ರಾತ್ರಿ ಬೆಳಗಾಗೋದ್ರಲ್ಲಿ ಫುಟ್ಪಾತ್ ಮಂಗಮಾಯ.!
ನಮ್ಮ ದೇಶದಲ್ಲಿ ಕೆಲ ಮಂದಿ ಮಾಡುವ ಕಾರ್ಯಗಳು ವಿಶ್ವ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವಂತೆ ಇರುತ್ತೆ. ಮಾಲಿನ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ದೇಶದಲ್ಲಿ ಅನೇಕ ಕೃತ್ಯಗಳು ನಡೆದಿವೆ. ಹಾಗಂತ ಬೇರೆ ದೇಶಗಳಲ್ಲಿ ಏನೂ ನಡೆಯೋದೇ ಇಲ್ಲ ಎಂದೇನಲ್ಲ. ಇಂಗ್ಲೆಂಡ್ನ ರಸ್ತೆಯೊಂದರಲ್ಲಿ ಯಾರೋ ದುಷ್ಕರ್ಮಿಗಳು ಫುಟ್ಪಾತ್ನ್ನೇ ಕದ್ದುಕೊಂಡು ಹೋಗಿದ್ದಾರೆ..!
ಇಂಗ್ಲೆಂಡ್ನ ವೆಸ್ಟ್ ಸುಸೆಕ್ಸ್ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಫುಟ್ಪಾತ್ ಮೇಲೆ ಹಾಕಲಾಗಿದ್ದ ಟೈಲ್ಸ್ಗಳನ್ನ ಕಳ್ಳರು ಕದ್ದಿದ್ದಾರೆ. ರಾತ್ರಿ ಬೆಳಗಾಗೋವಷ್ಟರಲ್ಲಿ ಕಳ್ಳರು ಈ ಕೃತ್ಯವನ್ನ ಎಸಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳೀಯ ಸಿಸಿ ಟಿವಿಯನ್ನ ಪರಿಶೀಲಿಸುತ್ತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ತಿಳಿದ ನೆಟ್ಟಿಗರು ಕದಿಯೋಕೆ ಬೇರೆ ಏನೂ ಸಿಗಲಿಲ್ವಾ ಎಂದು ಕೇಳ್ತಿದ್ದಾರೆ.
0 التعليقات: