Wednesday, 24 March 2021

ಆಧ್ಯಾತ್ಮಿಕ ಸಮ್ಮೇಳನದೊಂದಿಗೆ ತ್ವಾಹಿರ್ ತಂಙಳ್ ಉರೂಸ್ ಮುಬಾರಕಿಗೆ ವಿಜೃಂಭಣೆಯ ಸಮಾಪ್ತಿ

 

ಆಧ್ಯಾತ್ಮಿಕ ಸಮ್ಮೇಳನದೊಂದಿಗೆ ತ್ವಾಹಿರ್ ತಂಙಳ್ ಉರೂಸ್ ಮುಬಾರಕಿಗೆ ವಿಜೃಂಭಣೆಯ ಸಮಾಪ್ತಿ

 ಕಾಸರಗೋಡು : ಐದು ದಿನಗಳಲ್ಲಿ ಜನಸಾಗರ ಸೇರಿದ ಮುಹಿಮ್ಮಾತ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕಿಗೆ ಆಧ್ಯಾತ್ಮಿಕ ಸಮ್ಮೇಳನದೊಂದಿಗೆ ವಿಜೃಂಭಣೆಯಿಂದ ಸಮಾಪ್ತಿಯಾಯಿತು. ಇಡೀ ನಾಡಿಗೆಯೇ ಆಧ್ಯಾತ್ಮಿಕ ಪ್ರಭೆ ಬೀರಿದ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕ್, ಜ್ಞಾನ ಮಜ್ಲಿಸ್  ಗಳಿಂದಲೂ ಪ್ರಮುಖ ಪಂಡಿತರ ಸಾನಿಧ್ಯದಿಂದಲೂ ಪವಿತ್ರವಾಯಿತು. ಕರ್ಮ ರಂಗದಲ್ಲಿ ಮೂರು ದಶಕಗಳಿಗೆ ಪ್ರವೇಶಿಸುವ ಮುಹಿಮ್ಮಾತ್  ಸಂಸ್ಥೆಯ ಒಂದು ವರ್ಷ ಮುಂದುವರೆಯುವ ಮೂವತ್ತನೇ ವಾರ್ಷಿಕ  ಘೋಷಿಸಲಾಯಿತು.  ಸಯ್ಯಿದ್ ಅಲೀ ಬಾಫಕಿ ತಂಙಳರ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿದ ಸಮಾರೋಪ ಸಮ್ಮೇಳನ  ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರ ಅಧ್ಯಕ್ಷತೆಯಲ್ಲಿ  ಕೇರಳ ಮುಸ್ಲಿಂ ಜಮಾಅತ್ ಕಾಸರಗೋಡು ಜಿಲ್ಲಾ ಪ್ರೆಸಿಡೆಂಟ್ ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ  ಉದ್ಘಾಟಿಸಿದರು. ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಿದರು.

ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೊತ್, ಸಯ್ಯಿದ್ ಇಬ್ರಾಹೀಂ ಅಲ್ ಹಾದಿ ತಂಙಳ್ ಚೂರಿ, ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ, ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ , ಸಯ್ಯಿದ್ ಪಿ.ಎಸ್ ಆಟಕೋಯ ತಂಙಳ್ ಪಂಜಿಕ್ಕಲ್, ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಅಹ್ದಲ್ ತಂಙಳ್ ಕಣ್ಣವಂ, ಯು.ಪಿ.ಎಸ್ ತಂಙಳ್ ಅರ್ಲಡುಕ, ಸಯ್ಯಿದ್ ಮುಹಮ್ಮದ್ ಇಂಬಿಚ್ಚಿ ಕೋಯ ತಂಙಳ್ ಆದೂರ್, ಸಯ್ಯಿದ್ ಅಲವಿ ತಂಙಳ್ ಚೆಟ್ಟುಂಕುಝಿ, ಮೊಯ್ದು ಸಅದಿ ಚೇರೂರ್, ಮಜೀದ್ ಫೈಝಿ ಚೆರ್ಕಳ, ಕುಞ್ಞಿ ಮುಹಮ್ಮದ್ ಸಖಾಫಿ ಪಾವೂರ್, ಸಿ ಎನ್ ಅಬ್ದುಲ್ ಖಾದರ್ ಮಾಸ್ಟರ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಹಾಜಿ ಅಮೀರಲಿ ಚೂರಿ, ಸುಲೈಮಾನ್ ಕರಿವೆಲ್ಲೂರ್, ಪಿ ಬಿ ಬಶೀರ್ ಪುಳಿಕ್ಕೂರ್, ಎಂ ಅಂದುಞ್ಞಿ ಮೊಗರ್, ಉಮರ್ ಸಖಾಫಿ ಕರ್ನೂರ್, ಅಬೂಬಕರ್ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ, ಮೂಸ ಸಖಾಫಿ ಕಳತ್ತೂರ್, ಇಸ್ಮಾಯಿಲ್  ಸಅದಿ ಪಾರಪ್ಪಳ್ಳಿ , ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ, ಅಬ್ದುರ್ರಹ್ಮಾನ್ ಸಖಾಫಿ ಪೂತಪ್ಪಲಂ, ಸಿ.ಹೆಚ್ ಮಹ್ಮೂದ್ ಕುಞ್ಞಿ ಪಟ್ಲ, ಲಂಡನ್ ಮುಹಮ್ಮದ್ ಹಾಜಿ, ಪಾರಪ್ಪಳ್ಳಿ ಅಬ್ದುಲ್ ಖಾದರ್ ಹಾಜಿ, ಸುಲ್ತಾನ್ ಮುಹಮ್ಮದ್ ಹಾಜಿ ಮುಂತಾದ ಹಲವಾರು ಗಣ್ಯರು ಭಾಗವಹಿಸಿದರು.

ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಸಮಾರೋಪ ಪ್ರಭಾಷಣಕ್ಕೆ ಮತ್ತು ಪ್ರಾರ್ಥನೆಗೆ ನೇತೃತ್ವ ವಹಿಸಿದರು.

ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಸ್ವಾಗತ ಮತ್ತು ಅಬೂಬಕರ್ ಕಾಮಿಲ್ ಸಖಾಫಿ ಪಾವುರಡ್ಕ ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: