Tuesday, 9 March 2021

ನನ್​ ಗಾಡಿ ಮುಟ್ಟೋಕೆ ನೀನ್ಯಾರೆ!ಪಿಎಸ್​ಐಗೆ ಅವಾಜ್​ ಹಾಕಿದ ಯುವತಿ


ನನ್​ ಗಾಡಿ ಮುಟ್ಟೋಕೆ ನೀನ್ಯಾರೆ!ಪಿಎಸ್​ಐಗೆ ಅವಾಜ್​ ಹಾಕಿದ ಯುವತಿ

ಮಂಡ್ಯ: ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದ ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಪೊಲೀಸರೊಂದಿಗೆ ಯುವತಿ ರಂಪಾಟ ನಡೆಸಿದ್ದು, ಸಿಟ್ಟಿಗೆದ್ದ ಮಹಿಳಾ ಪಿಎಸ್​ಐ ಯುವತಿಗೆ ಕಪಾಳ ಮೋಕ್ಷ ಮಾಡಿರುವ ಹಾಗೂ ಏಕವಚನದಲ್ಲೇ ಪಿಎಸ್​ಐಗೆ ಯುವತಿ ಅವಾಜ್​ ಹಾಕಿರುವ ವಿಡಿಯೋ ವೈರಲ್​ ಆಗಿದೆ.

ಬೈಕ್ ಸವಾರರ ದಾಖಲಾತಿಗಳನ್ನು ಪೊಲೀಸರು ನಡೆಸುತ್ತಿದ್ದರು. ಈ ವೇಳೆ ಸ್ಕೂಟರ್​ನಲ್ಲಿ ಬಂದ ಯುವತಿಯನ್ನ ತಡೆದು ದಾಖಲಾತಿ ಪರಿಶೀಲನೆಗೆ ಪೊಲೀಸರು ಮುಂದಾದರು. 'ನನ್ ಸ್ಕೂಟರ್ ಅನ್ನ ಯಾಕ್ ಮುಟ್ಟುತ್ತಿದ್ದೀರಾ?' ಎಂದು ಪ್ರಶ್ನಿಸಿದ ಯುವತಿ, ಸ್ಕೂಟರ್ ಮೇಲೆ ಕುಳಿತು 'ನಾನ್ ಗಾಡಿಯನ್ನ ಯಾಕ್ ಕೊಡ್ಲಿ? ದಂಡ ಕಟ್ಬೇಕಾ ಕಟ್ತೀನಿ. ನನ್​ ಅತ್ರ ಕ್ಯಾಶ್​ ಇಲ್ಲ, ಗೂಗಲ್​ ಪೇ ಮಾಡ್ತೀನಿ' ಎಂದು ಆವಾಜ್ ಹಾಕಿದಳು. 'ಸ್ಕೂಟರ್​ನಿಂದ ಇಳಿಯಮ್ಮ, ನಿನ್ ಹೆಸರೇನು? ನಿಮ್ ತಂದೆ ಕರೆಸು.. ಠಾಣೆಗೆ ಬಾ' ಎಂದು ಮಹಿಳಾ ಪಿಎಸ್​ಐ ಸವಿತಾಗೌಡ ಪಾಟೀಲ್​ ಹೇಳಿದರು. ಇದಕ್ಕೆ ಉತ್ತರಿಸಿದ ಯುವತಿ, 'ಹೇ ನನ್ ತಂದೆ ಇಲ್ಲ. ಎಲ್ಲರನ್ನೂ ಕರೆಸಲಾಗಲ್ಲ' ಎನ್ನುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಮಹಿಳಾ ಪಿಎಸ್‌ಐ, 'ನನ್ನ ಹೇ ಅಂತೀಯಾ?' ಎಂದು ಯುವತಿಯ ಕಪಾಳಕ್ಕೆ ಭಾರಿಸಿದರು. ಈ ವೇಳೆ ಜೋರಾಗಿ ಕೂಗಾಡಿದ ಯುವತಿ, 'ಹೇ ಏನು? ಯಾರು ನೀನು? ನನ್ ಮೇಲೆ ಕೈ ಮಾಡೋಕೆ… ಇದನ್ನ ವಿಡಿಯೋ ಮಾಡ್ಲಾ? ಯಾವಳೇ.. ನೀನು ನನಗೆ ಹೊಡೆಯೋಕೆ.. ಹೇ.. ಹೆಂಗ್​ ಹೊಡ್ದೆ ಪಬ್ಲಿಕ್​ಗೆ? ಏನ್​ ರೈಟ್ಸ್​ ಇದೆ ನಿನಗೆ… ಎಂದು ಕೂಗಾಡಿದಳು. ಆಗ ಯುವತಿಗೆ ಮಹಿಳಾ ಪಿಎಸ್​ಐ ಮತ್ತೊಂದು ಮತ್ತೊಂದು ಏಟು ಕೊಟ್ಟರು. ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

ಸಿಟ್ಟಿಗೆದ್ದ ಯುವತಿ, 'ಹೇ.. ಏನೇ ಮಾಡ್ತಿಯಾ? ರಾಸ್ಕಲ್…' ಎಂದು ಮಹಿಳಾ ಪಿಎಸ್​ಐಗೆ ಅವಾಜ್ ಹಾಕಿದಳು. 'ಠಾಣೆಗೆ ಬಾ ನೀನು' ಎಂದು ಸ್ಕೂಟರ್ ತೆಗೆಸಿಕೊಂಡು ಪಿಎಸ್​ಐ ಹೋಗುವಾಗ 'ಅನ್ ಎಜುಕೇಟೆಡ್ ಬ್ರೂಟ್' ಎಂದು ಯುವತಿ ಬೈದಳು. 'ನಾನು ಎಜುಕೇಟೆಡ್. ನೀನೆ ಅನ್ ಎಜುಕೇಟೆಡ್' ಎನ್ನುತ್ತ ಪಿಎಸ್​ಐ ಹೋದರು.

'ನಾನು ಎಜುಕೇಟೆಡ್. ನೀನೆ ಅನ್ ಎಜುಕೇಟೆಡ್ ರೀತಿ ಬಿಹೇವ್​ ಮಾಡಿದ್ದು. ರೂಲ್ಸ್ ಗೊತ್ತಿಲ್ಲ… ಪೊಲೀಸ್ ಅಂತೆ ಇವಳು. ವಿಡಿಯೋ ಮಾಡಿಕೊಳ್ತಿದ್ದೀರಾ ತಾನೇ ಮಾಡಿಕೊಳ್ಳಿ. ಜಾಸ್ತಿ ಮಾತನಾಡಬಾರದು' ಎಂದಳು. ಪೊಲೀಸರೇ ಇದನ್ನ ವಿಡಿಯೋ ಮಾಡಿಕೊಂಡಿದ್ದರು. ಇದೀಗ ವಿಡಿಯೋ ವೈರಲ್ ಆಗಿದೆ. ಇನ್ನು ಯುವತಿ ಮೇಲೆ ಪಿಎಸ್​ಐ ಕೈ ಮಾಡಿದ್ದು ತಪ್ಪು ಎಂದು ಕೆಲವು ಕಮೆಂಟ್​ ಮಾಡುತ್ತಿದ್ದಾರೆ.SHARE THIS

Author:

0 التعليقات: