Monday, 8 March 2021

`CD' ಬಿಡುಗಡೆ ಷಡ್ಯಂತ್ರ 4 ತಿಂಗಳ ಮೊದಲೇ ನನಗೆ ತಿಳಿದಿತ್ತು : ರಮೇಶ್ ಜಾರಕಿಹೊಳಿ

 

`CD' ಬಿಡುಗಡೆ ಷಡ್ಯಂತ್ರ 4 ತಿಂಗಳ ಮೊದಲೇ ನನಗೆ ತಿಳಿದಿತ್ತು : ರಮೇಶ್ ಜಾರಕಿಹೊಳಿ

ಬೆಂಗಳೂರು ; ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದು, ಈ ಸಿಡಿ ಬಗ್ಗೆ ನನಗೆ 4 ತಿಂಗಳು ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿಡಿಯೋದಲ್ಲಿರುವ ಯುವತಿಗೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ.ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಸಿಡಿಯೇ ನಕಲಿ. ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೋನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ಹೇಳಿದ್ದಾರೆ.


SHARE THIS

Author:

0 التعليقات: