Friday, 26 March 2021

ಇನ್ನೂ ಹತ್ತು ವೀಡಿಯೋ ಬಿಟ್ಟರೂ ಹೇದರುವುದಿಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ


 ಇನ್ನೂ ಹತ್ತು ವೀಡಿಯೋ ಬಿಟ್ಟರೂ ಹೇದರುವುದಿಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು : ಇಂದು ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆ ಸಿಡಿಯಲ್ಲಿನ ಯುವತಿ ಇಂದು ಮೂರನೇ ವೀಡಿಯೋ ರಿಲೀಸ್ ಮಾಡಿದ್ದರು. ಇಂತಹ ವೀಡಿಯೋದಲ್ಲಿ ತನ್ನ ವಕೀಲರ ಮೂಲಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುವುದಾಗಿಯೂ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇನ್ನೂ ಹತ್ತು ವೀಡಿಯೋ ರಿಲೀಸ್ ಮಾಡಲಿ ಹೆದರುವುದಿಲ್ಲ. ಏಲ್ಲೋ ಕುಳಿತು ದೂರು ಕೊಡೋದಲ್ಲ. ನನಗೂ ಲಾಯರ್ ಇದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಆಕೆ ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ಅವರ ಭೇಟಿಗೆ ಈಗ ತೆರಳುತ್ತಿರುವುದಾಗಿ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಇದು ನನ್ನ ವಿರುದ್ಧದ ಷಡ್ಯಂತ್ರವಾಗಿದೆ. ಅವಳು ದೂರು ನೀಡಲಿ. ನಾನು ಎದುರಿಸೋದಕ್ಕೆ ರೆಡಿ ಆಗಿದ್ದೇನೆ. ನನ್ನ ಬಳಿಯೂ ವಕೀಲರಿದ್ದಾರೆ. ಏನೂ ಟೆನ್ಷನ್ ಮಾಡಿಕೊಳ್ಳೋ ಅಗತ್ಯವಿಲ್ಲ. ಇನ್ನೂ ಹತ್ತು ಇಂಥ ವೀಡಿಯೋ ಬಿಡಲಿ. ಕಂಪ್ಲೆಂಟ್ ಕೊಡೋ ಹಾಗಿದ್ರೆ ಮೊದಲೇ ಕೊಡಬೇಕಿತ್ತು. ಇನ್ನೂ ಬಹಳಷ್ಟು ವಿಷಗಳು ಹೊರಗೆ ಬರಬೇಕಿದೆ. ಕಾದು ನೋಡಿ ಎಂಬುದಾಗಿ ಹೇಳುವ ಮೂಲಕ, ಸಿಡಿ ಗ್ಯಾಂಗ್ ವಿರುದ್ಧ ಹರಿಹಾಯ್ದರು.


SHARE THIS

Author:

0 التعليقات: