ಲಿ ಈ ಕುರಿತು ಮಾತನಾಡಿರುವ ವಕೀಲ ಜಗದೀಶ್‌, ' ಸಿಡಿ ಲೇಡಿ ಪೋಷಕರು ತಮ್ಮ ಮಗಳ ಪರವಾಗಿ ನಿಲ್ಲಬೇಕು. ಯಾಕಂದ್ರೆ, ಮಗಳಿಗೆ ಅನ್ಯಾಯವಾಗಿದೆ. ನಾವು ಅಂದುಕೊಂಡಂತೆ ಆದ್ರೆ, ಸೋಮವಾರ ಆಕೆ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಇನ್ನು ಈ ಪ್ರಕರಣ ದಾಖಲಾದ ನಂತ್ರ ಪೋಷಕರಿಗೆ ಸೆಕ್ಯೂರಿಟಿ ಕೊಡಿ ಅಂದ್ರೆ ಯಾರನ್ನೂ ಬೇಟಿ ಮಾಡದೇ ಎಸ್‌ಐಟಿ ಪೊಲೀಸರು ವಾಪಸ್ ಕಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ. ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಅನಿಸ್ತಿದೆ' ಎಂದು ಹೇಳಿದ್ದಾರೆ.

ಯುವತಿಗೆ ಎಸ್ ಐಟಿ ಮೇಲೆ ನಂಬಿಕೆ ಇಲ್ಲ. ಈಗಾಗಲೇ ಆಕೆಯ ಪೋಷಕರು, ಸಹೋದರರಿಗೆ ಬ್ಲ್ಯಾಕ್ ಮೇಲ್ ಮಾಡಿ ಸುಳ್ಳು ಹೇಳಿಕೆ ಕೊಡಿಸಿದ್ದಾರೆ. ಹೀಗಾಗಿ ಎಸ್ ಐಟಿ ಮುಂದೆ ಹಾಜರಾದರೆ, ತನಿಖಾಧಿಕಾರಿಗಳು ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ನನಗೆ ಎಸ್ ಐಟಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಘಟನೆಯ ಇಂಚಿಂಚೂ ಮಾಹಿತಿ ಹೇಳುತ್ತೇನೆ ಎಂದಿದ್ದಾರೆ.SHARE THIS

Author:

0 التعليقات: